Wednesday, December 30, 2015

ಪಾತ್ರ

ಕೂತಲ್ಲಿಂದ
ಏಳಲ್ಲ ಆ ದಿನಕರ
ತಿರುಗುವದ
ನಿಲ್ಲಿಸಲ್ಲ
ಈ ವಸುಂಧರ

ವ್ಯತ್ಯಾಸ

ನಮ್ಮ
ಹಳ್ಳಿ ರಸ್ತೆಗಳು
ಕಂಡಿಲ್ಲ
ಡಾಂಬರು
ನಮ್ಮ
ಬೆಂಗಳೂರಿನ ರಸ್ತೆಗಳು
ಕಂಡೂ ಇಲ್ಲದಾಗಿದೆ
ಡಾಂಬರು

ಸುತ್ತಾಟ

ನನ್ನ
ಹಿಂದೆ ಮುಂದೆ
ಸುತ್ತುತ್ತಾನೆ
ಅವ
ನನ್ನ
ಪ್ರೀತಿಸುತ್ತಾನೆ
ಎಂದು
ಅರ್ಥವ?

Sunday, December 27, 2015

ನನ್ನ ಅಂತರಂಗ
ತೆರೆಸುವುದು
ರಂಗಶಂಕರ
ನನ್ನ ಹೊಟ್ಟೆ
ತುಂಬಿಸುವುದು
ಅಲ್ಲಿನ
ಉಪಹಾರ ಮಂದಿರ

Friday, December 25, 2015

ಘೋರ ಸತ್ಯ

ಗುಟ್ಟಾಗಿ
ಪ್ರೀತಿಸುತ್ತಿದ್ದೆ
ನಿನ್ನ ಪರಿಚಯಕ್ಕೆ ಮುನ್ನ
ಈಗ ಪ್ರೀತಿ ಸತ್ತಿದೆ..

ಎಣಿಕೆ

ನಕ್ಷತ್ರಗಳೇ
ನಿಮ್ಮ ಮೇಲೆ
ಸ್ಪರ್ಧೆಗಿಳಿದಿವೆ
ನಮ್ಮ ಬೆಂಗಳೂರಿನ
ರಸ್ತೆ ಗುಂಡಿಗಳು!
ಗಂಡ ಹೆಂಡಿರು
ಜಗಳ ಉಂಡು
ಮಲಗುವವರೆಗೆ
ಅತ್ತೆ ಸೊಸೆ
ಜಗಳ
ಮನೆ ಒಡೆಯುವವರೆಗೆ!

ಗುಟ್ಟು

ಎಲ್ಲ ಯಶಸ್ವಿ
ಗಂಡಸಿನ ಹಿಂದೆ
ಇರುತ್ತಾಳೆ
ಒಬ್ಬ ಮಹಿಳೆ
ನನ್ನ ಯಶಸ್ಸಿನ
ಹಿಂದೆಯೂ
ಇರುವಳೊಬ್ಬ ಮಹಿಳೆ
ಅದು ನಮ್ಮ ಕೆಲಸದವಳೆ!

Sunday, December 20, 2015

ಸೋರುತಿಹುದು
ಮನೆಯ ಮಾಡು
ಬೇಗ ಒಂದು
ಸ್ವಂತ ಮನೆಯ ಮಾಡು

ರಿಯಲ್ ಎಸ್ಟೇಟು

ತಲೆ ಮೇಲೆ
ಸೂರೊಂದಿರಲೆಂದು
ಕೊಂಡೆ ಅಪಾರ್ಟಮೆಂಟು
ಬಿಲ್ಡರು, ಬೇಗ ಬೇಗ
ಕಟ್ಟಿಸಿಕೊಂಡರು ಪೇಮೆಂಟು
ಐದು ವರ್ಷವಾದರೂ
ಪೊಸೆಷನ್ನ ಸುದ್ದಿಯಿಲ್ಲ
ಇತ್ತ ತಿಂಗಳೂ
ಹೋಗುತ್ತಿದೆ
ಇ.ಎಮ್.ಐ ಅಮೌಂಟು
ಜೊತೆಗೆ ಮನೆಯ ರೆಂಟು
ನಮ್ಮ ಗೋಳ
ಕೇಳ್ತಾ ಇಲ್ಲ ಗವರಮೆಂಟು!
ಇಲ್ಲವೇ ಇದಾಕ್ಕೆ
ಆಯಿಂಟ್ಮೆಂಟು?

Saturday, December 19, 2015

ಅಡ್ಜಸ್ಟ್ಮೆಂಟ್

ಸುಖವಾಗಿರಬೇಕೆಂದರೆ
ದಾಂಪತ್ಯ
ಅಳವಡಿಸಿಕೊಳ್ಳಬೇಕು
ಕೆಲವು ಪಥ್ಯ!

ಪ್ರಶ್ನೋತ್ತರ

ಸಾಫ್ಟ್ವೇರ್ ಇಂಜಿನಿಯರ?
ಪಗಾರ ಜೋರ?
ಎಷ್ಟು ಬರತ್ತೆ, ತಿಂಗಳಿಗೆ?
ಕೆದಕ್ತಾರೆ, ನಮ್ಮ ಜನ
ಊಟ,ಬಟ್ಟೆಗೆ ಆಗಿ
ಇ.ಎಮ್.ಐ. ಕಟ್ಟಕ್ಕೆ
ಸರಿಹೋಗತ್ತೆ!

ಜನ

ನಮ್ಮ ಜನ
ವಾಸನೆ ತಡೆಯಲಾಗದಿದ್ದರೂ
ಪ್ರಶ್ನಿಸುತ್ತಿಲ್ಲ ಸರ್ಕಾರವ
ಕಸ ಯಾಕೆ ತೆಗೆದಿಲ್ಲ
ಓಡಾಟಕ್ಕೆ ಕಷ್ಟವಾದರೂ
ಕೇಳುತ್ತಿಲ್ಲ
ರಸ್ತೆ ಗುಂಡಿ
ಯಾಕೆ ಮುಚ್ಚಿಲ್ಲ
ಯಾವಾಗ ಸಿಕ್ಕರೂ
ಮರಯದೇ ಕೇಳುವರೆನ್ನ
ಮದುವೆ ಯಾಕೆ ಆಗಿಲ್ಲ!

