ಬೆಂಗಳೂರಿನ ಬ್ಯುಸಿ ಬದುಕಿನಲಿ, ಹಾಸ್ಯ ಯಾಕೋ ಸೊರಗಿದೆ ಅನ್ನಿಸುತ್ತೆ. ಬಾಯ್ತುಂಬ ಮಾತಾಡೋರು, ಹೊಟ್ಟೆ ಹುಣ್ಣಾಗೋ ಹಾಗೆ ನಗುವವರೇ ಕಮ್ಮಿ ಆಗೋಗಿದ್ದಾರೆ. ಬರೀ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿರೋರು, ಟ್ರಾಫಿಕ್ ಅಲ್ಲಿ ನಿಂತಿರೋರು, ಕಚೇರಿಗೆ ಓಡ್ತಿರೋರು, ಇವರುಗಳೇ ಜಾಸ್ತಿ ಕಾಣ್ತಾರೆ ನಂಗೆ.
ಹೀಗಿರೋವಾಗ, ತುಂಬಾ ಒತ್ತಡ ಇರೋ ಐ ಟಿ ಬದುಕಲ್ಲಿ, ಕೆಲವೊಮ್ಮೆ ಸಿಕ್ಕಾಪಟ್ಟೆ ನಗು ಬರೋ ತರಹದ ಸಂದರ್ಭಗಳು ಹುಟ್ಟುತ್ತವೆ, ಮರಳುಗಾಡಿನ ಓಯಸಿಸ್ ಥರ.
ನಾನು ಕೆಲಸಕ್ಕೆ ಸೇರಿದ ಹೊಸತು. ಆಂಗ್ಲ ಭಾಷೆಯನ್ನು ಇನ್ನೂ ಧೈರ್ಯವಾಗಿ ಮಾತಾಡುವ ಅಭ್ಯಾಸ ಆಗಿರಲಿಲ್ಲ. ನನ್ನನ್ನು ಯಾವುದೋ ಯೂರೋಪ್ ಗ್ರಾಹಕರ ಯೋಜನೆಗೆ (project) ಹಾಕಿದ್ದರು. ನನಗೆ ಮೊದಲೇ ಆಂಗ್ಲ ಭಾಷೆ ಉಪಯೋಗಿಸುವಾಗ, ಸರಿಯಾದ ಪದ ಬಳಕೆ ಮಾಡ್ತೀನ ಅನ್ನೋ ಅನುಮಾನ ಇತ್ತು ಆಗ. ಹೀಗಿರೋವಾಗ, ದಿನಾ ಈ ಯೂರೋಪಿಯನ್ನರೊಡನೆ ಸ್ಕೈಪ್ ಅಲ್ಲಿ ಸಭೆ (ಮೀಟಿಂಗ್). ನನಗೋ, ಅವರ ಉಚ್ಚಾರಣೆ ಚೂರು ಅರ್ಥ ಆಗ್ತಾ ಇರಲಿಲ್ಲ. ಗುಡ್ ಮಾರ್ನಿಂಗ್ ಹೇಳಿ, ಅವರು ಕೇಳಿದ್ದಕ್ಕೆಲ್ಲ ಪೆಚ್ಚು ನಗೆ ನಕ್ಕು, ನನ್ನ ಸಹುದ್ಯೋಗಿಯ ಮುಖ ನೋಡ್ತಾ ಇದ್ದೆ. ಪಾಪ ಅವಳು, ಏನು ಹೇಳಿದ್ರು ಅಂತ ವಿವರಿಸೋಳು.
ಆ ಕಡೆ ತುಂಬಾ ಜನ ಸಭೆ ಸೇರಿದಾಗ, "ಹಾಯ್ ಆಲ್ , ಹಾಯ್ ಎವೆರಿಒನ್" ಅಂದುಬಿಡ್ತಾ ಇದ್ವಿ. ಒಬ್ಬೊಬ್ಬರೇ ಕರೆಗೆ ಬಂದಾಗ ಹೆಸರು ಕರೆಯಬೇಕಿತ್ತು. ತಂಡದ ಸಭೆ ಇದ್ದಾಗ ಗುಂಪಲ್ಲಿ ಗೋವಿಂದ ಅಂತ ಹೇಗೋ ನಡೀತಿತ್ತು.
