Tuesday, May 4, 2021

ಭಾವನೆಗಳು

 ಆಕಾಶವೇನೋ 

ಆಗಾಗ್ಗೆ 

ಕಂಬನಿಗರೆದು 

ತನ್ನ ದುಃಖ್ಖ 

ಕಕ್ಕಿಬಿಡುತ್ತೆ 


ಭೂಮಿ 

ಕೆಲವೊಮ್ಮೆ ಹೀರಿ 

ಕೆಲವೊಮ್ಮೆ ತೋಯ್ದು 

ಕೆಲವೊಮ್ಮೆ 

ಕೊಚ್ಚಿ ಹೋಗುತ್ತೆ!


ಅವರಿವರ 

ಭಾವಗಳಿಗೆ 

ಬಲಿ ಯಾರು ?  





ಪ್ರಶ್ನೆ

 ಪ್ರಶ್ನೆ 

ಯಾವಾಗಲೂ ಸಾವಿನದ್ದೇ!


ಉತ್ತರಗಳ 

ಹುಡುಕುವ 

ಬದುಕು 

ಮುಗಿವ ವೇಳೆಗೆ 

ಪ್ರಶ್ನೆ 

ಎದ್ದರೇನು 

ಪ್ರಯೋಜನ? 


Sunday, February 28, 2021

ಬದಲಾವಣೆ

ಮನೆಯೇ ಮೊದಲ ಪಾಠಶಾಲೆ
ತಾಯಿಯೇ ಮೊದಲ ಗುರು
ನಮ್ ಕಾಲ

ಇಂಟರ್ನೆಟ್ಟೇ ಮೊದಲ ಪಾಠಶಾಲೆ
ಯು ಟ್ಯೂಬೇ ಮೊದಲ ಗುರು
ನಮ್ ಮಕ್ಕಳ ಕಾಲ!

