Saturday, January 20, 2018

ಆನೆ

ಕಾಡಿಗೆಲ್ಲ ದೊಡ್ಡ ಪ್ರಾಣಿ ನಾನೇನೆ
ಆನೆ ಅನ್ನೊ ಹೆಸರು ನಂದೇನೆ

ಅಗಲ ಕಿವಿ, ಪುಟ್ಟ ಕಣ್ಣು
ಸೊಂಡಿಲ ಮೂಗು
ಉದ್ದ ಬಾಲ, ಕಪ್ಪು ಬಣ್ಣ
ದಪ್ಪ ಮೈಯಿ

ಕಾಡಿಗೆಲ್ಲ ದೊಡ್ಡ ಪ್ರಾಣಿ ನಾನೇನೆ
ಆನೆ ಅನ್ನೊ ಹೆಸರು ನಂದೇನೆ

ತಿನ್ನಕ್ಕೆ ಕಬ್ಬು, ಆಡಕ್ಕೆ ನೀರು
ಕೊಟ್ರೆ ನಂಗೆ
ಬೆನ್ನು ಮೇಲೆ ಕೂರಿಸ್ಕೊಂಡು
ರೌಂಡು ನಿಂಗೆ

ಕಾಡಿಗೆಲ್ಲ ದೊಡ್ಡ ಪ್ರಾಣಿ ನಾನೇನೆ
ಆನೆ ಅನ್ನೊ ಹೆಸರು ನಂದೇನೆ

ದಸರೆಯಲ್ಲಿ ಹೊರ್ತೀನ್ನಾನು
ಅಂಬಾರಿ
ನನ್ನನ್ನು ನೋಡಕ್
ಅದೆಷ್ಟು ಜನ ಬರ್ತಾರ್ರೀ..

ಕಾಡಿಗೆಲ್ಲ ದೊಡ್ಡ ಪ್ರಾಣಿ ನಾನೇನೆ
ಆನೆ ಅನ್ನೊ ಹೆಸರು ನಂದೇನೆ

ಬೆಳಗಿನ ದಿನಚರಿ

ಕೊ ಕ್ಕೊ ಕೋಳಿ
ಬೆಳಗಾಯ್ತು ಎದ್ದೇಳಿ
ಬೌ ಬೌ ನಾಯಿ
ಚೊಕ್ಕ ಮಾಡಿ ಬಾಯಿ
ಮಿಯಾಂ ಮಿಯಾಂ ಬೆಕ್ಕು
ಕುಡಿಯಕ್ಕೆ ಹಾಲು ಬೇಕು
ಅಂಬ ಅಂಬ ಹಸುವೆ
ಬೇಗ ಸ್ನಾನಕ್ಕೆ ಹೊರಡುವೆ
ಮೆ ಮೇ ಮೇಕೆ
ಅಮ್ಮ ತಿಂಡಿ ಬೇಕೆ
ಕಾ ಕಾ ಕಾಗೆ
ಹೊರಡೋಣ ಶಾಲೆಗೆ!

Tuesday, January 2, 2018

ಚುಟುಕುಗಳು

ವಿಚಿತ್ರ ಸತ್ಯ
ಊರಗೇ ನೆರಳು
ಕೊಡೊ ಆ ಆಲದ ಮರ
ಬಿಸಿಲಿನ ಒರೆತಕ್ಕೆ
ಬಸಳಿತ್ತು
ಐಟಿ ಜನ
ಆರೋಗ್ಯ ಮಾರಿ
ಹಣ ಕೊಂಡು
ಹಣ ಮಾರಿ
ಆರೋಗ್ಯ ಕೊಳ್ತಾರೆ
- ಅನಿತಾ ನಾಡಿಗ್

Friday, December 29, 2017

??

ಪ್ರಶ್ನೆಗಳಿದ್ದಾಗ
ಉತ್ತರ ಹುಡುಕುವ
ಆತುರ
ಉತ್ತರ ಸಿಕ್ಕ ಮೇಲೆ
ಉತ್ತರವೇಕೆ
ಹೀಗೆ ಅನ್ನೋ
ಪ್ರಶ್ನೆ!