ಸಂಬಳ

ಮಿಂಚಂತೆ ಸುಳಿದು
ಗುಡುಗಂತೆ ಗರ್ಜಿಸಿ
ಮಳೆಯಂತೆ
ಸೋರಿಹೋಗುತ್ತೆ!

ವ್ಯತ್ಯಾಸ

ಮದುವೆಯ ಹೊಸತರಲ್ಲಿ
ನಾ ಹೇಳಿದ್ದೆಲ್ಲವನ್ನೂ
ಕೇಳುತ್ತಿದ್ದ
ಪತಿ
ಈಗ ಹೇಳಿದ್ದಕ್ಕೆಲ್ಲಾ
ಏಕೆಂದು
ಕೇಳುತಿರುವ!
ಹುಡುಗಿ ಮದುವೆಗೆ ಮುಂಚೆ
ಬೀಗಿದ್ದಳು
ಗಂಡು ಸಾಫ್ಟ್ವೇರ್ ಇಂಜಿನಿಯರು
ಮದುವೆಯ ನಂತರ
ಗೊಣಗುತ್ತಿದ್ದಾಳೆ
ಇವರಿಗೆ ಸಮಯವೇ ಇಲ್ಲ
ಬರಲು ನಿಯರು!

ಕಾರಣ

ಅವ ಒಪ್ಪುತ್ತಿಲ್ಲ
ಯಾವ ಹುಡುಗಿಯನೂ
ಮದುವೆಗೆ
ಹೆಣ್ಮಕ್ಕಲ್ಲಿ
ಆಸಕ್ತಿಯಿಲ್ಲ
ಅವನ್ ಗೆ!

ವರ

ಹುಡುಕುತ್ತಿದ್ದಾರೆ
ಹುಡುಗಿಯ ಅಪ್ಪ
ವರ
ಸಿಗುತ್ತಾನ ಯಾರಾದರು
ಬಕರ!

ಮುಖಾಮುಖಿ

ಮುಂಚೆ ಎಲ್ಲಾ
ಹುಡುಗ ಹುಡುಗಿ
ನೋಡುವುದೆಂದರೆ
ಕೇಸರೀಬಾತು ಉಪ್ಪಿಟ್ಟು
ಈಗೇನಿದ್ದರೂ
ಕಾಫಿ ಡೇನಲ್ಲಿ
ಬಿಲ್ಲು ಕೊಟ್ಟು!

ನಾರಿ

ನಾರಿ
ಮುನಿದರೆ ಮಾರಿ
ಗಂಡ ಹೆದರಿ
ಸ್ಥಳದಿಂದ ಪರಾರಿ

ದೀಪಾವಳಿ

ದೀಪಾವಳಿಯ ಮರುದಿನ
ಬಾಸು ಕೇಳಿದರು
ಹಬ್ಬ ಜೋರೇ?
ಹಬ್ಬಕ್ಕೆ ಹಿಂದಿನ ದಿನ
ಇಲ್ಲೆ ಹೊಡೆದಿರಲ್ಲ ಅಟಂ ಬಾಂಬು
ಬೇಕೆ ಹಬ್ಬ ಬೇರೇ?

Wednesday, October 14, 2015

ಪ್ರೀತಿ

ಅಲೆಗಳು ಉಕ್ಕಿ ಉಕ್ಕಿ
ಮೈಯ ನೆಕ್ಕಿ ನೆಕ್ಕಿ
ಉಪ್ಪು ನೀರಲಿ ತೊಳೆದು
ಕಲ್ಮಷಗಳ ಕಳೆದು
ಮನಸ
ನಿರ್ಮಲಗೊಳಿಸುವುದೇ
ಪ್ರೀತಿ

Wednesday, October 7, 2015

ವರ

ಇಷ್ಟದ್ದು
ನೆನಪಾಗೋದು
ವರ
ಇಷ್ಟವಿಲ್ಲದ್ದು
ನೆನಪಾಗದ್ದೂ
ಒಂದು
ವರ!

Sunday, September 27, 2015

ಸತ್ಯ

ಎಲ್ಲ ಸಂಬಂಧಗಳಲ್ಲಿ
ಪ್ರೀತಿಯಿಲ್ಲ
ಪ್ರೀತಿಗೆ
ಸಂಬಂಧಗಳ
ಅವಶ್ಯಕತೆಯಿಲ್ಲ!

ನನ್ನೊಳು ಹುಟ್ಟುವ
ದುಃಖಕೂ
ಮೂಡುವ ಆನಂದಕೂ
ನೀನೇ ಕಾರಣ
ಎಂಥಾ ವಿಚಿತ್ರ
ಈ ಮನ!

Wednesday, September 16, 2015

ಸಿಂಪಲ್ಲಾಗಿ ಗೌರಿ ಪೂಜೆ!

ವಿಧವಿಧ ದ್ರವ್ಯದಿ
ಜಳಕವ ಮಾಡಿಸಿ
ವಿವಿಧ ಆಭರಣ
ವಸ್ತ್ರದಿ ಸಿಂಗರಿಸಿ
ಸುಗಂಧ ಸಿಂಪಡಿಸಿ
ತರಾವರಿ ತಿಂಡಿ
ಹಣ್ಣುಗಳ ಉಣಿಸಿ
ಧೂಪದೀಪಗಳ
ಉರಿಸಿ
ನಿನ ಶಕ್ತಿ
ಕರುಣೆಯ ಪ್ರಶಂಸಿಸಿ
ಇತಿ ಗೌರಿ ವ್ರತ ಸಂಪೂರ್ಣಂ!

Friday, August 21, 2015

ಸಿಕ್ಕು

ಕೇಳಲು ಶಬ್ದವೋ ಶಬ್ದ
ನೋಡಲು ಮಾತ್ರ ಎಲ್ಲಾ ಸ್ತಬ್ದ
ಇದೇನಿದು ಮ್ಯಾಜಿಕ್ಕು
ಅದು ಬೆಂಗಳೂರಿನ ಟ್ರಾಫ಼ಿಕ್ಕು!

