Friday, February 23, 2018

ತಿಂಡಿ ಹಾಡು

ತಿಂಡಿ ತಿಂಡಿ ತಿಂಡಿ
ನಮ್ಮ ಮನೆ ತಿಂಡಿ
ರುಚಿ ರುಚಿ ತಿಂಡಿ
healthy healthy ತಿಂಡಿ
ದಿನಕ್ಕೊಂದು ತಿಂಡಿ
ಏಳು ದಿನಕ್ಕೂ ತಿಂಡಿ 
ತಿಂಡಿ ತಿಂಡಿ ತಿಂಡಿ
ನಮ್ಮ ಮನೆ ತಿಂಡಿ
ರುಚಿ ರುಚಿ ತಿಂಡಿ

ದೋಸೆ ದೋಸೆ
ಚುಯ್ ಚುಯ್ ದೋಸೆ
ಚಟ್ನಿ ಪಲ್ಯದ್ ಜೊತೆ
ಬಿಸಿ ಬಿಸಿ ದೋಸೆ

ಇಡ್ಲಿ ಇಡ್ಲಿ
ಡುಮ್ಮು ಡುಮ್ಮು ಇಡ್ಲಿ
ಚಟ್ನಿ ಸಾಂಬಾರ್ ಜೊತೆ
ಪಟ್ಟಾಗಿ ಇಳಿಯೊ ಇಡ್ಲಿ

ಪೂರಿ ಪೂರಿ
ಉಪ್ ಉಪ್ ಪೂರಿ
ಸಾಗು ಜೊತೆ ಸೇರಿ
ಗುಳುಂ ಗುಳುಂ ಪೂರಿ

ಉಪ್ಪಿಟ್ಟು ಉಪ್ಪಿಟ್ಟು
ತುಪ್ಪ ಹಾಕಿದ್ ಉಪ್ಪಿಟ್ಟು
ಪುಟ್ಟ ಪುಟ್ಟ ತುತ್ತು
ತಿಂದ ನಮ್ಮ ಪುಟ್ಟು

ಚಪ್ ಚಪ್ ಚಪಾತಿ
ಚಪ್ಪರಿಸೋ ಚಪಾತಿ
ತುಪ್ಪ ಸಕ್ಕರೆ ಸುರುಳಿ
ಕಚ್ಚಿ ಖಾಲಿ ಮಾಡಿ

ಅವಲಕ್ಕಿ ಅವಲಕ್ಕಿ
ತರಾವರಿ ಅವಲಕ್ಕಿ
ಬಣ್ಣ ಬಣ್ಣದ ಅವಲಕ್ಕಿ
ಸಿಹಿ ಖಾರ ಅವಲಕ್ಕಿ

ಶಾವಿಗೆ ಶಾವಿಗೆ
ಕಡ್ಡಿ ಕಡ್ಡಿ ಶಾವಿಗೆ
ಅಕ್ಕಿ ಗೋಧಿ ಶಾವಿಗೆ
ತರಕಾರಿ ಶಾವಿಗೆ

ತಿಂಡಿ ತಿಂಡಿ ತಿಂಡಿ
ನಮ್ಮ ಮನೆ ತಿಂಡಿ
ರುಚಿ ರುಚಿ ತಿಂಡಿ
healthy healthy ತಿಂಡಿ
ದಿನಕ್ಕೊಂದು ತಿಂಡಿ
ಏಳು ದಿನಕ್ಕೂ ತಿಂಡಿ 
ತಿಂಡಿ ತಿಂಡಿ ತಿಂಡಿ
ನಮ್ಮ ಮನೆ ತಿಂಡಿ
ರುಚಿ ರುಚಿ ತಿಂಡಿ 

No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...