          - ಅನಿತಾ ನಾಡಿಗ್

Monday, December 7, 2020

ಮನೆ ಊಟ ಮಾಡೋಣ

ಮನೆ ಊಟ ಮಾಡೋಣ 

ಹೊತ್ತಿಗೆ ಸರಿಯಾಗಿ ತಿನ್ನೋಣ 


ಯಮ್ಮಿ ಯಮ್ಮಿ ಸಾರನ್ನ 

ಅಮ್ಮ ಮಾಡಿದ ಸಾರನ್ನ 

ರುಚಿ ರುಚಿ ಮೊಸ್ರನ್ನ 

ಅಪ್ಪ ತಿನ್ನಿಸಿದ ಮೊಸ್ರನ್ನ 


ಶಕ್ತಿ ಬರೋ ಕೋಸಂಬರಿ 

ಅಣ್ಣ ತಿನ್ನೋ ಕೋಸಂಬರಿ

ದಿನಾ ಬೆಳಗ್ಗೆ ಗಂಜಿ

ಪಾಪಂಗೆ ಬೇಕು ಗಂಜಿ


ತರಕಾರಿ ಹಾಕಿದ ಕೂಟು

ಅಜ್ಜಿ ಮಾಡಿದ ಕೂಟು

ಅಜ್ಜ ಬಿಡಿಸಿದ ಹಣ್ಣು

ತಿಂದಿದ್ದ ಅರಗಿಸೋ ಹಣ್ಣು



ಸಿಹಿ ಸಿಹಿ ಪಾಯಸ 

ಅಜ್ಜಿ ಕೈಯ ಪಾಯಸ 

ಲೊಟ್ಟೆ ಹೊಡೆಯೋ ಗೊಜ್ಜು 

ತಾತನಿಗೆ ಇಷ್ಟ ಗೊಜ್ಜು 


ನಂಗೆ ಇಷ್ಟ ಬಾದಾಮಿ 

ಮಾವ ತರೋ  ಬಾದಾಮಿ 

ಖಾರವಾದ ವಾಂಗೀಬಾತ್ 

ಅತ್ತೆ ಮಾಡೋ ವಾಂಗೀಬಾತ್ 


ಬಿಸಿ ಬಿಸಿ ಪಲ್ಯ 

ಚಿಕ್ಕಮ್ಮ ಮಾಡೋ ಪಲ್ಯ 

ಮೊಸರಬಜ್ಜು ಪಲಾವು 

ಚಿಕ್ಕಪ್ಪಂಗೆ  ಇಷ್ಟ ಪಲಾವು 


ಮೆಂತ್ಯ ಸೊಪ್ಪಿನ ಹುಳಿ 

ದೊಡ್ಡಮ್ಮ ಮಾಡೋ ಹುಳಿ 

ಅವಾಗವಾಗ ತಂಬುಳಿ 

ದೊಡ್ಡಪ್ಪಂಗೆ ಬೇಕು ತಂಬುಳಿ 


ತಿಂಗಳಿಗೊಮ್ಮೆ ಮೆಣಸಿನ ಸಾರು 

ಬಾಯಿ ರುಚಿಗೆ ಹುಣಸೆ ಸಾರು 

ಬೇಜಾರಾದ್ರೆ  ಮೆಂಥ್ಯ ಹಿಟ್ಟಿನ ಅನ್ನ

ತಂಗಳನ್ನ ಉಳಿದರೆ ಚಿತ್ರಾನ್ನ  


ಮನೆ ಊಟ ಮಾಡೋಣ 

ಹೊತ್ತಿಗೆ ಸರಿಯಾಗಿ ತಿನ್ನೋಣ 


Tuesday, November 17, 2020

ಕನ್ನಡ ಕಲಿಯಿರಿ

ಹಾಡುತ ಕಲಿಯೋಣ ಬನ್ನಿ ಕನ್ನಡ ಕಲಿಯೋಣ
ನಾವು
ನಲಿಯುತ ಕಲಿಯೋಣ, ಕಲಿತು ಕನ್ನಡ ಕಲಿಸೋಣ

ಮೊದಲ ಹದಿನೈದು ಅಕ್ಷರಗಳ 
ಸ್ವರಗಳು ಎಂದು ಕರೆವರು
ನಂತರ ಬರುವ  ಅಕ್ಷರಗಳೇ
ಮೂವತ್ನಾಲ್ಕು ವ್ಯಂಜನಗಳು

ಹಾಡುತ ಕಲಿಯೋಣ ಬನ್ನಿ ಕನ್ನಡ ಕಲಿಯೋಣ
ನಾವು
ನಲಿಯುತ ಕಲಿಯೋಣ, ಕಲಿತು ಕನ್ನಡ ಕಲಿಸೋಣ

ಸ್ವರಗಳ ಕಲಿಯೋಣ 
ಹದಿನೈದು ಸ್ವರಗಳ ಕಲಿಯೋಣ

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ವ್ಯಂಜನಗಳ ಕಲಿಯೋಣ
ಮೂವತ್ನಾಕು ವ್ಯಂಜನಗಳ ಕಲಿಯೋಣ

ಕ ಖ ಗಘ 
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ವ್ಯಂಜನಗಳ ಕಲಿಯೋಣ
ಮೂವತ್ನಾಕು ವ್ಯಂಜನಗಳ ಕಲಿಯೋಣ

ಹಾಡುತ ಕಲಿತೇವು 
ಕನ್ನಡ ವರ್ಣಮಾಲೆಯ 
ಹಾಡುತ ಕಲಿತೇವು
ನಾವು
ನಲಿಯುತ ಕಲಿತೇವು, ಕನ್ನಡ ವರ್ಣಮಾಲೆಯ ನಲಿಯುತ  ಕಲಿತೇವು

ಒಟ್ಟು ನಲವತ್ತೊಂಭತ್ತು ಅಕ್ಷರವ 
ನಾವು ಹಾಡುತ ಕಲಿತೇವು

ಹಾಡುತ ಕಲಿಯಿರಿ, ಹೌದು
ಕನ್ನಡ ಕಲಿಯಿರಿ
ನೀವು
ನಲಿಯುತ ಕಲಿಯಿರಿ, ಕಲಿತು ಕನ್ನಡ ಕಲಿಸಿರಿ



 

Saturday, February 8, 2020

ಜೋಗುಳ

ನನ್ನ ಮುದ್ದು ಕಂದಾ
ತಾಚಿ ಮಾಡೋ ಕಂದಾ

ಸೂರ್ಯ ಮಾಮ ಟಾಟಾ ಹೇಳಿ
ಮನೆಗೆ ಹೋಗಿರುವಾ
ಬಾನಿನ ತುಂಮಾ ಕತ್ತಲೆ ತುಂಬಿ
ತಾಚಿ ಮಾಡಿರುವಾ 

ನನ್ನ ಮುದ್ದು ಕಂದಾ
ತಾಚಿ ಮಾಡೋ ಕಂದಾ

ಚಂದ ಮಾಮ ಫಳಫಳ ಹೊಳೆಯುತ
ಹಾರಜಿ ಹಾಕಿರುವಾ
ತಾರೆಗಳೊಡಗೂಡಿ ನಮ್ಮಯ ಕಂದಗೆ
ಲಾಲಿ ಹಾಡುತಿರುವಾ
ಜೋಜೋಜೋ
ಜೋಜೋ ಲಾಲಿ ಜೋ
ಜೋಜೋ ಲಾಲಿ ಜೋ 

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...