ಒಮ್ಮೆ, ನಾನು ಒಬ್ಬಳೇ ಒಬ್ಬ ಯುರೋಪಿಯನ್ ಗ್ರಾಹಕನ ಜೊತೆ ಕರೆಗೆ ಹೋಗೋ ಸಂಧರ್ಭ ಬಂತು. ಅವನ ಹೆಸರು Ionut ಅಂತ. ಅಷ್ಟು ದಿನ ಅವನ ಹೆಸರನ್ನು ಹೇಗೆ ಉಚ್ಚರಿಸಬೇಕೆಂಬ ಯೋಚನೆಯನ್ನೇ ಮಾಡಿರಲಿಲ್ಲ ನಾನು. ಒಬ್ಬಳೇ ಕರೆಗೆ ಹೋಗಬೇಕಲ್ಲ ಅನ್ನೋ ಆತಂಕ ಒಂದೆಡೆ. ಇವನ ಹೆಸರನ್ನು ತಪ್ಪು ಉಚ್ಚರಿಸಿದರೆ ಕಷ್ಟ ಅನ್ನಿಸಿ, ನನ್ನ ಹಿರಿಯ ಸಹುದ್ಯೋಗಿ ಒಬ್ಬಳ ಹತ್ತಿರ ಹೋದೆ. ಸಂಕೋಚದಿಂದ, "ನೋಡಿ, ನನಗೆ ಒಬ್ಬ ಗ್ರಾಹಕನ ಜೊತೆ ಕರೆ ಇದೆ. ಅವರ ಹೆಸರು ಹೇಗೆ ಉಚ್ಚರಿಸಬೇಕು ತಿಳಿಯುತ್ತಿಲ್ಲ". ಅವಳು, ನಗುತ್ತಲೇ, "ಯಾರೊಡನೆ ಕರೆ ಇದೆ ನಿಮಗೆ" ಎಂದಳು.
ನಾನು "'ಯು ನಟ್' ಅಂತ" ಅಂದಿದ್ದೆ ತಡ ಅವಳು ಜೋರಾಗಿ ನಗತೊಡಗಿದಳು. ನನಗೆ ಅವಳು ಯಾಕೆ ಹಾಗೆ ನಗ್ತಾ ಇದ್ದಾಳೆ ಎಂದು ಅರ್ಥ ಆಗ್ಲಿಲ್ಲ. ಕರೆಗೆ ತಡ ಬೇರೆ ಆಗ್ತಾ ಇತ್ತು.
ಆಕೆ ನಗುವುದ ನಿಲ್ಲಿಸಿ " ಅವನ ಹೆಸರು ಯೋನಟ್" ಎಂದಳು. ಕರೆ ಮುಗಿಸಿ ಬಂದು, ಗೂಗಲ್ ಮಾಡಿ ನೋಡಿದೆ. "ಯು ನಟ್" ಅಂದ್ರೆ ಏನು ಅಂತ. ಅರ್ಥ ನೋಡಿ ಭಯ, ನಗು ಎರಡೂ ಒಟ್ಟಿಗೆ ಆಯಿತು. "ನಿಂಗೆ ಐಲು" ಅನ್ನೋ ಥರ ಅರ್ಥ ಅದು. ಸದ್ಯ, ನನ್ನ ಸಹುದ್ಯೋಗಿಯನ್ನು ಕೇಳಿದ್ದು ಒಳ್ಳೆದಾಯಿತು ಅಂದುಕೊಂಡೆ. ಮುಂದೆ, ಆ ಗ್ರಾಹಕ ಇರೋ ಊರಿಗೆ ಹೋದಾಗ, ಅವನನ್ನು ಕೇಳಿದೆ, "ನಿನ್ನ ಹೆಸರನ್ನು ಹೇಗೆ ಉಚ್ಚರಿಸಬೇಕು?" ಅಂತ. ಅದಕ್ಕವನು, "ಯೂನು " ಅಂದ.
