ಅವನ ನೆನಪುಗಳಲ್ಲಿ ಸತ್ತು
ಇವನ ನಿರೀಕ್ಷೆಯಲ್ಲಿ ಮರು ಹುಟ್ಟಿ
ದೊಡ್ಡ ಅಪಜಯಗಳಿಗೆ ಸತ್ತು
ಸಣ್ಣ ಗೆಲುವಿನಾಸೆಗೆ ಮರು ಹುಟ್ಟಿ
ಕಷ್ಟಗಳಿಗೆ ಸಿಕ್ಕಿ ಸತ್ತು
ಸುಖದಾಸೆಯಿಂದಲೇ ಮರು ಹುಟ್ಟಿ
ಬದುಕಿನ ಜಂಜಾಟಗಳಲ್ಲಿ ಸತ್ತು
ಜೀವದಾಸೆಯಿಂದಲೇ ಮರು ಹುಟ್ಟಿ
ಪುನರಪಿ ಮರಣಂ
ಪುನರಪಿ ಜನನಂ
ಬದುಕೊಂದರಲೇ
ಹಲವು ಬಾರಿ ಸತ್ತು
ಮತ್ತೆ ಮತ್ತೆ ಹುಟ್ಟಿ
ಪೆಟ್ಟುಗಳ ತಿಂದೂ ತಿಂದೂ
ಸುಂದರ ಮೂರ್ತಿಯಾಗುವ
ಪ್ರಕ್ರಿಯೆ
ಜೀವನ!
ಪ್ರೇರಣೆ: ಜೋಗಿಯವರ ಕವಿತೆ 'ಸಾವು'
No comments:
Post a Comment