ಅಚ್ಚಾಗಿರಲಿ ನನ್ನ ಹೃದಯದಲ್ಲಿ
ನಿನ್ನ ಹೆಸರು
ತಾರೆ ಸೂರ್ಯ ಚಂದ್ರರಿರುವವರೆಗೆ
- ರಾಘವ
27-May-2022
ಏನಾಗೋಯ್ತೋ?
ಹೇಗಾಗೋಯ್ತೋ?
ನಿದ್ದೆ ಬರ್ತಿಲ್ಲ
ನಂಗೆ
ನಿದ್ದೆ ಬರ್ತಿಲ್ಲ
ಕಣ್ಣು ಮುಚ್ಚಿ
ಕಣ್ಣು ತೆಗೆದರೂ
ನಿನ್ನ ಚಿತ್ರನೇ!
ತಿನ್ನಕ್ಕೆ ಸೇರ್ತಿಲ್ಲ
ನಂಗೆ
ತಿನ್ನಕ್ಕೆ ಸೇರ್ತಿಲ್ಲ
ಕೂತ್ರು, ನಿಂತ್ರು, ಮಲಗಿದ್ರೂನು
ನಿಂದೆ ಧ್ಯಾನನೇ!
ನಿನ್ನ ನೋಡೋ ಬಯಕೆ
ನಿನ್ನೊಡನಾಟದ ತವಕ
ನಂಬಕ್ಕಾಗ್ತಿಲ್ಲ
ನನ್ನೇ
ನಾ ನಂಬಕ್ಕಾಗ್ತಿಲ್ಲ
ನಾ ನಿನ್ನ ಪ್ರೀತಿಲಿ
ಬೀಳ್ತಾ ಇದ್ದೀನಿ
ನಾನು ಹಿಂಗೇ ಇರ್ಲಿಲ್ಲ
ಮುಂಚೆ
ನಾನು ಹಿಂಗೇ ಇರ್ಲಿಲ್ಲ
ಏನು ಮೋಡಿ ಮಾಡಿದೆ ನೀನು ನನಗೆ?
ಇಷ್ಟ ಆಗ್ತಿದೆ
ನನಗೆ
ಇಷ್ಟ ಆಗ್ತಿದೆ
ನಂಗಿದೆಲ್ಲ
ಬೇಕು ಅನ್ನಿಸ್ತಿದೆ
ನೀ ನನ್ನ
ಯಾವಾಗ
ಮದ್ವೆ ಆಗ್ತೀಯಾ?
ಏನಾಗೋಯ್ತೋ
ಹೇಗಾಗೋಯ್ತೋ?
ದೊಡ್ಡೋರು ಹೇಳ್ತಾರೆ
ಆಗೋದೆಲ್ಲ ಒಳ್ಳೇದಕ್ಕೆ
ನನ್ನ ಪಡೆದ
ನೀನೆಂತ ಅದೃಷ್ಟವಂತ!
ಕವನ ಬರೆಸ್ಕೊಳೋ ಅವಕಾಶ
ಎಲ್ಲರಿಗೂ ಸಿಗುತ್ತಾ?
27-May-2022
ನನ್ನ ನಿನ್ನ
ಆ ಭೇಟಿಗಳಲ್ಲಿ
ನೀ
ನನ್ನ ಹೊಗಳಿಲ್ಲ
ಕೊಂಡಾಡಿಲ್ಲ
ಐ ಲವ್ ಯು ಹೇಳಿಲ್ಲ
ಕೈ-ಕೈ ಹಿಡಿದು ನಡೆದಾಡಿಲ್ಲ
ಅದು ಯಾವ
ಮಾಯಯಲಿ
ಸದ್ದಿಲ್ಲದೆ
ನನ್ನ ಹೃದಯ
ಕದ್ದೆಯೋ ಚೋರ!
26-May-2022
ಜೀವನದಲ್ಲಿ
ತನಗೊದಗಿದ
ಸಂಕಷ್ಟಗಳ
ಪರಿ ಪರಿಯಾಗಿ
ತೋಡಿಕೊಂಡ
ಅನೇಕ
ಕುಟ್ಟು ಕೊರೆತಗಳ
ಅನುಭವಿಸಿದ
ಆ ಸುಂದರ
ಕಲ್ಲಿನ ಮೂರ್ತಿಯಲ್ಲಿ!
ಅವನ ನೆನಪುಗಳಲ್ಲಿ ಸತ್ತು
ಇವನ ನಿರೀಕ್ಷೆಯಲ್ಲಿ ಮರು ಹುಟ್ಟಿ
ದೊಡ್ಡ ಅಪಜಯಗಳಿಗೆ ಸತ್ತು
ಸಣ್ಣ ಗೆಲುವಿನಾಸೆಗೆ ಮರು ಹುಟ್ಟಿ
ಕಷ್ಟಗಳಿಗೆ ಸಿಕ್ಕಿ ಸತ್ತು
ಸುಖದಾಸೆಯಿಂದಲೇ ಮರು ಹುಟ್ಟಿ
ಬದುಕಿನ ಜಂಜಾಟಗಳಲ್ಲಿ ಸತ್ತು
ಜೀವದಾಸೆಯಿಂದಲೇ ಮರು ಹುಟ್ಟಿ
ಪುನರಪಿ ಮರಣಂ
ಪುನರಪಿ ಜನನಂ
ಬದುಕೊಂದರಲೇ
ಹಲವು ಬಾರಿ ಸತ್ತು
ಮತ್ತೆ ಮತ್ತೆ ಹುಟ್ಟಿ
ಪೆಟ್ಟುಗಳ ತಿಂದೂ ತಿಂದೂ
ಸುಂದರ ಮೂರ್ತಿಯಾಗುವ
ಪ್ರಕ್ರಿಯೆ
ಜೀವನ!
ಪ್ರೇರಣೆ: ಜೋಗಿಯವರ ಕವಿತೆ 'ಸಾವು'
ನಾ ನಿನ್ನ ಅರಸದೆ, ಬಯಸದೆ ನೀ ನನ್ನ ಅರಸದೆ, ಬಯಸದೆ ವಿಧಿಯು ನಮ್ಮ ಕೂಡಿಸಿರೆ ನಮ್ಮೀ ನಿತ್ಯ ಮಿಲನ ಸುದೀರ್ಘ ಪಯಣ ಹಾಕಿದೆ ಬುನಾದಿ ನನ್ನ ಬದುಕಿಗೆ ನನ್ನ ಮನದಲಿ...