Saturday, November 2, 2024

ಒಂದು ಪ್ರೇಮ ಕವಿತೆ

ನಾ ನಿನ್ನ 

ಅರಸದೆ, ಬಯಸದೆ 

ನೀ ನನ್ನ 

ಅರಸದೆ, ಬಯಸದೆ 

ವಿಧಿಯು ನಮ್ಮ 

ಕೂಡಿಸಿರೆ


ನಮ್ಮೀ ನಿತ್ಯ ಮಿಲನ 

ಸುದೀರ್ಘ ಪಯಣ  

ಹಾಕಿದೆ ಬುನಾದಿ 

ನನ್ನ ಬದುಕಿಗೆ 


ನನ್ನ ಮನದಲಿ 

ನೀ ಬೆರೆತು ತರುವ 

ರೋಮಾಂಚನ 

ನಿತ್ಯ ನೂತನ.... 


ನಿನ್ನೊಡಗೂಡಿದ 

ಸಂತಸದ ಕ್ಷಣಗಳೆಷ್ಟೋ! 

ನಿನಗಾಗಿ ಹೊಡೆದಾಡಿದ 

ಸಂದರ್ಭಗಳೆಷ್ಟೋ 

ಲೆಕ್ಕವಿಲ್ಲ.... 


ನೀ ಕೊಟ್ಟ 

ಸ್ವಾತಂತ್ರ್ಯ , ಸುರಕ್ಷತೆ   

ಅಪರಿಮಿತ 


ನಾ ಜಗದೊಳು 

ಎಲ್ಲಿದ್ದರೂ 

ನಿನ್ನ ಪರರಲ್ಲಿ ಹುಡುಕುವೆ 

ಪ್ರತಿಸಲ 

ನಿನ್ನ ಪರರಲ್ಲಿ 

ಕಂಡಾಗ 

ಆ ಕ್ಷಣದ ಆನಂದ 

ಅತೀತ 


ನೀ ತೆರೆದಷ್ಟೂ 

ತೆರೆಯುತ್ತಲೇ 

ಹೋಗುವ ರೀತಿ 

ನಿನ್ನ ಅರಿತಷ್ಟೂ 

ಮತ್ತೂ ಅರಿಯುವ ಬಯಕೆ 

ನಿನ್ನರಿಯಲು ಒಂದು ಜನ್ಮ ಸಾಲದೇನೋ!


ಸದಾ ಪ್ರೀತಿಯಿದೆ ನಿನ್ನಲ್ಲಿ 

ನಾ ನಿನ್ನವಳೆಂಬ ಹೆಮ್ಮೆ 


ಮಗದೊಂದು ಜನ್ಮವಿರೆ 

ಆಯ್ಕೆಯ ಹಕ್ಕಿರೆ 

ನಾ ಬಯಸುವೆ ನಿನ್ನ 

ನಿನ್ನನ್ನಾರಿಸುವೆ ಮತ್ತೆ 


ಪದೇ ಪದೇ 

ನಿನ್ನ ಬಣ್ಣಿಸುವ ಬಯಕೆ 

ನಿನ್ನ ಹೊಗಳಿಕೆ 

ಕೇಳುವ ತವಕ 

ಪರರೊಡನೆ ನಿನ್ನ 

ಹಂಚಿಕೊಂಡು, ಬೆಳಸುವ ಇಚ್ಛೆ 


ಹೇ! ಕನ್ನಡ 

ನಿನ್ನಲ್ಲಿ ಅನುರಕ್ತಳಾಗಿ 

ನಿನ್ನ ಭಕ್ತಳಾಗಿ 

ನಿನ್ನ ಪ್ರೇಮಿಯಾಗಿ 

ನಿನ್ನ ಬಳಸಿ, ಬೆಳೆಸಿ

ಉಳಿಸಬೇಕೆಂಬ ಉತ್ಕಟೇಚ್ಛೆ!


ನೀ ನನಗೆ ದಯಪಾಲಿಸಿದ 

ಎಲ್ಲಾ ಗುಣ, ನಡತೆ, ಕೌಶಲ್ಯಗಳಿಗೆ 

ನನ್ನೀ ಅಳಿಲುಸೇವೆ

ಕನ್ನಡದಲ್ಲಿ, ನನ್ನ ಬರವಣಿಗೆ  


Friday, June 14, 2024

ಓ ದೇವಾ

ದೇವನ ನಾಮದಿ 

ಮನುಜನ ಬಯಕೆ 

ದೇವನ ನಾಮದಿ 

ಮನುಜಗೆ ಭಯಕ್ಕೆ 

ದೇವನೆ ನೆಪವೇ 

ಮನುಜನ ಗೀಳಿಗೆ 

ದೇವನ ನೆಪವೇ 

ತಮ್ಮಿಷ್ಟಾರ್ಥ ಸಿದ್ಧಿಗೆ! 



Friday, March 1, 2024

CONFESSION



I was standing there
in the hospital's 
emergency reception

Looking at my distant relative 
Battling for life
at one side
Listening to the Doctor explaining the
huge hospital charges 
on the other side

I felt numb at once
and then 
a huge conflict between my
emotional & rational minds

I was deeply scared and trembled 
at the moment where
her life was at the mercy of my decision

My emotional part urged to consent the emergency treatment & admission
While my rational part
argued with practical reasons
She is single
No family to support

As my rational part continued, You dont know how much it costs? can you sponsor her treatment? She is old, has lived her life...

The doctor otherside pressing me for immediate consent for the emergency treatment

Looking at the old lady on the bed, thinking O Lord, why did you put me in this spot, 
 As I was listening to my rational brain,

My face nodded to the doctor to proceed with treatment, as they rushed her on the stretcher

I sit here outside the ICU after 3 days
Waiting for my turn to visit her
On seeing me from her bed, her eyes widened with a faint smile

Tears rolledout of my eyes, a flash of that difficult moment crossed my mind

I thank my emotional brain, for making that decision for me

A decision in a fraction of a second
A decision that was crucial
A decision that was difficult
A decision which could have led me to a life time guilt! 

A decision of humanity
A decision of compassion
A decision to remember for a life time

29-Feb-2024

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...