Saturday, February 8, 2020

ಜೋಗುಳ

ನನ್ನ ಮುದ್ದು ಕಂದಾ
ತಾಚಿ ಮಾಡೋ ಕಂದಾ

ಸೂರ್ಯ ಮಾಮ ಟಾಟಾ ಹೇಳಿ
ಮನೆಗೆ ಹೋಗಿರುವಾ
ಬಾನಿನ ತುಂಮಾ ಕತ್ತಲೆ ತುಂಬಿ
ತಾಚಿ ಮಾಡಿರುವಾ 

ನನ್ನ ಮುದ್ದು ಕಂದಾ
ತಾಚಿ ಮಾಡೋ ಕಂದಾ

ಚಂದ ಮಾಮ ಫಳಫಳ ಹೊಳೆಯುತ
ಹಾರಜಿ ಹಾಕಿರುವಾ
ತಾರೆಗಳೊಡಗೂಡಿ ನಮ್ಮಯ ಕಂದಗೆ
ಲಾಲಿ ಹಾಡುತಿರುವಾ
ಜೋಜೋಜೋ
ಜೋಜೋ ಲಾಲಿ ಜೋ
ಜೋಜೋ ಲಾಲಿ ಜೋ 

Friday, February 7, 2020

ಮಳೆ

ಮಳೆ ಮಳೆ ಮಳೆ ಮಳೆ
ಮಳೆ ಇಷ್ಟ ನಮಗೆ
ಮಳೆ ಮಳೆ ಮಳೆ ಮಳೆ
ಮಳೆ ಬೇಕು ನಮಗೆ
ಮಳೆ ಮಳೆ ಮಳೆ ಮಳೆ
ಮಳೆ ಇಷ್ಟ ನಮಗೆ
ಮಳೆ ಮಳೆ ಮಳೆ ಮಳೆ
ಮಳೆ ಬೇಕು ಎಲ್ಲರಿಗೆ

ಆಕಾಶದಲ್ಲಿ ಹುಟ್ಟಿ
ಕೆಳಗಡೆ ಬೀಳತ್ತೆ
ಭೂಮಿಗೆ ಮುತ್ತಿಟ್ಟು
ನೆಲ ತಂಪು ಮಾಡುತ್ತೆ
ಮಳೆ ಮಳೆ ಮಳೆ ಮಳೆ
ಮಳೆ ಇಷ್ಟ ನಮಗೆ
ಮಳೆ ಮಳೆ ಮಳೆ ಮಳೆ
ಮಳೆ ಬೇಕು ನಮಗೆ

ಕುಡಿಯಕ್ಕೆ ನೀರು ಕೊಡತ್ತೆ
ಬಳಸಕ್ಕೆ ನೀರು ತರತ್ತೆ
ನೀರಿಲ್ಲದೆ ಬೆಳೆ  ಇಲ್ಲ
ನೀರಿಲ್ಲದೆ ಬದುಕಿಲ್ಲ
ಮಳೆ ಮಳೆ ಮಳೆ ಮಳೆ
ಮಳೆ ಇಷ್ಟ ನಮಗೆ
ಮಳೆ ಮಳೆ ಮಳೆ ಮಳೆ
ಮಳೆ ಬೇಕು ನಮಗೆ

ಪುಟ್ಟ ಹನಿ ಬಿದ್ದಾಗ
ಮಳೆಯಲ್ಲಿ ಆಡುವೆ
ದೊಡ್ಡ ಹನಿ ಬಿದ್ದರೆ 
ಮನೆಯೊಳಗೆ ಓಡುವೆ
ಮಳೆ ಮಳೆ ಮಳೆ ಮಳೆ
ಮಳೆ ಇಷ್ಟ ನಮಗೆ
ಮಳೆ ಮಳೆ ಮಳೆ ಮಳೆ
ಮಳೆ ಬೇಕು ನಮಗೆ
ಮಳೆ ಮಳೆ ಮಳೆ ಮಳೆ
ಎಲ್ಲರಿಗೆ ಬೇಕು ಮಳೆ
ಮಳೆ ಮಳೆ ಮಳೆ ಮಳೆ
ಬೇಕೇ ಬೇಕು ಮಳೆ


