Saturday, March 31, 2018

ಮನೆ ಮಂ ಮಂ

ಮನೆ ಊಟ ಮಾಡೋಣ 
ಹೊತ್ತಿಗೆ ಸರಿಯಾಗಿ ತಿನ್ನೋಣ 

ಯಮ್ಮಿ ಯಮ್ಮಿ ಸಾರನ್ನ 
ಅಮ್ಮ ಮಾಡಿದ ಸಾರನ್ನ 
ರುಚಿ ರುಚಿ ಮೊಸರನ್ನ 
ಅಪ್ಪ ತಿನ್ಸಿದ್ ಮೊಸರನ್ನ 

ಶಕ್ತಿ ಬರೋ ಮೊಟ್ಟೆ 
ಬಟ್ಟು ತಿನ್ನೋ ಮೊಟ್ಟೆ 
ಹೆಲ್ದಿ ಹೆಲ್ದಿ ಓಟ್ಸ್
ಅತ್ತೆ ತಿನ್ನೋ ಓಟ್ಸ್ 

ಸೂಪರ್ ಸೂಪರ್ ಪಪ್ಪು 
ಪಾಟಿ ಮಾಡಿದ್ ಪಪ್ಪು 
ಬಬ್ಬಾಯ್ ಬಿಡಿಸೋ ಹಣ್ಣು 
ತಿಂದಿದ್ ಅರಗಿಸೋ ಹಣ್ಣು 

ಸಿಹಿ ಸಿಹಿ ಪಾಯಸ 
ಅಜ್ಜಿ ಕೈಯ ಪಾಯಸ 
ಲೊಟ್ಟೆ ಹೊಡೆಯೋ ಗೊಜ್ಜು 
ತಾತಂಗೆ ಇಷ್ಟ ಗೊಜ್ಜು 

ನಂಗೆ ಇಷ್ಟ ಬಾದಾಮಿ 
ಅಜ್ಜ ತರೋ ಬಾದಾಮಿ 
ಟೇಸ್ಟಿ ಟೇಸ್ಟಿ ವಾಂಗೀಬಾತ್ 
ಅತ್ತಜ್ಜಿ ಮಾಡೋ ವಾಂಗೀಬಾತ್ 

ಬಿಸಿ ಬಿಸಿ ಪಲ್ಯ 
ಚಿತ್ತಿ ಮಾಡೋ ಪಲ್ಯ 
ಮೊಸರಿಬಜ್ಜಿ ಪಲಾವ್ 
ಚಿತ್ತ ತಿನ್ನೋ ಪಲಾವ್ 

ಮನೆ ಊಟ ಮಾಡೋಣ 
ಹೊತ್ತಿಗೆ ಸರಿಯಾಗಿ ತಿನ್ನೋಣ 

No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...