ಹೂವು ಹಣ್ಣು ಕೊಟ್ಟು
ಹಕ್ಕಿಗಳಿಗೆ ನೆಲೆಕೊಟ್ಟ
ಆ ಮರ, ಮಾತಾಡಿಲ್ಲ
ಗಿಡಮರಗಳಿಗೆ ಆಶ್ರಯವಾಗಿ
ಪ್ರಾಣಿಗಳ ಪೋಷಿಸಿದ
ಆ ಬೆಟ್ಟ ಬಡಬಡಿಸಿಲ್ಲ
ಮಾಡಿದ್ದಕ್ಕಿಂತ ಮಾತನಾಡಿದ್ದೇ ಹೆಚ್ಚು
ನಿನ್ನ ಅರಿವ ಕಣ್ಣು ತೆರೆವುದೆಂದು - ಅಲ್ಪಜ್ಞೆ
- ಅನಿತಾ ನಾಡಿಗ್
ನಾ ನಿನ್ನ ಅರಸದೆ, ಬಯಸದೆ ನೀ ನನ್ನ ಅರಸದೆ, ಬಯಸದೆ ವಿಧಿಯು ನಮ್ಮ ಕೂಡಿಸಿರೆ ನಮ್ಮೀ ನಿತ್ಯ ಮಿಲನ ಸುದೀರ್ಘ ಪಯಣ ಹಾಕಿದೆ ಬುನಾದಿ ನನ್ನ ಬದುಕಿಗೆ ನನ್ನ ಮನದಲಿ...