ಡಾಕ್ಟರ್ ಆಟ

ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ
ಜ್ವರ ಇರಲಿ ತಲೆ ನೋವಿರಲಿ
ನೆಗಡಿ  ಕೆಮ್ಮು ಏನೇ ಇರಲಿ
ಬನ್ನಿ  ನನ್ನ clinic ಗೆ , ಔಷಧಿ ಕೊಡ್ತೀನ್ ನಾನು
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ

ಬನ್ನಿ ಒಳಗೆ ಕೂತ್ಕೋಳಿ ಸರೀಗೆ
ನಾಲಿಗೆ ತೋರ್ಸಿ ನೋಡೋಣ
ಸ್ಥೆಥಾಸ್ಸ್ಕೋಪ್ ಎದೆಗೆ ಇಟ್ಟು
ಹಾರ್ಟು  ಬೀಟು ಕೇಳೋಣ
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ

ಬಿ ಪಿ ಪಲ್ಸು ರೀಡಿಂಗ್ ನೋಡಿ
ನಾರ್ಮಲ್ ಇದೆಯಾ ಬರೆಯೋಣ
ಥರ್ಮಾ ಮೀಟರ್ ಬಾಯೊಳಗಿಟ್ಟು
ಜ್ವರ ಇದ್ದೀಯ ನೋಡೋಣ
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ

ಸ್ವಲ್ಪ ಹುಷಾರಿಲ್ಲ ಅಂದ್ರೆ
ಮಾತ್ರೆಲಿ ವಾಸಿ ಮಾಡೋಣ
ಜಾಸ್ತಿ ಹುಷಾರಿಲ್ಲ ಅಂದ್ರೆ
ಚುಚ್ಚಿಯನ್ನು ಕೊಡೋಣ
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ

ಮಾತ್ರೆ ಚೀಟಿ ಬರೆದು ಕೊಡ್ತೀನಿ
ಸಮಯಕ್ಕೆ ಸರಿಯಾಗಿ ಔಷಧಿ ತೊಗೋಳಿ
ನನ್ನ ಫೀಸು ಕೊಡಿ ನೀವು
ಅದಕ್ಕೆ ಬಿಲ್ಲು ಕೊಡ್ತೀವಿ ನಾವು
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ
ರ ಇರಲಿ ತಲೆ ನೋವಿರಲಿ
ನೆಗಡಿ  ಕೆಮ್ಮು ಏನೇ ಇರಲಿ
ಬನ್ನಿ  ನನ್ನ clinic ಗೆ , ಔಷಧಿ ಕೊಡ್ತೀನ್ ನಾನು
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ
ನಾನು ಡಾಕ್ಟರ್, ನೀವು ಪೇಷಂಟ್
ಬನ್ನಿ ಆಟ ಆಡೋಣ
ಈಗ
ನಾನು ಪೇಷಂಟ್, ನೀವು  ಡಾಕ್ಟರ್
ಬನ್ನಿ ಆಟ ಆಡೋಣ



ಪೀಪೀಪೀ

ಆ ಆ ಆ ಆ ಆ ಆ .....
ಮದುವೇಲಿ...  ಸನಾದಿ...  ಊದಪ್ಪ
ಪಿಪೀಪಿ ಪೀಪಿ 
ಮದುವೇಲಿ...  ಸನಾದಿ...  ಊದಪ್ಪ
ನಮ್ ಅರ್ಜುನ್ ಗಿಷ್ಟ ...
ಮದುವೇಲಿ...  ಸನಾದಿ...  ಊದಪ್ಪ
ನಮ್ ಅರ್ಜುನ್ ಗಿಷ್ಟ ...

ಪಿಪೀಪಿ ಪೀಪಿ  ಪೀಪೀಪೀ
ಪಿಪೀಪಿ ಪೀಪಿ  ಪೀಪೀಪೀ
ಪಿಪೀಪಿ ಪೀಪಿ  ಪೀಪೀಪೀ

ತಬಲಾ ಬಾರಿಸಿ ಮೃದಂಗ ನುಡಿಸಿ
ಶಹನಾಯಿಯನು ಊದುತ ತಾನು
ಅಕ್ಕಪಕ್ಕದವರ ಅರಿವೇ ಇಲ್ಲದೆ ವಾಲಾಗದವರೊಡೆ ತಲ್ಲೀನನಾಗಿ .... 

