ಗುಡ್ಡವು ನಲುಗುವುದೆ
ಇಲಿ ಹೆಗ್ಗಣಗಳ ಕೊರೆತಕ್ಕೆ
ಬೆಟ್ಟವದು ಬೆದರುವುದೆ
ಝರಿಯ ಮೊರೆತಕ್ಕೆ
ಆಶ್ರಯ ಕೊಟ್ಟ ತೃಪ್ತಿ
ಗುಡ್ಡಕ್ಕೆ
ಆಸರೆಯ ನೆಪದಿ ತಂಪ
ಹೀರುವ ಸುಖ ಬೆಟ್ಟಗಳಿಗೆ
'ಬದುಕು, ಬದುಕಲು ಬಿಡು'
ಎನುವುದೇ ಜಗದ ನಿಯಮ
ಅರಿತರೆ ಒಳಿತು, ಅರಿಯದಿರೆ ತೊಡಕು - ಅಲ್ಪಜ್ಞೆ !
ನಾ ನಿನ್ನ ಅರಸದೆ, ಬಯಸದೆ ನೀ ನನ್ನ ಅರಸದೆ, ಬಯಸದೆ ವಿಧಿಯು ನಮ್ಮ ಕೂಡಿಸಿರೆ ನಮ್ಮೀ ನಿತ್ಯ ಮಿಲನ ಸುದೀರ್ಘ ಪಯಣ ಹಾಕಿದೆ ಬುನಾದಿ ನನ್ನ ಬದುಕಿಗೆ ನನ್ನ ಮನದಲಿ...
No comments:
Post a Comment