Tuesday, December 27, 2022

ಒಳಗಿಲ್ಲ

ತಿಂಗಳ ಆ ಮೂರು ದಿನಗಳು 

'ಅವಳು ಒಳಗಿಲ್ಲ'


ಅರಿಶಿನ ಕುಂಕುಮಕ್ಕೆ 

ಕರೆದರು ಪಕ್ಕದಮನೆಯವರು, 

'ಮಗಳಿಗೂ ಹೇಳಿ, ಕುಂಕುಮಕ್ಕೆ'

'ಅವಳು ಒಳಗಿಲ್ಲ'


ಮದುವೆ ನೆನಪಿಸಿದರು 

ಅತ್ತೆಯ ಅಣ್ಣ 

'ನಾಳೇನೇ ಬಂದುಬಿಡು, 

ಸೊಸೆನೂ ಕರೆದುತಾ'

'ಅವಳು ಒಳಗಿಲ್ಲ'


ದೊಡ್ಡಪ್ಪ ಫೋನಾಯಿಸಿದರು 

'ನಾಳೆ ಪೂಜೆ ಕಣೋ, 

ಹೆಣ್ಮಗಳನ್ನೂ ಕರ್ಕೊಂಡು ಬಾ'

'ಅವಳು ಒಳಗಿಲ್ಲ'


ಅಜ್ಜಿ ಮನೆಯಲ್ಲಿ 

'ಗೆಟ್ ಟುಗೆದರ್, ಎಲ್ಲ ಬನ್ನಿ'

'ನಾವು ಬರ್ತೀವಿ. 

'ಅವಳು ಒಳಗಿಲ್ಲ''


ತಿಂಗಳ ಆ ಮೂರು ದಿನಗಳು 

'ಅವಳು ಒಳಗಿಲ್ಲ'

ಈ ಕಡೆ ಒಳಗೂ ಇಲ್ಲ 

ಹೊರಗೆ ಹೋಗೋ ಹಾಗು ಇಲ್ಲ!

ಅತ್ತಲೂ ಇಲ್ಲ ಇತ್ತಲೂ ಇಲ್ಲದ 

ತ್ರಿಶಂಕು ಸ್ಥಿತಿ - 'ಅವಳು ಒಳಗಿಲ್ಲ'






Monday, December 26, 2022

ಮುಟ್ಟು ಎಂದರೆ ಮುಟ್ಟಬೇಡ

ಹೆಸರು ಮುಟ್ಟು 

ಆದರೆ 

ಪರರ ಮುಟ್ಟುವ 

ಹಾಗಿಲ್ಲ 

ಮುಟ್ಟಿಸಿಕೊಳ್ಳುವ 

ಹಾಗೂ ಇಲ್ಲ 


ಹೆಸರು ಮುಟ್ಟು 

ಅದು ಮುಟ್ಟಬಾರದು 

ಇದು ಮುಟ್ಟಬಾರದು 

ಮುಟ್ಟಿದರೆ ಮೈಲಿಗೆ! 


ಹೆಸರಿಗೆ ಮುಟ್ಟು!

ಏನನ್ನೂ ಮುಟ್ಟದೆ,

ಯಾರನ್ನೂ ಮುಟ್ಟದೆ,

ಹೆಣ್ಣಿನ ಆ ಮೂರು ದಿನಗಳ 

ನೈಸರ್ಗಿಕ ಕ್ರಿಯೆಗೆ ಕಟ್ಟು-

ಪಾಡಿನ ಹೆಸರೇ ಮುಟ್ಟು!

ಮುತ್ತು ಎಂದರೆ ಮುಟ್ಟಬೇಡ  



 

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...