ಪಿಪೀಪಿ ಪೀಪಿ  ಪೀಪೀಪೀ
ಪಿಪೀಪಿ ಪೀಪಿ  ಪೀಪೀಪೀ
ಪಿಪೀಪಿ ಪೀಪಿ  ಪೀಪೀಪೀ
ಮದುವೇಲಿ...  ಸನಾದಿ...  ಊದಪ್ಪ
ನಮ್ ಅರ್ಜುನ್ ಗಿಷ್ಟ ...
ಮದುವೇಲಿ...  ಸನಾದಿ...  ಊದಪ್ಪ
ನಮ್ ಅರ್ಜುನ್ ಗಿಷ್ಟ ...
ಪಿಪೀ......

ಹಲ್ಲು ಉಜ್ತೀನಿ

ಹಲ್ಲು ಉಜ್ತೀನಿ ನಾನು ಹಲ್ಲು ಉಜ್ತೀನಿ
ಬೆಳಗಾಗೆದ್ದ ಬೆಳಗಾಗೆದ್ದ ತಕ್ಷಣ ಹಲ್ಲು ಉಜ್ತೀನಿ
ಹಲ್ಲು ಉಜ್ತೀನಿ ನಾನು ಹಲ್ಲು ಉಜ್ತೀನಿ
ಬೆಳಗಾಗೆದ್ದ ಬೆಳಗಾಗೆದ್ದ ತಕ್ಷಣ ಹಲ್ಲು ಉಜ್ತೀನ
ಜುಕು ಜುಕು ಜುಕ್ ಜುಕು ಜುಕು ಜುಕ್
ಜುಕು ಜುಕು ಜುಕ್ ಜುಕು ಜುಕು ಜುಕ್
ನಾಲಿಗೆ ತಿಕ್ತೀನಿ ನಾನು ನಾಲಿಗೆ ತಿಕ್ತೀನಿ
ಹಲ್ಲು ಉಜ್ಜಿದ ಮೇಲೆ ನಾನು ನಾಲಿಗೆ ತಿಕ್ತೀನಿ
ಆಅ ಅಅ ಆಅ ಅಅ
ಆಅ ಅಅ ಆಅ ಅಅ

ಬಾಚಿ ಹಲ್ಲು ಕೋರೆ ಹಲ್ಲು
ದವಡೆ ಹಲ್ಲು ಎಲ್ಲ ಹಲ್ಲು
ಮೇಲೆ ಕೆಳಗೆ ಮುಂದೆ ಹಿಂದೆ
ಸಂದಿ ಗೊಂದಿ ಎಲ್ಲ ಒಳಗೆ

ಹಲ್ಲು ಉಜ್ತೀನಿ ನಾನು ಹಲ್ಲು ಉಜ್ತೀನಿ
ಬೆಳಗಾಗೆದ್ದ ಬೆಳಗಾಗೆದ್ದ ತಕ್ಷಣ ಹಲ್ಲು ಉಜ್ತೀನಿ
ಹಲ್ಲು ಉಜ್ತೀನಿ ನಾನು ಹಲ್ಲು ಉಜ್ತೀನಿ
ರಾತ್ರಿ ಮಲಗಕ್ಕೆ ಮುಂಚೆ ನಾನು ಹಲ್ಲು ಉಜ್ತೀನಿ