ನಮ್ಮ ಕಥೆ ಹೀಗೆ ಆದರೆ, ಈ ಗ್ರಾಹಕ ಕಥೆ ಇನ್ನೊಂದು ಥರ. ನಮ್ಮ ತಂಡದಲ್ಲಿ, ಒಬ್ಬಳು "ಶ್ರದ್ಧಾ" ಅಂತ ಇದ್ದಳು. ನಾವು ಎಷ್ಟು ಸರಿಪಡಿಸಿ ಹೇಳಿಕೊಟ್ಟರೂ ನಮ್ಮ ಗ್ರಾಹಕರೆಲ್ಲರೂ, ಅವಳನ್ನು "ಶ್ರಾದ್ಧಾ" ಎಂದೇ ಕರೆಯುತ್ತಿದ್ದರು. ನಮಗೆಲ್ಲ ತುಂಬಾ ನಗು. ಅವಳಿಗೋ, ಗ್ರಾಹಕರ ಮೇಲೆ ಮತ್ತು ಅವರ ತಂದೆ ತಾಯಿಯ ಮೇಲೆ ಸಿಟ್ಟು ಬರ್ತಿತ್ತು.
ಇನ್ನೊಬ್ಬ ಸಹುದ್ಯೋಗಿಯ ಹೆಸರು "ಶ್ರವಂತ್ ." ಈ ಒತ್ತು ಅಕ್ಷರದ ಉಚ್ಛಾರ ಅವರಿಗೆ ಬಲು ಕಷ್ಟ. ನಾವು ಪದೇ ಪದೇ ಹೇಳಿ ಕೊಟ್ಟೆವು. ಕೊನೆಗೆ ಒಬ್ಬನಂತೂ ಮೂರು ನಾಲ್ಕು ಸಲ ಅಭ್ಯಾಸ ಮಾಡಿ ತನಗೆ ಉಚ್ಚರಿಸಲು ಅನುಕೂಲವಾದ "ಸರ್ವೆಂಟ್" ಅಂತ ಹೇಳಿ, "this is easy " ಅಂದ. ನಮ್ಮ ಶ್ರವಂತನ ಮುಖ ಸಿಟ್ಟಿನಿಂದ ಕೆಂಪಗೆ ಆಗಿತ್ತು. ನಾನು ಮಧ್ಯ ಬಾಯಿ ಹಾಕಿ, "ಶ್ರವಂತನ ಕೊನೆಯ ಹೆಸರು ಸುಲಭ. ಇನ್ನು ಮೇಲೆ ಇವನನ್ನು "ರೆಡ್ಡಿ" ಎಂದು ಕರೆಯೋಣ ಎಂದೆ. ಎಲ್ಲರೂ ಕೊನೆಗೆ ಒಪ್ಪಿದರು.
ಹೀಗೆ ಒಂದು ಸಲ, ನಮ್ಮ ಡೈರೆಕ್ಟರ್ ಸಭೆ ಕರೆದರು. ಅಮೇರಿಕಾದಿಂದ "ಕ್ರಿಸ್ , ಶಾಂಕ್ಸ್ ಹಾಗು ಪ್ಯಾಡಿ " ಬರ್ತಾರೆ. ಅದಕ್ಕೆ ಕೆಲವೊಂದು ವರದಿ ಪಟ್ಟಿ ತಯಾರಿಸಬೇಕು ಎಂದರು. ನಾನು, ಜೀವನದಲ್ಲಿ ಅದುವರೆಗೂ ಬೇರೆ ದೇಶದವರನ್ನು ನೋಡಿರಲಿಲ್ಲ. ನಾನು ತುಂಬಾ ಉತ್ಸುಕಳಾಗಿ, ಈ ತ್ರಿಮೂರ್ತಿಗಳ ಬರವಿಗಾಗಿ ಕಾದೆ.
