Friday, February 23, 2018

ಕನ್ನಡಿ ಆಟ

ನಾನೂ ಅರ್ಜುನ
ನೀನೂ ಅರ್ಜುನ
ಟಿಂಗ್ ಟಿಂಗ್ ಟಿಂಗ್

ಇಲ್ಲೂ ಅರ್ಜುನ
ಅಲ್ಲೂ ಅರ್ಜುನ
ಟಿಂಗ್ ಟಿಂಗ್ ಟಿಂಗ್

ನನ್ನ ಎಡಗೈ
ನಿನ್ನ ಬಲಗೈ
ನಿನ್ನ ಬಲಗಾಲ್
ನನ್ನ ಎಡಗಾಲ್
ಎಲ್ಲಾನೂ
ಉಲ್ಟಾ ಪುಲ್ಟಾ
ಟಿಂಗ್ ಟಿಂಗ್ ಟಿಂಗ್

ನಾ ಹೌದು ಅಂದ್ರೆ
ಹೌದು ಅಂತಿ
ಇಲ್ಲ ಅಂದ್ರೆ
ಇಲ್ಲ ಅಂತಿ
ನಾ ಮಾಡಿದ್ದೆಲ್ಲ
ನೀನು ಮಾಡ್ತಿ
ಟಿಂಗ್ ಟಿಂಗ್ ಟಿಂಗ್

ನನ್ನಯ ಪ್ರತಿ -
ಬಿಂಬ ನೀನು
ಕನ್ನಡಿ ಇದ್ರೆ
ಮಾತ್ರ ನೀನು
ನಿನ್ನ ನೋಡುತ
ದಿನವೂ ನಾನು
ಟಿಂಗ್ ಟಿಂಗ್ ಟಿಂಗ್



No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...