ನಮಸ್ಕಾರ!!
ಇದ್ದಕ್ಕಿಂದ್ದಂಗೆ ಇವತ್ತು ಹಳೆ ಚಾಳಿ ಉದ್ಭವ ಆಗಿದೆ. ನನ್ನ ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೋಬೇಕು. ಹಂಚಿಕೊಂಡು, ನನ್ನ ಮನಸ್ಸು ಹಗುರ ಮಾಡಿಕೊಂಡು, ನಿಮ್ಮ ಮನಸ್ಸನ್ನೂ ಸ್ವಲ್ಪ ಹಗುರ ಮಾಡಿಸೋ ಬಯಕೆ.
ನನ್ನ ಲೇಖಕ ಸ್ನೇಹಿತರಿಗೆ ಗೊತ್ತಿರುತ್ತೆ, ಬರೆಯಬೇಕು ಅನ್ನೋ ಹುಚ್ಚು ಹಂಬಲ ಯಾಕೆ ಬರತ್ತೆ ಅಂತ. ನನಗಂತೂ, ಬರೆಯಕ್ಕೆ ಸ್ಪೂರ್ತಿ ಬೇಕು. ಸ್ಪೂರ್ತಿ, ಪ್ರೀತಿ ಪ್ರೇಮ ಇರಬಹುದು, ರೋಷ ದ್ವೇಷ ಇರಬಹುದು. ಇಲ್ಲ ಜೀವನದ ಸವಾಲುಗಳು ಇರಬಹುದು, ಅದು ಲೇಖಕನ ಭಾವಕ್ಕೆ ತಕ್ಕಂತೆ. ಸದ್ಯಕ್ಕೆ ನನಗೆ ಸ್ಪೂರ್ತಿ, ಕಾರ್ಪೊರೇಟ್ ಲೋಕದ ಸವಾಲುಗಳು.
ನಾನು ಒಬ್ಬ ಬಡಪಾಯಿ ಸಾಫ್ಟ್ವೇರ್ ಕೂಲಿ. ಬಡಪಾಯಿ ಯಾಕೆ, ಕೂಲಿ ಯಾಕೆ ಅಂತ ನನ್ನ ಮುಂದಿನ ಸರಣಿ ಲಲಿತ ಪ್ರಸಂಗಗಳಲ್ಲಿ ಹೇಳುವೆ.
ಐ ಟಿ ಲೋಕದ ಜನರನ್ನು ಕಂಡರೆ, ನಾನ್ ಐ ಟಿ ಜನಕ್ಕೆ ಒಂದು ತರ ಬೆರಗು ಮತ್ತು ಅಸೂಯೆ. ಇವರಿಗೇನಪ್ಪಾ, ಕಚೇರಿ ಒಳಗೆ ಕೆಲಸ, ದೊಡ್ಡ ಸಂಬಳ. ಆಗಾಗ ಬೇರೆ ದೇಶ ಸುತ್ತಾಡೋ ಅವಕಾಶ, ವರ್ಕ್ ಫ್ರಮ್ ಹೋಂ. ಇನ್ನೇನು ಬೇಕು ಜೀವನಕ್ಕೆ ಅನ್ನೋ ಭಾವನೆ.
ಹೌದು, ಇದು ಎಲ್ಲ ನಿಜ. ಯಾವ ಕೆಲಸವೂ ಸುಲಭವಲ್ಲ. ಯಾವ ಕೆಲಸವೂ ಮೇಲಲ್ಲ, ಕೀಳಲ್ಲ. ಎಲ್ಲ ಕೆಲಸದಲ್ಲೂ ಅದರದೇ ಆದ ಪರ - ಅಪರಗಳು ಇರುತ್ತವೆ. ಯಾವಾಗಲೂ ದೂರದ ಬೆಟ್ಟ ದುಂಡಗೆನೇ ಕಾಣೋದು. ಬನ್ನಿ.. ಹತ್ತಿರ ಹೋಗಿ, ನಿಧಾನವಾಗಿ ನನ್ನ ಕಣ್ಣೋಟದಿಂದ ಪರಿಚಯಿಸ್ತೀನಿ, ಕಷ್ಟನ ಹೇಗೆ ನಗುನಗುತ್ತಾ ಸ್ವೀಕರಿಸುತ್ತಾರೆ ಈ ಐ ಟಿ ಜನ ಅಂತ!
ಕಾಯ್ತಾ ಇರಿ! ಸದ್ಯದಲ್ಲೇ ಐ ಟಿ ಕಾರ್ಪೊರೇಟ್ ಕಥೆಗಳನ್ನ ತರ್ತೀನಿ.
Super will be waiting for the same
ReplyDeleteMunnudi thumba chennaagidhe... Aadhashtu bega nimma kathegalna nammjothe hanchkoli...
ReplyDeleteMunnudi thumba chennaagidhe... Aadhashtu bega nimma kathegalna nammjothe hanchkoli...
ReplyDelete