Wednesday, August 12, 2015

ಸರ್ವೀಸು

ತೊಂದರೆ ತಪ್ಪಿಸಲು
ಕಾಲಕಾಲಕ್ಕೆ ಮಾಡಿಸಬೇಕು
ಗಾಡಿ ಸರ್ವೀಸು
ಇಲ್ಲದಿದ್ದರೆ
'ಬಾಡಿ'ಗೆ ಬೇಕಾಗುತ್ತೆ
ಸರ್ವೀಸು!

Saturday, August 8, 2015

ಯಾವುದೋ ಗಿರಿಗೆ ಪ್ರಯಾಣ

ನಗಿಸುವುದು ಒಂದು ಕಲೆಯಾದರೆ, ನಗುವುದು ಒಂದು ಕಲೆ ಅನ್ನೋದು ನನ್ನ ಅಭಿಪ್ರಾಯ. ಎಲ್ಲರಿಗೂ ನಗಿಸಕ್ಕೆ ಬರೋಲ್ಲ ಹಾಗೇ ಎಲ್ಲರಿಗೂ ಹಾಸ್ಯ ಅರ್ಥ ಆಗಲ್ಲ.
ನಗಿಸುವುದರಲ್ಲಿ ನಮ್ಮ ಈ ಪುಟ್ಟ ಮಕ್ಕಳದ್ದು ಒಂದು ಕೈ ಮೇಲೇ ಅನ್ನಬಹುದು. ಈಗಿನ ಮಕ್ಕಳಿಗೆ ಬಲು ಬುದ್ಧಿ. ತಮ್ಮ ಜ್ಞಾನದಾಹ, ಕುತೂಹಲ ಹಾಗು ಮುಗ್ಧತೆ ಮಿಶ್ರಿತ ಸವಾಲುಗಳಿಂದ ದೊಡ್ಡವರ ಬೆವರನ್ನು ಸಲೀಸಾಗಿ ಇಳಿಸಬಲ್ಲ ಪುಟಾಣಿಗಿವರು. ಹಾಗೆ, ಅವರ ಮುಗ್ಧತೆಯ ಉತ್ತರಗಳು, ಉಚ್ಛಾರಗಳು ತಲೆತಲಾಂತರಗಳಿಂದ ದೊಡ್ಡವರನ್ನು ನಗಿಸುತ್ತಾ ಬಂದಿದೆ.
ನಮ್ಮ ನಿಮ್ಮ ಮನೆಯ ಪುಟ್ಟ ಪುಟ್ಟಿಯರು ನಮ್ಮೆಲ್ಲರನ್ನು ಹೇಗೆ ನಗಿಸುವರೆಂದು ಈ ಸರಣಿ ಪ್ರಸಂಗಗಳಲ್ಲಿ ನೋಡೋಣ ಬನ್ನಿ!
ಯುಗಾದಿಗೆ ಅಂತ ಮೈಸೂರಿಗೆ ಹೋಗಿದ್ದೆ. ಯುಗಾದಿಯಲ್ಲಿ ವ್ರತ ಗಿತ ಇಲ್ಲದೆ ಇದ್ದಿದ್ದರಿಂದ ಸ್ವಲ್ಪ ಸುತ್ತಾಡಕ್ಕು ಸಮಯ ಇತ್ತು. ನಾನು ಮತ್ತು ನನ್ನ ಕಜ಼ಿನ್, ಬೆಂಗಳೂರಿಂದ ಹೋಗ್ತಾನೆ ಮೈಸೂರಲ್ಲಿ ಎಲ್ಲೆಲ್ಲಿ ಹೋಗಬೇಕು ಅಂತ ಪ್ಲಾನ್ ಮಾಡಿದ್ದೆವು. ಅವನು ತನ್ನ ಹೆಂಡತಿ ಅರ್ಥಾತ್ ನನ್ನ ಕಜ಼ಿನ್ ಇನ್ ಲಾ ಹಾಗು ಮಗಳು ಪುಟ್ಟಿಯನ್ನು ಕರೆದುಕೊಂಡು ನನ್ನನ್ನು ಕರೆದೊಯ್ಯಲು ನಮ್ಮ ಮನೆಗೆ ಬಂದ. ಅದು ಇದು ಮಾತಾಡುತ್ತಾ ಕುಳಿತ ನಮ್ಮನ್ನು ನೋಡಿ, ಇವರನ್ನು ಹೀಗೆ ಬಿಟ್ಟರೆ ಹೊರಗೆ ಹೋಗೋ ಬದಲು ಹರಟೆಯಲ್ಲೆ ಕಾಲ ಕಳೆಯುತ್ತಾರೆ ಎಂದು ಕಳವಳಗೊಂಡ ನಮ್ಮ ಪುಟ್ಟೀ,
"ಅಪ್ಪಾ, ಅದೇನೋ 'ಕಾಂಪ್ಲಾನ್' ತೋರಿಸಕ್ಕೆ ಕರ್ಕೊಂಡ್ ಹೋಗ್ತೀನಿ ಅಂದ್ರಲ್ಲ, ಯಾವಾಗ ಹೋಗದು?" ಅಂದ್ಲು.
ನಾನು ಇದೇನಪ್ಪಾ, ಎಲ್ಲ ಮಕ್ಕಳು ಕಾಂಪ್ಲಾನ್ ಕುಡಿದರೆ, ಈ ನಮ್ ಪುಟ್ಟೀ ನೋಡಿ ಅಷ್ಟಕ್ಕೇ ಸಂತೋಷ ಪಡೋ ಅಂತ ಒಳ್ಳೆ ಮಗುವೇ ಅಂದುಕೊಳ್ಳುತ್ತಿರುವಾಗಲೇ, ನನ್ನ ಕಜ಼ಿನ್, ಅವನ ಹೆಂಡತಿ ಹೋ ಅಂತ ನಗಕ್ಕೆ ಶುರು ಮಾಡಿದ್ರು. ನನ್ನ ಕಜ಼ಿನ್ ಹೆಂಡತಿ,
"ಪುಟ್ಟೀ ಅದು ಕಾಂಪ್ಲಾನ್ ಅಲ್ಲ ಕಂದ, ಅದು Decathlon" ಅಂದಾಗ ನಗೋ ಸರದಿ ನಂದಾಗಿತ್ತು.
(Decathlon ಅನ್ನುವುದು ಒಂದು sports shop)
ಎಲ್ಲಾ Decathlon ಕಡೆ ಸವಾರಿ ಹೊರಟ್ವಿ. ಪುಟ್ಟಿನ ನಾನು ನನ್ನ ತೊಡೆ ಮೇಲೆ ಕೂರಿಸ್ಕೊಂಡು ಅವಳ ಶಾಲೆ ಬಗ್ಗೆ, ಪಾಠದ ಬಗ್ಗೆ ವಿಚಾರಿಸ್ತಾ ಇದ್ದೆ. ಪುಟ್ಟೀನು, ತುಂಬಾ ಉತ್ಸಾಹದಿಂದ ಹೇಗೆ ಅವಳು ಪ್ರಾರ್ಥನೆ ಬರದೆ ಇದ್ದರೂ, ಒಣ ಒಣ ಅಂತ ತುಟಿ ಅಲ್ಲಾಡಿಸಿ ಪ್ರಾರ್ಥನೆಯ ನಾಟಕ ಮಾಡ್ತಾಳೆ, ಅವಳಿಗೆ ಯಾವ ಸ್ಪರ್ಧೆಯಲ್ಲಿ ಎಷ್ಟನೇ ಬಹುಮಾನ ಅಂತ ವಿವರಿಸ್ತಾ ಇದ್ದಳು.