ನಮ್ಮನ್ನೆಲ್ಲ "All Hands Meet " ಅನ್ನೋ ಸಭೆಗೆ ಕರೆದರು. ನಾನು ಹೋಗಿ ಮುಂದಿನ ಸಾಲಿನಲ್ಲೇ ಕುಳಿತೆ. ಒಂದಷ್ಟು ಜನ ಸೂಟು ಬೂಟು ಹಾಕಿದ ಭಾರತೀಯರು ಬಂದರು. ನಾನು ಬೇರೆಯವರು ಬರುತ್ತಾರೆ ಎಂದು ಬಾಗಿಲ ಕಡೆ ನೋಡುತ್ತಿದಾಗಲೇ ಸಭೆ ಶುರುವಾಯಿತು. ಸೂಟುಧಾರಿಗಳು ತಮ್ಮನ್ನ "ಕ್ರಿಸ್, ಶಾಂಕ್ಸ್ ಮತ್ತು ಪ್ಯಾಡಿ" ಆಗಿ ಪರಿಚಯ ಮಾಡಿಕೊಂಡರು. ನನಗೆ ಅವರು ಏನು ಹೇಳುತ್ತಿದ್ದಾರೆ ಅಂತ ಕೇಳಿಸಿಕೊಳ್ಳುವ ಬದಲು, ಇವರು ಯಾಕೆ ಪರಕೀಯರ ತರ ಹೆಸರು ಇಟ್ಕೊಂಡಿದಾರೆ ಅನ್ನೋದೇ ತಲೇಲಿ ಓಡ್ತಾ ಇತ್ತು. ಯಾರನ್ನಾದ್ರೂ ಕೇಳಕ್ಕೆ ನಾಚಿಕೆ. ಅವರುಗಳು ವಾಪಸ್ಸು ಅಮೆರಿಕೆಗೆ ಹೊರಡುವ ಮುನ್ನ "ವಂದನೆಗಳ ಈಮೇಲ್" ಕಳಿಸಿದಾಗ ತಿಳೀತು, ಇವರು ಕೃಷ್ಣಮೂರ್ತಿ, ಶಂಕರ ನಾರಾಯಣ ಮತ್ತು ಪದ್ಮನಾಭ ಅಂತ. ಬಹುಷಃ, ಅವರಿಗೂ ನಮ್ಮ ಶ್ರವಂತನ ಗತಿ ಬಂತಿತ್ತೇನೋ, ಅದಕ್ಕೆ ಇವರುಗಳು, ತಮ್ಮ ಹೆಸರನ್ನು ಅಭಾಸ ಆಗದ ಹಾಗೆ ಬಾಲಾಯಿಸಿಕೊಂಡಿರಬೇಕು.
ಪರ ಭಾಷೆ ಸಂಸ್ಕೃತಿ ಜನಗಳು ಒಟ್ಟಿಗೆ ಇದ್ದಾಗ ಈ ತರಹದ ಆಭಾಸಗಳು ಸ್ವಾಭಾವಿಕ. ಆದರೆ ಒಂದೇ ಭಾಷೆ ಇದ್ದೂ ಹ್ರಸ್ವ ಮಹಾ ಪ್ರಾಣಗಳ ತಪ್ಪು ಬಳಕೆಗಳಿಂದ ಆಭಾಸಗಳು ಆಗಿವೆ.
ಕೆಲವರು 'ಆ' ಕಾರ ಮತ್ತು 'ಹ' ಕಾರದ ಉಚ್ಚಾರಣೆ ತಪ್ಪಾಗಿ ಕಲ್ತಿರ್ತಾರೆ. ಆ ತರದವರೊಬ್ಬರು ನಮ್ಮ ತಂಡಕ್ಕೆ ಸೇರಿದರು. ನನ್ನನ್ನು "ಹನೀತಾ" ಎನ್ನುತ್ತಿದ್ದರು. ನಾನು ಎಷ್ಟು ಸರಿ ಮಾಡಿದರು, ಮತ್ತೆ ಹನೀತಾ ಅನ್ನುತ್ತಿದ್ದರು. ನಾನು ನಾಯಿ ಬಾಲ ಡೊಂಕು ಎಂದು ಸುಮ್ಮನಾಗಿದ್ದೆ. ನಮ್ಮ ತಂಡಕ್ಕೆ ಒಬ್ಬ "ಆಜಮ್" ಎಂಬ ಹೆಸರಿನ ಹುಡುಗ ಸೇರಿದ. ಹೊಸ ಹುಡುಗನನ್ನು ಬಹು ಆದರದಿಂದ ನಮ್ಮ ಹ ಕಾರದ ಸಹುದ್ಯೋಗಿ, "ಹಜಾಮ್" "ಹಜಾಮ್" ಅಂತ ಕರೆಯಕ್ಕೆ ಶುರು ಮಾಡಿದ. ನಮಗೆ ನಗು ಒಂದು ಕಡೆ. ಆ ಹುಡುಗನ ಪಾಡು ನೋಡಕ್ಕೆ ಆಗ್ತಾ ಇರ್ಲಿಲ್ಲ. ಕೊನೆಗೆ ಆ ಹುಡುಗ, ನಮ್ಮ ತಂಡ ಬಿಟ್ಟು ಬೇರೆ ತಂಡಕ್ಕೆ ಸೇರಿದ, ದಿನಾ ಹಜಾಮ ಅನ್ನಿಸ್ಕೊಳೋದನ್ನ ತಪ್ಪಿಸ್ಕೊಳಕ್ಕೆ.
