Friday, December 26, 2014

ಆಧುನೀಕರಣ

ಖಾಲಿ ಕೊಡಕ್ಕೆ
ನಿಂತಲ್ಲಿ ನಿಲ್ಲಲಾಗದೆ
ಉರುಡುತ್ತಾ
ಸದ್ದು ಮಾಡೋ
ಬಯಕೆ

ಅರ್ಧ ತುಂಬಿದ
ಕೊಡವೋ
ಅರೆಬೆಂದ ಜ್ಞಾನ
ತುಳುಕಿಸುತ್ತಾ
ಪ್ರದರ್ಶಸೊ
ಆಸೆ

ತುಂಬಿದ ಕೊಡ
ಯಾರಿಗಾದರು
ನೀರಿನ ಅಗತ್ಯವೇ
ಎಂಬ ನಿರೀಕ್ಷಣೆ..
ನೀರುಣಿಸಿ
ಮತ್ತಷ್ಟು ನೀರ
ತುಂಬಿಕೊಳ್ಳೊ
ಉತ್ಕಟ ಇಚ್ಛೆ

ಈಗ ಕೊಡವಿದ್ದರೆ
ತಾನೆ
ಸದ್ದು ಮಾಡಕ್ಕೆ
ತುಳುಕಕ್ಕೆ
ತುಳುಕದಕ್ಕೆ

ಈಗೇನಿದ್ದರೂ ನಲ್ಲಿ
ಬೇಕಿದ್ದಲ್ಲಿ
ನಲ್ಲಿ ತಿರುಗಿಸಿ
ಬೇಕಾದಷ್ಟ ನೀರ
ಹಿಡಿದು
ಬಾಯಿ ಬಂದ್
ಮಾಡಿದರಾಯಿತು

ಹೆಚ್ಚೆಂದರೆ
ಆಗಾಗ
ನಲ್ಲಿಯಿಂದ
ತೊಟ್ಟಿಕ್ಕೊ ನೀರು
ತೊಟ ತೊಟ ಸದ್ದು!

No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...