ನಾನು ನಮಗೆ ಒಂದನೇ ತರಗತಿಯಲ್ಲಿ ಕನ್ನಡದಲ್ಲಿ ಯಾವ ಪದ್ಯ ಎಂದು ನೆನೆಸಿಕೊಳ್ಳುತ್ತಾ,
"ಪುಟ್ಟೀ, ಕನ್ನಡದಲ್ಲಿ ಯಾವ ಪದ್ಯ ಇದೆ?" ಎಂದು ಕೇಳಿದೆ. ಕಾಂಪ್ಲಾನ್ ಕುಡಿದೋಳ ಥರ ಉಚ್ಛ ಸ್ವರದಲ್ಲಿ 'ಏರುತಿಹುದು ನಮ್ಮ ಬಾವುಟ' ಹಾಡಿ ಮುಗಿಸಿದಳು. ನನ್ನ ತಲೆಯಲ್ಲೋ ಯಾರು ಇದನ್ನು ಬರೆದ ಕವಿ ಎಂದು ಕೊರೆಯುತ್ತಿತ್ತು. ಅವಳಿಗೆ,
"ಇದನ್ನು ಯಾರಮ್ಮಾ ಬರೆದಿರೋದು" ಅಂತ ಒಂದು ಪೆದ್ದ ಪ್ರಶ್ನೆ ಕೇಳಿದೆ ನೋಡಿ, ತಟಕ್ಕನೆ ನಮ್ಮ ಪುಟಾಣಿ, "ಅದನ್ ಯಾರು ಬರೆದಿಲ್ಲ.. ಅದು ಪ್ರಿಂಟ್ ಮಾಡಿರದು" ಅಂದಾಗ ನಾನು ಒಂದು ಕಡೆ ಕಕ್ಕಾಬಿಕ್ಕಿ ಇನ್ನೊಂದು ಕಡೆ ನಗು. ಆಮೇಲೆ ಮಗುವಿಗೆ ಅದಕ್ಕೆ ಅರ್ಥ ಆಗೋ ಭಾಷೆಯಲ್ಲಿ ಅವಳ ಅಮ್ಮ ಬರೆದವರ ಬಗ್ಗೆ ವಿವರಿಸಿದ್ದಾಯಿತು.
ಇದಾದ ಮೇಲೆ ನಮ್ಮ ಪುಟ್ಟಿ ಗುಣಗಾನ ನನ್ ಕಜ಼ಿನ್ ಮಾಡಿದ. ಒಂದು ದಿನ,ಪುಟ್ಟಿ ಅಪ್ಪ ಅಮ್ಮ ಇಬ್ಬರೂ ಯಾರೋ ನೆಂಟರ ಮನೆಗೆ ಹೋಗಬೇಕಿತ್ತಂತೆ. ಪುಟ್ಟಿನ ಮನೆಯಲ್ಲೆ ಅಜ್ಜಿ ಜೊತೆ ಬಿಟ್ಟು ಹೋಗಿದಾರೆ. ನಮ್ಮ ಪುಟ್ಟಿದು ಸ್ವಲ್ಪ ಯಜಮಾನಿಕೆ ಜಾಸ್ತಿನೇ. ಇವಳ ಅಪ್ಪನನ್ನು ಹುಡುಕಿಕೊಂಡು ಯಾರೋ ಮನೆಗೆ ಬಂದಿದಾರೆ. ಅಜ್ಜಿ ಒಳಗೆ ಅಡುಗೆ ಮಾಡ್ತಿದಾರೆ. ಮಗುನ ಬಂದವರು ಮಾತಾಡಿಸಿ,"ಎಲ್ಲಿ ಪುಟ್ಟೀ, ನಿಮ್ಮ ಅಪ್ಪ?" ಎಂದು ಕೇಳಿದಾರೆ.
ಅವಳೋ "ಅವರೂ, ಯಾವ್ದೋ ಗಿರಿಗೆ ಹೋಗಿದಾರೆ".
ಬಂದವರು, ಇವಳು ಏನು ಹೇಳ್ತಾ ಇದಾಳೆ ಅಂತ ಅರ್ಥವಾಗದೆ, "ಏನು" ಎಂದು ಮತ್ತೆ ಕೇಳಿದಾರೆ.
ಅವಳು ಮತ್ತೆ, "ಅವರು ಯಾವ್ದೋ ಗಿರಿಗೆ ಹೋಗಿದಾರೆ ಅಂದನಲ್ಲ" ಅಂತ ಒಳ್ಳೆ ದೊಡ್ಡವರು ಮಾತಾಡೋ ಧಾಟಿಯಲ್ಲಿ ಹೇಳಿದಾಳೆ. ಬಂದವರು, ಇದೇನು ಈ ಮಗು ಈ ವಯಸ್ಸಿಗೆ ಎಂಥ ಒಳ್ಳೆ ಕನ್ನಡ ಮಾತಾಡುತ್ತೆ. ಅಪ್ಪ ಯಾವುದೋ Hill station ಗೆ ಹೋಗಿದಾರೆ ಅಂತ ಎಷ್ಟು ಚೆನ್ನಾಗಿ ಅಚ್ಚ ಕನ್ನಡದಲ್ಲಿ ಹೇಳುತ್ತೆ ಅಂದುಕೊಳ್ಳುತ್ತಿರುವ ಹಾಗೆ ಅವಳ ಅಜ್ಜಿ ಹೊರಗೆ ಬಂದಿದಾರೆ.
"ಆಂಟಿ, ಎಲ್ಲಿ ಹೋಗಿದಾನೆ ನಿಮ್ ಮಗ? ಊಟಿನೋ, ಕೊಡಾಯ್ ಒ?"
ಅವಳ ಅಜ್ಜಿ, "ಇಲ್ಲೆ ಇದಾನಾಲ್ಲಪ್ಪ. ನಿಂಗೆ ಯಾರು ಹೇಳಿದ್ರು ಊರಲ್ಲಿಲ್ಲ ಅವನು ಅಂತ?"
ಬಂದವರು: "ಮತ್ತೆ ಪುಟ್ಟೀ ಅಂದ್ಲು, ಯಾವುದೋ ಗಿರಿಗೆ ಹೋಗಿದಾರೆ ಅಂತ. ನಾನು Hill station ಗೆ
ಹೋಗಿರಬೇಕು ಅನ್ಕೊಂಡೆ" ಅಂದಾಗ ಅಜ್ಜಿ ಜೋರಾಗಿ ನಗಕ್ಕೆ ಶುರು ಮಾಡಿದ್ರಂತೆ.
ಏನಪ್ಪಾ ವಿಷಯ ಅಂದ್ರೆ, ಪುಟ್ಟೀ ಅಪ್ಪ ಅಮ್ಮ 'ಯಾದವ ಗಿರಿ' ಹೋಗಿದ್ರೆ, ಪುಟ್ಟೀ ಅವರನ್ನ ಯಾವುದೋ ಗಿರಿಗೆ ಕಳಿಸಿದ್ಲು. ನಾವೆಲ್ಲ ಪುಟ್ಟೀ ಕಥೆ ಕೇಳಿ ನಕ್ಕಿದ್ದೇ ನಕ್ಕಿದ್ದು!

