Saturday, August 28, 2021

ಕೃಷ್ಣ ಲೀಲೆ

ಹದಿನಾರು ಸಾವಿರ ಹೆಂಡಿರ 

ಒಲಿಸಿ ನಲಿಸಿದ 
ಧೀರ 
ಆ ಮಾಧವ 

ಒಬ್ಬ 
ಹೆಂಡಿರ 
ಸಂಭಾಳಿಸಲು 
ಒದ್ದಾಡುತ್ತಿರುವ 
ಈ ಮಾನವ! 

Thursday, August 26, 2021

ಅಭಿವ್ಯಕ್ತಿ ಸ್ವಾತಂತ್ರ್ಯ

 ಚೀರಾಡುತ್ತಿದೆ 

ಮನಸ್ಸು 

ಅಭಿವ್ಯಕ್ತಿ 

ಸ್ವಾತಂತ್ರ್ಯಕ್ಕೆ 

ವಾಟ್ಸಾಪ್ 

ಸ್ಟೇಟುಸ್ಸು

-ಗಳಲ್ಲಿ 

ಅಭಿವ್ಯಕ್ತಿ

 ಅಭಿವ್ಯಕ್ತಿ 

ಸ್ವಾತಂತ್ರ್ಯಕ್ಕೆ 

ಹೋರಾಟ 

ಮನಸ್ಸಿನ 

ಚೀರಾಟ 

ವಾಟ್ಸಾಪ್ 

ಸ್ಟೇಟಸ್ಸಲ್ಲಿ 

ಹಾರಾಟ 


- ಅನಿತಾ ನಾಡಿಗ್ 

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...