ಫಳಫಳ ಹೊಳೆಯುವ ನನ್ನ ಹಲ್ಲು
ಘಮ ಘಮ ಎನ್ನುವ ನನ್ನ ಬಾಯಿ
ಗಟ್ಟಿ ಪದಾರ್ಥ ಕಡಿಯುವ ಹಲ್ಲು
ನಕ್ಕರೆ ಹೊಳೆಯುವ ನನ್ನ ಹಲ್ಲು
ಹಲ್ಲು ಉಜ್ತೀನಿ ನಾನು ಹಲ್ಲು ಉಜ್ತೀನಿ
ರಾತ್ರಿ ಮಲಗಕ್ಕೆ ಮುಂಚೆ ನಾನು ಹಲ್ಲು ಉಜ್ತೀನಿ
ಹಲ್ಲು ಉಜ್ತೀನಿ ನಾನು ಹಲ್ಲು ಉಜ್ತೀನಿ
ರಾತ್ರಿ ಮಲಗಕ್ಕೆ ಮುಂಚೆ ನಾನು ಹಲ್ಲು ಉಜ್ತೀನಿ
ಜುಕು ಜುಕು ಜುಕ್ ಜುಕು ಜುಕು ಜುಕ್
ಜುಕು ಜುಕು ಜುಕ್ ಜುಕು ಜುಕು ಜುಕ್
ನಾಲಿಗೆ ತಿಕ್ತೀನಿ ನಾನು ನಾಲಿಗೆ ತಿಕ್ತೀನಿ
ಹಲ್ಲು ಉಜ್ಜಿದ ಮೇಲೆ ನಾನು ನಾಲಿಗೆ ತಿಕ್ತೀನಿ
ಆಅ ಅಅ ಆಅ ಅಅ
ಆಅ ಅಅ ಆಅ ಅಅ

ಡುಮುಟಕ

ಡುಮುಟಕ ಟಕಟಕ
ಟಕಟಕ ಟಕಟಕ
ಟಕಟಕ ಡುಮುಟಕ
ಡುಮುಟಕ ಟಕಟಕ
ಡುಮುಟಕ ಟಕಟಕ
ಟಕಟಕ ಟಕಟಕ

ತಬಲ ತಬಲ ತಬಲ
ಬಾರಿಸೋಣ ತಬಲ
ತಬಲ ತಬಲ ತಬಲ
ಬಾರಿಸೋಣ ತಬಲ
ಗೆ ಗೆ ಟೆ ಟ 
ಗೆ ಗೆ ನ ನ
ಕೆ ಕೆ ಟೆ ಟ 
ಗೆ ಗೆ ನ ನ
ಗೆ ಗೆ ಟೆ ಟ 
ಗೆ ಗೆ ನ ನ
ಕೆ ಕೆ ಟೆ ಟ 
ಗೆ ಗೆ ನ ನ

ಮೃದಂಗ ಮೃದಂಗ
ಎರಡು ಕೈಯಲ್ಲಿ ಮೃದಂಗ
ಮೃದಂಗ ಮೃದಂಗ
ಎರಡು ಕೈಯಲ್ಲಿ ಮೃದಂಗ
ತೇ ರೇ ಕೆ ಟ
ತೇ ರೇ ಕೆ ಟ
ತೇ ರೇ ಕೆ ಟ
ತೇ ರೇ ಕೆ ಟ

ತಮಟೆ ತಮಟೆ
ಬಡಿಯೋಣ ತಮಟೆ
ತಮಟೆ ತಮಟೆ
ಬಡಿಯೋಣ ತಮಟೆ
ಡೊಳ್ಳುಮ್ ದಿಷುಮ್ 
ಡೊಳ್ಳುಮ್ ದಿಷುಮ್ 
ಡೊಳ್ಳುಮ್ ದಿಷುಮ್  ಡೊಳ್ಳುಮ್ ದಿಷುಮ್ 
ಡೊಳ್ಳುಮ್ ದಿಷುಮ್  ಡೊಳ್ಳುಮ್ ದಿಷುಮ್ 
ಡೊಳ್ಳುಮ್ ಡೊಳ್ಳುಮ್
ಡೊಳ್ಳುಮ್ ದಿಷುಮ್

ಘಟ ಘಟ ಘಟ
ಮಣ್ಣಿನ ಘಟ
ಘಟ ಘಟ ಘಟ
ಮಣ್ಣಿನ ಘಟ
ತ ತ ತ ತರಿ ತರಿ ತರಿಕಿಟ ತ
ತ ತರಿ ತರಿಕಿಟ ತ
ತರಿಕಿಟ ಧೀ ಧೀ ಧೀ
ತರಿ ತರಿಕಿಟ ತ ಧೀ