Thursday, August 6, 2015

ನಿಂದೆ

ಕಾಡುವ
ನೆನಪು
ನಿನದೇ
ನನ್ನ
ಕಾದಿಡುವ
ನೆನಪೂ
ನಿನದೇ

Wednesday, August 5, 2015

ಖಾಲಿ

ನಲ್ಲ
ನೀನಿಲ್ಲದ
ಬಾಳಲ್ಲಿ
ಏನಿಲ್ಲ?!
ಎಲ್ಲವೂ
ಇದೆ
ಆದರೆ
ನೀನಿಲ್ಲ!

Wednesday, July 29, 2015

ಬಿಳುಪು

ಎಂಥಾ ಶುಭ್ರತೆ
ಅದೇನು ಹೊಳಪು!
ನಿರ್ಮಲ
ನಿಷ್ಕಲ್ಮಷ
ಮುಗ್ಧತೆಗಳ
ಸಂಕೇತವೇ?

ತನ್ನ ರಂಗುಗಳ ಬಚ್ಚಿಟ್ಟು
ಒಳಗಿನ ಹುಳುಕುಗಳನ್ನು
ಮರೆಮಾಚಿ
ಮೋಡಿ ಮಾಡುವ
ಮಾಯೆಯೋ?

Sunday, June 28, 2015

ವಿಜಯ ಮಂತ್ರ

ನಂಬಿದರೆ
ಸಾಮರ್ಥ್ಯ
ನಂಬದಿರೆ
ಪ್ರಯತ್ನಗಳೆಲ್ಲಾ
ವ್ಯರ್ಥ!

Saturday, June 13, 2015

'ವರ'


ದೇ'ವರ'
ನಂಬಲು
'ವರ'
ಕೊಡಬೇಕಲ್ಲವೇ
ಅವನು!!

Saturday, May 23, 2015

ಪದಬಂಧದ ಪ್ರಬಂಧ

ನಾವು ಸಣ್ಣವರಿದಾಗ ಕಲಿತ ಅಭ್ಯಾಸಗಳು ಅಷ್ಟು ಸುಲಭವಾಗಿ ಬಿಡುವುದಕ್ಕೆ ಆಗದು. ಅಷ್ಟಿಲ್ಲದೆ ತಿಳಿದವರು 'ಹುಟ್ಟು ಗುಣ ಸುಟ್ಟರೂ ಹೋಗಲ್ಲ' ಎಂದು ಹೇಳುತ್ತಿರಲಿಲ್ಲ. ಹಾಗಾಗಿ ಮಕ್ಕಳಿಗೆ ಒಳ್ಳೆಯ ಅಭ್ಯಾಸ ಕಲಿಸುವುದು ತುಂಬಾ ಮುಖ್ಯ. ಹಾಗಂತ ಹೇಳುವಾಗ ಇನ್ನೊಂದು ಗಾದೆ ನೆನಪಿಗೆ ಬರುತ್ತಿದೆ. 'ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ?'. ಕೆಲವೊಂದು ಅಭ್ಯಾಸ, ವಿದ್ಯೆಗಳು, ದೊಡ್ಡವರಾದ ಮೇಲೆ ಕಲಿಯುವುದು ಕಷ್ಟ.

