ಮನೆ ಊಟ ಮಾಡೋಣ
ಹೊತ್ತಿಗೆ ಸರಿಯಾಗಿ ತಿನ್ನೋಣ
ಯಮ್ಮಿ ಯಮ್ಮಿ ಸಾರನ್ನ
ಅಮ್ಮ ಮಾಡಿದ ಸಾರನ್ನ
ರುಚಿ ರುಚಿ ಮೊಸ್ರನ್ನ
ಅಪ್ಪ ತಿನ್ನಿಸಿದ ಮೊಸ್ರನ್ನ
ಶಕ್ತಿ ಬರೋ ಕೋಸಂಬರಿ
ಅಣ್ಣ ತಿನ್ನೋ ಕೋಸಂಬರಿ
ದಿನಾ ಬೆಳಗ್ಗೆ ಗಂಜಿ
ಪಾಪಂಗೆ ಬೇಕು ಗಂಜಿ
ತರಕಾರಿ ಹಾಕಿದ ಕೂಟು
ಅಜ್ಜಿ ಮಾಡಿದ ಕೂಟು
ಅಜ್ಜ ಬಿಡಿಸಿದ ಹಣ್ಣು
ತಿಂದಿದ್ದ ಅರಗಿಸೋ ಹಣ್ಣು
ಸಿಹಿ ಸಿಹಿ ಪಾಯಸ
ಅಜ್ಜಿ ಕೈಯ ಪಾಯಸ
ಲೊಟ್ಟೆ ಹೊಡೆಯೋ ಗೊಜ್ಜು
ತಾತನಿಗೆ ಇಷ್ಟ ಗೊಜ್ಜು
ನಂಗೆ ಇಷ್ಟ ಬಾದಾಮಿ
ಮಾವ ತರೋ ಬಾದಾಮಿ
ಖಾರವಾದ ವಾಂಗೀಬಾತ್
ಅತ್ತೆ ಮಾಡೋ ವಾಂಗೀಬಾತ್
ಬಿಸಿ ಬಿಸಿ ಪಲ್ಯ
ಚಿಕ್ಕಮ್ಮ ಮಾಡೋ ಪಲ್ಯ
ಮೊಸರಬಜ್ಜು ಪಲಾವು
ಚಿಕ್ಕಪ್ಪಂಗೆ ಇಷ್ಟ ಪಲಾವು
ಮೆಂತ್ಯ ಸೊಪ್ಪಿನ ಹುಳಿ
ದೊಡ್ಡಮ್ಮ ಮಾಡೋ ಹುಳಿ
ಅವಾಗವಾಗ ತಂಬುಳಿ
ದೊಡ್ಡಪ್ಪಂಗೆ ಬೇಕು ತಂಬುಳಿ
ತಿಂಗಳಿಗೊಮ್ಮೆ ಮೆಣಸಿನ ಸಾರು
ಬಾಯಿ ರುಚಿಗೆ ಹುಣಸೆ ಸಾರು
ಬೇಜಾರಾದ್ರೆ ಮೆಂಥ್ಯ ಹಿಟ್ಟಿನ ಅನ್ನ
ತಂಗಳನ್ನ ಉಳಿದರೆ ಚಿತ್ರಾನ್ನ
ಮನೆ ಊಟ ಮಾಡೋಣ
ಹೊತ್ತಿಗೆ ಸರಿಯಾಗಿ ತಿನ್ನೋಣ
No comments:
Post a Comment