Sunday, December 14, 2014

ಹುಡು-ಕಾಟ

ಹುಡುಕುತ್ತಿರುವೆ
ಅದೇನನ್ನೋ
ಏನೆಂಬುದು
ನನ್ನ ಅರಿವಿಗಿನ್ನೂ
ಬಂದಿಲ್ಲ

ಪ್ರಶ್ನಿಸಿಕೊಳ್ಳುವೆ
ಏನ ಹುಡುಕುತ್ತಿರುವೆ?
ಪ್ರೀತಿಯೇ, ಸ್ನೇಹವೇ
ಭಯ ಹೊಡೆದೋಡಿಸುವ
ಭದ್ರತೆಯೇ

ಮನ ತಣಿಸುವ
ನುಡಿಯೇ
ತನು ಬಯಸುವ
ಸ್ಪರ್ಶವೇ

ನೆಮ್ಮದಿಯ
ನಿಟ್ಟುಸಿರೇ
ತೃಪ್ತಿಯ
ಕಿರು ನಗೆಯೇ

ಏಕಾಂತವೇ
ಒಂಟಿತನವ
ಓಡಿಸುವ
ಆಪ್ತತೆಯೇ

ಧನವೇ
ಕನಕವೇ
ಯಶಸ್ಸೇ
ಹೆಸರೇ

ಸಾಧನೆಯ
ಹಾದಿಯೇ
ಆಧ್ಯಾತ್ಮದ
ಮಾರ್ಗವೇ

ಅಥವಾ
ಅರ್ಥವಿಲ್ಲದ
ಪ್ರಶ್ನೆಗಳೇ
ಉತ್ತರವಿಲ್ಲದ
ಪ್ರಶ್ನೆಗಳೇ

ನಿಲ್ಲದ ಈ
ಹುಡುಕಾಟ
ಬಲು ಕಾಟ



No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...