ನನ್ನ ಅನುಭವದಲ್ಲಿ ಹೇಳುವುದಾದರೆ, ನಾನು ಸಣ್ಣವಳಿದ್ದಾಗಿನಿಂದ ತುಂಬಾ ಆಟಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಈಜುವುದ ಮಾತ್ರ ಕಲಿಯಲಿಲ್ಲ. ಈಗ ಸುಮಾರು ಐದು ವರ್ಷಗಳಿಂದ ಎಷ್ಟು ಪ್ರಯತ್ನ ಪಟ್ಟರೂ ಸರಿಯಾಗಿ ಈಜು ಕಲಿಯುವುದಕ್ಕೆ ಆಗಿಲ್ಲ. ಯಾಕೆ ಈ ಅಭ್ಯಾಸಗಳ ಬಗ್ಗೆ ಹೇಳುವುದಕ್ಕೆ ಹೊರಟೆ ಎಂದರೆ, ನಾನು ಚಿಕ್ಕವಳಿದ್ದಾಗ ನನ್ನ ಅಮ್ಮ ಪದಬಂಧ ಮಾಡುವ ಅಭ್ಯಾಸ ಮಾಡಿಸಿದ್ದರು. ದಿನಾ, ಬೆಳಗ್ಗೆ ಪದಬಂಧ ಮಾಡಿಲ್ಲ ಅಂದ್ರೆ ನನಗೆ ಒಂದು ರೀತಿಯ ಹಿಂಸೆ ಆಗುತ್ತಿರುತ್ತೆ. ನಮ್ಮ ಆಡು ಭಾಷೆಯಲ್ಲಿ ಹೇಳುವುದಾದರೆ ಕೈ ಗುರುಗುಡುತ್ತೆ!

ಪದಬಂಧ ಮಾಡುವುದು ಒಂದು ಒಳ್ಳೆ  ಹವ್ಯಾಸ. ಯಾಕಪ್ಪ ಅಂದರೆ ಪದಬಂಧ ಮಾಡುವುದಕ್ಕೆ ಸಮಸ್ಯೆ ಬಿಡಿಸುವ  ಕೌಶಲ್ಯವಿರಬೇಕು. ಸಮಸ್ಯೆ ಬಿಡಿಸುವುದನ್ನು ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ಒಂದು ಜೀವನ ಕೌಶಲ್ಯವೆಂದು ಗುರುತಿಸಿದೆ. ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ಅವರು ಇನ್ನು ಹತ್ತು ಜೀವನ ಕೌಶಲ್ಯಗಳನ್ನು ಗುರುತಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನು ಮಾನಸಿಕವಾಗಿ ಆರೋಗ್ಯವಾಗಿ, ನೆಮ್ಮದಿಯಾಗಿ ಇರಲು ಈ ಕೌಶಲ್ಯಗಳು ನೆರವಾಗುತ್ತವೆ.

ನೀವು ಪದಬಂಧ ಮಾಡಿದ್ದರೆ ನಿಮಗೆ ಈ ಅನುಭವಗಳು ಆಗಿರಬಹುದು. ಪದಬಂಧ ಮಾಡಲು ಕೆಲವು ಸೂಚನೆಗಳಿರುತ್ತವೆ.
'ಎಡದಿಂದ ಬಲಕ್ಕೆ' ಹಾಗು 'ಮೇಲಿನಿಂದ ಕೆಳಕ್ಕೆ' ಎಷ್ಟು ಅಕ್ಷರ ಹಾಗು ಯಾವ ಪದ ಎನ್ನುವುದಕ್ಕೆ ಸುಳಿವು ಕೊಟ್ಟಿರುತ್ತಾರೆ.  ಪದಗಳು ಇಂತದ್ದೆ ಅನುಕ್ರಮದಲ್ಲಿ ಬಿಡಿಸಬೇಕು ಎನ್ನುವ ನಿಯಮವೇನೂ ಇಲ್ಲ. ಯಾವ ಪದ ಬೇಕಾದರೂ ಮೊದಲು ಬಿಡಿಸಬಹುದು.

ಸಾಮಾನ್ಯವಾಗಿ, ಜನ ಎಡದಿಂದ ಬಲಕ್ಕೆ ಕೊಟ್ಟಿರುವ ಒಂದೊಂದು ಪದಗಳ ಸೂಚನೆಯನ್ನು ಓದುತ್ತಾ ಹೊಗುತ್ತಾರೆ. ಯಾವುದಾದರು ಪದ ಹೊಳೆದರೆ, ಅದನ್ನು ಪದಬಂಧದ ಚೌಕಗಳಲ್ಲಿ ಬರೆಯುತ್ತಾರೆ. ಉತ್ತರ ಸಿಕ್ಕಿದ ಅಕ್ಕ ಪಕ್ಕ, ಮೇಲೆ ಕೆಳಗೆ ಬರುವ ಪದಗಳ ಸೂಚನೆಯನ್ನು ಓದಿ, ಆ ಪದ ಹೊಳೆಯುತ್ತದೆಯೇ ಪ್ರಯತ್ನಿಸುತ್ತಾರೆ. ಅದು ಹೊಳೆದರೆ, ಮತ್ತೆ ಅದರ ಅಕ್ಕ ಪಕ್ಕ , ಮೇಲೆ ಕೆಳಗೆ, ಹೀಗೆ ಸಮಸ್ಯೆ ಬಿಡಿಸುವ ಪ್ರಕ್ರಿಯೆ ಮುಂದುವರೆಯುತ್ತದೆ.

ಮೇಲ್ನೋಟಕ್ಕೆ ಇದು ನಮಗೆ ತಿಳಿದಿರುವ ಶಬ್ದ ಬಂಢಾರದ ಪರೀಕ್ಷೆಯೇನಿಸಿದರೂ, ಇದು ಸಮಸ್ಯೆ ಬಿಡಿಸುವ ಕೌಶಲ್ಯವನ್ನು ಪರೀಕ್ಷಿಸುತ್ತದೆ. ಜೀವನದಲ್ಲಿ ದಿನನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನಿಗೆ ಸಮಸ್ಯೆ ಬಿಡಿಸುವ ಕೌಶಲ್ಯವಿದ್ದಾರೆ ಜೀವನ ಸರಾಗ. ಸಮಸ್ಯೆ ಒಂದು ರೀತಿ ಗಂಟುಗಳ ಹಾಕಿಕೊಂಡ ಸರವಿದ್ದ ಹಾಗೆ. ಎಲ್ಲೋ ಒಂದು ಕಡೆ ಸರದ ಒಂದು ಗಂಟನ್ನು ಮೊದಲು ಬಿಡಿಸಬೇಕು.ನಂತರ ಮತ್ತೊಂದು, ಇನ್ನೊಂದು. ಒಂದೊಂದಾಗಿ ಎಲ್ಲ ಗಂಟುಗಳನ್ನೂ  ಬಿಡಿಸಿದರೆ, ಸರದ ಸಮಸ್ಯೆ ಬಗೆ ಹರಿಯುತ್ತದೆ. ಹಾಗೆ ಈ ಪದಬಂಧ. ನಾನು ಮೂರನೇ ಪದ ಮೊದಲು ಬಿಡಿಸಿದರೆ, ನೀವು ಅದನ್ನು ಕೊನೆಗೆ ಬಿಡಿಸಬಹುದು. ಒಬ್ಬಬ್ಬರದ್ದು ಒಂದೊಂದು ಅನುಕ್ರಮವಿರಬಹುದು. ಗುರಿ ಮಾತ್ರ ಪೂರ್ತಿ ಪದಬಂಧ ಮಾಡುವುದು. ಒಟ್ಟು, ಪದಬಂಧ ಮಾಡುವುದರಿಂದ ನಾವು ಸಮಸ್ಯೆ ಬಿಡಿಸುವ ಕೌಶಲ್ಯವನ್ನು ಕಲಿಯುತ್ತೇವೆ. ಈ ಕೌಶಲ್ಯ ಪರೋಕ್ಷವಾಗಿ ನಮ್ಮ ಜೀವನದಲ್ಲಿ ದಿನ ನಿತ್ಯ ಸಹಾಯವಾಗುತ್ತದೆ.