ವಿದಾಯ

ಇನ್ನೂ ನಿಚ್ಛಳ ನೆನಪಿದೆ
ನನಗೆ
ನನ್ನ‌ ನಿನ್ನ ಮೊದಲ ಮಿಲನದ
ಆ‌ ದಿನ
ಮಂದ ಬೆಳಕಿನಲಿ
ಮಂದಿ ಮಾತಿನಲಿ
ಸುಳಿಸುಳಿದು
ಗಪ್ಪನೆ ನನ್ನಪ್ಪಿದ
ಆ ಕ್ಷಣ
ಇನ್ನೂ ನಿಚ್ಛಳ ನೆನಪಿದೆ
ನನ್ನಾನಂದಕೆ
ಹೆಗಲು ಕೊಟ್ಟ ಅದೆಷ್ಟೋ
ಹಗಲುಗಳು
ನನ್ನ ನೋವಿನೊಡಗೂಡಿದ
ರಾತ್ರಿಗಳೆಷ್ಟೋ
ದಿನಕ್ಕೊಂದು
ರೋಚಕತೆ ನಿನ್ನೊಡನಾಟದಿ
ಕಲಿತದ್ದೆಷ್ಟೋ
ಮರೆತದ್ದೆಷ್ಟೋ, ಮೆರದದ್ದೆಷ್ಟೋ!
ಗುರಿಯಿಲ್ಲದೆ ಅಲೆಸಿದೆ
ದಣಿವಾಗದಂತೆ ನಡೆಸಿದೆ
ಅಪರಿಚಿತರು ಪರಿಚಿತರಾಗಿ
ಪರಿಚಿತರಪರಿಚಿತರಾಗಿ!
ಹಿಂತಿರುಗಿ ನೋಡೆ,
ಕ್ರಮಿಸಿದ ದೂರದ ಲೆಕ್ಕವಿಲ್ಲ
ದೂರಾದ ಜನರ ಲಕ್ಷವಿಲ್ಲ
ಸುಸ್ತಿಲ್ಲ, ವಿಷಾದವಿಲ್ಲ
ನಗೆಯ ನಗುವ ಕಲಿತು
ಕಷ್ಟ ಪರಿಹಾರದ ಬಗೆಯ ಅರಿತು
ಮೊನ್ನೆಗಿಂತ ನೆನ್ನೆ, ನೆನ್ನೆಗಿಂತ ಇಂದು
ಹದವಾಗಿ ಬೆಂದು
ಧನ್ಯೋಸ್ಮಿ
ನಿನ್ನೊಡನೆ ಕಳೆದ ಆ ದಿನಗಳಿಗೆ
ಕಾಲ ನಿಲ್ಲಲ್ಲ
ಯಾರಿಗೂ ಕಾಯಲ್ಲ
ಇದು ವಿದಾಯದ ಸಮಯ
ಅಗಲಿಕೆಯ ನೋವಿಲ್ಲ
ಕಷ್ಟದ ನೆನಪುಗಳ ನಿನಗೇ ಬಿಟ್ಟು
ಸವಿ ನೆನಪಿನ ಬುತ್ತಿಯೊಡನೆ
ಹೊರಟಿರುವೆ
ಬರಲೇ ನಾ 2017?

Saturday, May 13, 2017

ಅಮ್ಮ

ಅವಳು
ನಮ್ಮ
ಹೆತ್ತಳು
ಹೊತ್ತಳು
ಬೆಳೆಸಿದಳು
ನಾವು ಅತ್ತಾಗ
ಅತ್ತಳು
ನಕ್ಕಾಗ
ನಕ್ಕಳು
ತನ್ನ
ಆದ್ಯತೆಗಳ
ಬದಲಾಯಿಸಿಕೊಂಡಳು
ತನ್ನ
ಆಸೆ ಸುಖಗಳ
ತೊರೆದಳು
ನಮ್ಮ
ಬದುಕುದ್ದಕ್ಕೂ
ಅವಳೇ
ಅಮ್ಮ
ಅವಳ ಪ್ರೀತಿ
ಋಣವೆಂದು ಅಲ್ಲ
ಅದು ಅತೀತ
ಅದಕಿಲ್ಲ ಪರ್ಯಾಯ
ಏನವಳ ಆಸೆ
ಏನವಳ ಬೇಕುಗಳು
ದಿನವೂ
ಅವಳೊಡನೆ ಸಮಯ
ಮಾಡುವೆವೆ ವ್ಯಯ?
ಅವಳ ಭಾವಗಳೇನು
ನೋವುಗಳಿವೆಯೆ?
ಅವಳ ಸುಖದ
ವ್ಯಾಖ್ಯಾನವೇನು?
ಅವಳ
ಭಾವಗಳಿಗೆ
ನೋವುಗಳಿಗೆ
ಬೇಕು ಸ್ಪಂದನ
ಅವಳ
ಇಳಿ ವಯಸ್ಸಿಗೆ
ನಾವಾಗಬೇಕಲ್ಲವೇ
ಅವಳ ಅಮ್ಮ?
Every day is a mother's day! Love and take care of her!

Thursday, May 11, 2017

ಯಾರು ಕಾರಣ?

ನಿನ್ನ ನೆನಪು
ಭಾರವಾಗಿ
ನಡೆಯಲೂ ಆಗದೆ
ನಿಲ್ಲಲೂ ಆಗದೆ
ದಣಿದಿದೆ ಈ ಮನ

ಇದ್ದೂ ಇಲ್ಲದಂತೆ
ಇಲ್ಲದೆಯೂ ಇದ್ದಂತೆ
ಕಾಡುವ ಭಾವಗಳ
ಹೊಣೆ  ನಿನ್ನದೇ? ನನ್ನದೇ?
ಗೊಂದಲಮಯ ಮನ

ಬಿಡಲೂ ಆಗದೆ
ಹೊತ್ತು ನಡೆಯಲೂ
ಆಗದ ಸ್ಥಿತಿ
ಕಾರಣ ನೀನೆ? ನಾನೇ?
ಉತ್ತರ ಹುಡುಕುವ ಮನ

ಬಿಟ್ಟು ಬಿಡೊಮ್ಮೆ
ಎಂದೊಮ್ಮೆ ಮನ
ರಪ್ಪನೆ ಅಪ್ಪಳಿಸುವ ನಿನ ನೆನಪು
ಕಪ್ಪೆಯಾಗುವ ಮನಸು
ಕಾರಣ ನಾನೇ .. ನೀನಲ್ಲ

ನೆನಪಿನ ಚೀಲಕೆ
ತೂತು ಹಾಕಿಸಿ ತೇಲುತಿರುವೆ
ಭಾರ ಕ್ರಮೇಣ ಇಳಿದು
ನಡೆಯ ವೇಗ ಹೆಚ್ಚಿದೆ

ಕಾರಣ ನಾನೇ.. ನೀನಲ್ಲ
ಕಂಡರೂ ನೀ, ನಾನಲ್ಲಿಲ್ಲ!


ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...