ಡುಮುಟಕ ಟಕಟಕ
ಟಕಟಕ ಟಕಟಕ
ಟಕಟಕ ಡುಮುಟಕ
ಡುಮುಟಕ ಟಕಟಕ
ಡುಮುಟಕ ಟಕಟಕ
ಟಕಟಕ ಟಕಟಕ

ಬೆಕ್ಕು

ಬೆಕ್ಕು ಬೆಕ್ಕು ಬೆಕ್ಕು
ಮಿಯಾವ್ ಮಿಯಾವ್ ಬೆಕ್ಕು
ಹಾಲು ಕುಡಿಯೋ ಬೆಕ್ಕು
ಇಲಿ ಹಿಡಿಯೋ ಬೆಕ್ಕು

ಬೆಕ್ಕು ಬೆಕ್ಕು ಬೆಕ್ಕು
ಮಿಯಾವ್ ಮಿಯಾವ್ ಬೆಕ್ಕು
ತೀಕ್ಷ್ಣ ಕಣ್ಣಿನ ಬೆಕ್ಕು
ಚುರುಕು ಕಿವಿಯ ಬೆಕ್ಕು

ಬೆಕ್ಕು ಬೆಕ್ಕು ಬೆಕ್ಕು
ಮಿಯಾವ್ ಮಿಯಾವ್ ಬೆಕ್ಕು
ಹರಿತ ಹಲ್ಲಿನ ಬೆಕ್ಕು
ಚೂಪು ಉಗುರಿನ ಬೆಕ್ಕು

ಬೆಕ್ಕು ಬೆಕ್ಕು ಬೆಕ್ಕು
ಮಿಯಾವ್ ಮಿಯಾವ್ ಬೆಕ್ಕು
ಸದ್ದು  ಮಾಡದ ಬೆಕ್ಕು
ಚಂಗನೆ ಹಾರೋ ಬೆಕ್ಕು

ಬೆಕ್ಕು ಬೆಕ್ಕು ಬೆಕ್ಕು
ಮಿಯಾವ್ ಮಿಯಾವ್ ಬೆಕ್ಕು
ಮುದ್ದು ಮುಖದ ಬೆಕ್ಕು
ನನಗೆ ಇಷ್ಟ ಬೆಕ್ಕು

ಬೆಕ್ಕು ಬೆಕ್ಕು ಬೆಕ್ಕು
ಮಿಯಾವ್ ಮಿಯಾವ್ ಬೆಕ್ಕು
ಹಾಲು ಕುಡಿಯೋ ಬೆಕ್ಕು

ಇಲಿ ಹಿಡಿಯೋ ಬೆಕ್ಕು



ಚಿಟ್ಟೆ

ಚಿಟ್ಟೆ ಚಿಟ್ಟೆ
ಬಣ್ಣದ ಚಿಟ್ಟೆ

ಚಿಟ್ಟೆ ಚಿಟ್ಟೆ
ಬಣ್ಣದ ಚಿಟ್ಟೆ
ಅಂದವ ನೋಡಿ
ನಾ ಖುಷಿ ಪಟ್ಟೆ

ಚಿಟ್ಟೆ ಚಿಟ್ಟೆ
ಬಣ್ಣದ ಚಿಟ್ಟೆ

ಹೂವಿಂದ ಹೂವಿಗೆ
ಹಾರುವ ಚಿಟ್ಟೆ
 ಮಕರಂದ ಹೀರಿ
ತುಂಬಿಸುವೆ ಹೊಟ್ಟೆ

ಚಿಟ್ಟೆ ಚಿಟ್ಟೆ
ಬಣ್ಣದ ಚಿಟ್ಟೆ

ಹಾರುವ ನಿನ್ನ
ನೋಡಲೇ ಚಂದ
ಚಿತ್ತಾರ ನೋಡಲು
ಮನಕಾನಂದ

ಚಿಟ್ಟೆ ಚಿಟ್ಟೆ
ಬಣ್ಣದ ಚಿಟ್ಟೆ

ಇಲ್ಲಿದ್ದೆ  ಈ ಕ್ಷಣ
ಇಲ್ಲಿಲ್ಲ ಮರು ಕ್ಷಣ
ಪುಟ್ಟ ರೆಕ್ಕೆ ಬಡಿಯುತ
ಪಟ ಪಟ ಹಾರುತ

ಚಿಟ್ಟೆ ಚಿಟ್ಟೆ