ಎಲ್ಲ ಪದಗಳೂ ನನಗೊಬ್ಬಳಿಗೆ ಹೊಳೆಯುತ್ತದೆ ಎಂದು ಹೆಳಲಾಗದು. ನನಗೆ ಹೊಳೆಯದಿದ್ದಾಗ ನಾನು ನಮ್ಮ ಮನೆಯಲ್ಲಿ ಅಮ್ಮ ಅಪ್ಪನನ್ನೂ, ಅಣ್ಣನನ್ನೋ ಮತ್ಯಾರನ್ನೋ ಕೇಳುವೆ. ಅದರಿಂದ ನನ್ನ ಪದಬಂಧ ವೇಗವಾಗಿ ಸಾಗುತ್ತದೆ ಮತ್ತು ಸಂಪೂರ್ಣಗೊಳಿಸಲು ಸಹಾಯವಾಗುತ್ತದೆ. ಇದು ನಮಗೆ ಒಗ್ಗಟ್ಟಿನಲ್ಲಿ ಹೆಚ್ಚು ಬಲ ಎಂಬುದನ್ನು ಮನದಟ್ಟು ಮಾಡುತ್ತದೆ. ಸಮಸ್ಯೆಗಳು ಬಂದಾಗ ನಮಗೆ ಸಮಸ್ಯೆ ನಿವಾರಿಸಿಕೊಳ್ಳುವ ಬಲವಿರದಿದ್ದಾಗ ಮನೆಯವರ, ಸ್ನೇಹಿತರ ಸಹಾಯ ಕೇಳುವ ಮನೋಭಾವ, ಹಾಗೆ ಸಹಾಯ ಹಸ್ತ ನೀಡುವ ಮನೋಭಾವವನ್ನು ಹುಟ್ಟು ಹಾಕುತ್ತದೆ.

ನೀವು ಪದಬಂಧ ಮಾಡ್ತೀರಲ್ಲ ಇವತ್ತಿಂದ? ನಿಮ್ಮ ಮಕ್ಕಳಿಗೂ ಅಭ್ಯಾಸ ಕಲಿಸುತ್ತೀರಲ್ಲ?




Sunday, May 17, 2015

ನಿವೇದನೆ

ಸತ್ತವರೇ
ನೆಮ್ಮದಿ ನಿಶ್ಚಿಂತೆಗಳ
ಶಾಶ್ವತವಾಗಿ ಅಪ್ಪಿ
ಮರೆಯಾದವರೇ
ನಿಮಗರಿವಿದೆಯೇ?
ನಿಮ್ಮ ನೆನಪು
ಕಣಕಣವಾಗಿ
ಕೊಲ್ಲುವುದೆಮ್ಮ
ನಿಮ್ಮ ಅಗಲಿಕೆಯ
ಗಾಯ ಮಾಗದೆ
ಆಗಾಗ ಒಡೆದು
ಉರಿ ನೋವು
ನಿಮ್ಮೊಡನಾಟ
ಹಂಬಲಿಸಿದೆ ಮನ
ನಿಮ್ಮ ಸಾನಿಧ್ಯವ
ಬಯಸಿದೆ ಮನ
ನೀವೇನೋ
ಹೊರಟುಬಿಟ್ಟಿರಿ...
ಈ ಮಾಗದ ಗಾಯ
ಅಳಿಸಲಾಗದ ಛಾಯೆ
ನೀಗದ ನೋವು
ನಾವಿರುವವೆಗೆ..

Tuesday, April 7, 2015

ವಿಚಿತ್ರ ಸತ್ಯ

ಪರರ
ದೊಡ್ಡ ತಪ್ಪಗಳನ್ನು
ಮನ್ನಿಸಿ ಮರೆವ
ಮನಸು
ಅದೇಕೋ
ತನ್ನವರ ಸಣ್ಣ ತಪ್ಪುಗಳ
ಆಗಾಗ ಹಾಕುತ್ತಲೇ ಇರುತ್ತೆ
ಮೆಲಕು!

Thursday, April 2, 2015

The Change

It used to rain in rainy days
Sun was out radiating heat in summer
My bones used to ache to chilly winter
Those were the days of pain

She was present
He was there very next to me
They were all around me
Those were the days of sadness

There were people around
But I was alone
I was alone and
Loneliness used to kill me

I had a job for a living
My passions in the free time
I had everything on the earth to live
But Those were the days of no peace

It still rains in the rainy days
May be sun is hotter  in summer
My bones still ache during chilly winter
But I enjoy everyday and each of these things

She is present
May be someone else next to me now
They are still all around me
I am happy no matter who is there

There are people around
I enjoy little bit of their company
I get into my space of shell
To enjoy my solitude

I have the same job today
Passions still have kept their company
I have everything on this earth to live
I am living my life to the fullest

Yes, it the same seasons
They are pretty much the same people
My problems are almost the same
But I have changed!