ಒಂದು ಸಮಯದಲ್ಲಿ ನಾನು ಎರಡು ಯೋಜನೆಗಳನ್ನು ನಿಭಾಯಿಸ್ತಾ ಇದ್ದೆ. ಒಂದು ಗ್ರಾಹಕಿಯ ಹೆಸರು 'ಚೆಮು' ಹಾಗು ಇನ್ನೊಂದು ಗ್ರಾಹಕಿಯ ಹೆಸರು 'ಎಮಿಲಿ'. ಇಬ್ಬರ ಜೊತೆಯೂ ಒಬ್ಬರಾದ ಮೇಲೆ ಒಬ್ಬರ ಜೊತೆ ದಿನವೂ ಕರೆಯಲ್ಲಿ ಮಾತಾಡುತ್ತಿದ್ದೆ. ಮೊದಲು 'ಚೆಮು' ಜೊತೆ ಕರೆ ಇರ್ತಿತ್ತು. ನನಗೋ, ಎಲ್ಲರ ಹೆಸರನ್ನು ಪದೇ ಪದೇ ಕರೆಯೋ ಅಭ್ಯಾಸ. ಹಿಂದಿನ ಕರೆಯಲ್ಲಿ "ಯಸ್ ಚೆಮು, ನೋ ಚೆಮು, ಒಕೆ ಚೆಮು" ಅಂತ ಹೇಳಿಕೊಂಡು ಎಮಿಲಿಯ ಕರೆಗೆ ಬಂದೆ. ಏನೋ ಗಡಿಬಿಡಿಯಲ್ಲಿ, ಕರೆ ಶುರುವಾದ ತಕ್ಷಣ, "ಹಾಯ್ ಚಮೇಲಿ, ಗುಡ್ ಮಾರ್ನಿಂಗ್" ಅಂದು ಬಿಟ್ಟೆ.
ಈ ಕಡೆ ನನ್ನ ತಂಡದವರು ಕರೆಯನ್ನು ಮ್ಯೂಟ್ ಗೆ ಹಾಕಿ, ಬಿದ್ದು ಬಿದ್ದು ನಗ್ತಾ ಇದ್ದಾರೆ. ನನಗೂ ನಗು. ಸದ್ಯ, ಎಮಿಲಿಗೆ ನಮ್ಮ ಭಾರತೀಯ ಭಾಷೆಗಳು ಬರದೇ ಇದ್ದಿದ್ದರಿಂದ ನನ್ನ ಕೆಲಸು ಉಳೀತು ಅಷ್ಟೇ!
ಹಿಂದೆ ಮಕ್ಕಳಿಗೆ ನಾಮಕರಣ ಮಾಡೋವಾಗ, ಜಾತಕದ ಪ್ರಕಾರ ಬಂದ ಅಕ್ಷರದಿಂದಲೋ ಅಥವಾ ಮನೆಯಲ್ಲಿ ಹಿರಿಯರ ಹೆಸರೋ, ದೇವರ ಹೆಸರೋ ಇಡ್ತಾ ಇದ್ರು. ಈಗ, ಮುಂದೆ ಮಗು ದೊಡ್ಡದಾಗಿ ಯಾವ ದೇಶದಲ್ಲಿ/ದೇಶದವರಿಗೆ ಕೆಲಸ ಮಾಡುತ್ತೋ, ಅವರಿಗೆ ಕರೆಯಲು ಸುಲಭವಾಗುತ್ತೋ ಅನ್ನೋದು ಯೋಚನೆ ಮಾಡೋ ಪರಿಸ್ಥಿತಿ ಬಂದಿದೆ.
ಕಾಲಾಯ ತಸ್ಮೈ ನಮಃ !

ReplyDeleteMaatu aadidre hoitu Muttu hodidre hoitu