Tuesday, March 24, 2015

ಸಂಬಂಧ

ನಲ್ಲಾ
ಹೌದಲ್ಲಾ
ಈ ನಡುವೆ
ನಿನ್ನ ಮೇಲೆ
ಕಡಿಮೆಯಾಗಿದೆ
ಎನ್ನ ಆಸಕ್ತಿ
ಹೆಚ್ಚಾಗಿದೆ
ವಿರಕ್ತಿ
ಆ ನಿನ್ನ ಸ್ಪರ್ಷದಿ
ಮೈಯಲಿ ಮುಳ್ಳು
ಚುಂಬನವೋ
ನಿನ್ನ ದೂಡಿ
ದೂರ ತಳ್ಳೋ ಬಯಕೆ
ಈ ಮನಕೆ
ನಿನ್ನ ಸಾನಿಧ್ಯವೇ
ಬೇಡದು
ನಿನ್ನ ನೆನಪೂ
ಕೂಡ ಕಾಡದು
ಇದೆಂತ ಬದಲಾವಣೆ ನಲ್ಲ
ಮೊನ್ನೆ ಮೊನ್ನೆಯವರೆಗೂ
ನಿನ್ನೆದೆಯಲಿ
ಮನ ಹುದಿಗೆ
ಅದೆಂತ ಸುಖ
ನಿನ್ನಪ್ಪಿಗೆ
ಅದೇನು ಹಿತ!
ಇದ್ದಕ್ಕಿದ್ದಂತೆ
ಇದೇನಾಯಿತು ನಲ್ಲ
ನನ್ನ ನಿನ್ನ ನಡುವೆ?
ಯಾರದಾರೂ ದೃಷ್ಟಿ
ತಾಕಿತೇ?
ಮಾಟ ಮಾಡಿಸಿದರೆ?
ಅದೆಂತು ಅಲ್ಲ
ಈ ಧಗ ಧಗ ಬೇಸಿಗೆ
ಬೇಡವಾಗಿದೆ
ನನ್ನ ಹೊದಿಕೆ!

Monday, February 2, 2015

ಯುಗಾದಿ ಹಾದಿ

ಹಳೆಯ ಯುಗವು ಕಳೆದು
ಹೊಸ ಯುಗದ ಬೆಳಕು ಹರಿದು
ಬರುವ ನಮ್ಮ ಯುಗಾದಿ
ಪ್ರತಿ ಚೈತ್ರದ ಪಾಡ್ಯದಿ

ಮನೆಮನೆಗಳಲಿ ತಳಿರು ತೋರಣ
ಅಡಿಗೆ ಮನೆಯಲಿ ಒಬ್ಬಟ್ಟ ಹೂರಣ
ಅಂಗಳದಿ ರಂಗೋಲಿ ಚಿತ್ತಾರ
ದೇವರಿಗೆ ಹೂ ದೀಪಗಳ ಅಲಂಕಾರ

ತಿನ್ನುವೆವು ಬೇವು ಬೆಲ್ಲದ ಮಿಶ್ರಣ
ಜೊತೆಗೆ ಪಂಚಾಂಗ ಶ್ರವಣ
ಬದುಕು ಕಷ್ಟ ಸುಖಗಳ ಸಂತೆ
ಈ ವರುಷ ಮಳೆ ಬೆಳೆ ಹೇಗಂತೆ?

ಹೊಸ ಬಟ್ಟೆ ಧರಿಸಿ
ನವ ಸಂವತ್ಸರ ಸ್ವಾಗತಿಸಿ
ಆರೋಗ್ಯ ಸಂತೃಪ್ತಿ ನೆಮ್ಮದಿಯ ಭರವಸೆಯಲಿ
ಹೊಸ ವರುಷದ ಸಂಭ್ರಮದಲಿ

ಆಚರಿಸುವ ಬನ್ನಿ ಯುಗಾದಿ
ತುಳಿಯುವ 'ಮನ್ಮಥ'ನ ಹಾದಿ!









ಮನ್ಮಥನಿಗೆ ಸ್ವಾಗತ

ಬಂದಿತು ಮತ್ತೆ
ಯುಗಾದಿ
ಬನ್ನಿ ಆಚರಿಸುವ
ಹಬ್ಬ ಹರುಷದಿ

ಕಳೆದ ಸಂವತ್ಸರದ
'ಜಯ'ಭೇರಿ ನೆನಪಲಿ
'ಮನ್ಮಥ'ನ ಆಗಮನದ
ಸಂತೋಷದ ಹುರುಪಲಿ

ಬನ್ನಿ ಬಂಧುಗಳೆ
ಸ್ವಾಗತಿಸುವ ಹೊಸವರುಷವ
ಬನ್ನಿ ಸ್ನೇಹಿತರೆ
ಆಚರಿಸುವ ಹಬ್ಬವ

ಮನೆ ಮನೆ ಬಾಗಿಲಲಿ
ತಳಿರು ತೋರಣ
ಅಡಿಗೆ ಮನೆಯಲಿ
ಒಬ್ಬಟ್ಟು ಹೂರಣ

ಉಗಾದಿಯಲಿ ತಿನ್ನುವೆವು
ಬೇವುಬೆಲ್ಲ
ಬದುಕಲಿ ಕಷ್ಟ ಸುಖ
ಸ್ವೀಕರಿಸುವೆವು ಎಲ್ಲ

ಹೊಸ ಬಟ್ಟೆ ಧರಿಸಿ
ಹಬ್ಬದೂಟ ಭಾರಿಸಿ
ವರ್ಷ
ಆರೋಗ್ಯ ಆಯಸ್ಸು ನೆಮ್ಮದಿಯ
ತರಲೆಂದು ಬಯಸಿ

ಬಂದಿದೆ ಮತ್ತೆ
ಯುಗಾದಿ
ಬನ್ನಿ ಎಲ್ಲರೂ ಕೂಡಿ
ಆಚರಿಸು ಹಬ್ಬ ಹರುಷದಿ

Saturday, January 3, 2015

ನಿಜರೂಪ

ಸುಳ್ಳಿನ
ಸುಳಿವು
ಕೊಡದ
ಸತ್ಯ
ಸತ್ತಂತೆ
ನಟಿಸಿದರೂ
ಅದೆಷ್ಟು
ದಿನ
ನಾಟಕ?

ಒಂದೊಮ್ಮೆ
ತೆರೆ
ಬೀಳಲೇ
ಬೇಕಲ್ಲವೇ?

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...