ಬಣ್ಣದ ಚಿಟ್ಟೆ
ಅಂದವ ನೋಡಿ
ನಾ ಖುಷಿ ಪಟ್ಟೆ


ಮಂಗಣ್ಣ

ಮಂಗಣ್ಣ ಮಂಗಣ್ಣ
ಹಲ್ಲು ಕಿರಿಯೋ ಮಂಗಣ್ಣ
ಮಂಗಣ್ಣ ಮಂಗಣ್ಣ
ಗುರ್ಗುಡೋ  ಮಂಗಣ್ಣ

ಕೋತಿಯು ನೀನೆ ಕಪೀಶನು ನೀನೆ
ಹನುಮಂತ ಆಂಜನೇಯ ಮಾರುತಿಯು ನೀನೆ
ಕೋತಿಯು ನೀನೆ ಕಪೀಶನು ನೀನೆ
ಹನುಮಂತ ಆಂಜನೇಯ ಮಾರುತಿಯು ನೀನೆ

ಮಂಗಣ್ಣ ಮಂಗಣ್ಣ
ಹಲ್ಲು ಕಿರಿಯೋ ಮಂಗಣ್ಣ
ಮಂಗಣ್ಣ ಮಂಗಣ್ಣ
ಗುರ್ಗುಡೋ  ಮಂಗಣ್ಣ

ಮಂಗನಿಂದ ಮಾನವ  ಅಂತಾರೆ ತಿಳಿದೋರು
ಭಯ ಆದ್ರೆ  ನಿನ್ನ ಜಪಿಸು ಅಂತಾರೆ ದೊಡ್ಡೋರು
ಪ್ರಾಣಿಯೋ ನೀನು ದೇವನೋ ನೀನು
ಗೊಂದಲವೋ ನನಗೆ ವಾಯು ಪುತ್ರನೇ
ಗೊಂದಲವೋ ನನಗೆ ಭೀಮನಾಗ್ರಜನೆ

ಮಂಗಣ್ಣ ಮಂಗಣ್ಣ
ಹಲ್ಲು ಕಿರಿಯೋ ಮಂಗಣ್ಣ
ಮಂಗಣ್ಣ ಮಂಗಣ್ಣ
ಲಾಗ ಹಾಕೋ ಮಂಗಣ್ಣ

ಗುಡಿಯಲಿ ನಿನಗೆ ಕೈ ಮುಗಿ ಅಂತಾರೆ
ಹೊರಗಡೆ ಸಿಕ್ಕರೆ ಹತ್ತಿರ ಹೋಗಬೇಡ ಅಂತಾರೆ
ಪ್ರಾಣಿಯೋ ನೀನು ದೇವನೋ ನೀನು
ಗೊಂದಲವೋ ನನಗೆ ವಾಯು ಪುತ್ರನೇ
ಗೊಂದಲವೋ ನನಗೆ ಭೀಮನಾಗ್ರಜನೆ


ಮಂಗಣ್ಣ ಮಂಗಣ್ಣ
ಹಲ್ಲು ಕಿರಿಯೋ ಮಂಗಣ್ಣ
ಮಂಗಣ್ಣ ಮಂಗಣ್ಣ
ಗುರ್ಗುಡೋ  ಮಂಗಣ್ಣ
ಮಂಗಣ್ಣ ಮಂಗಣ್ಣ
ಲಾಗ ಹಾಕೋ ಮಂಗಣ್ಣ





ನಮ್ಮ ಬಾವುಟ

ನೋಡು ನಮ್ಮ ಬಾವುಟ
ನಮ್ಮ ದೇಶದ ಬಾವುಟ
ನೋಡು ನಮ್ಮ ಬಾವುಟ
ನಮ್ಮ ಭಾರತದ ಬಾವುಟ

ಕೇಸರಿ ಬಿಳಿ ಹಸಿರು ಬಣ್ಣ
ನಡುವೆ ನೀಲಿ ಚಕ್ರ ಅಣ್ಣ
ಖಾದಿ ನೂಲ ಬಾವುಟ
ನಮ್ಮ ದೇಶದ ಬಾವುಟ
ನೋಡು ನಮ್ಮ ಬಾವುಟ
ನಮ್ಮ ಭಾರತದ ಬಾವುಟ

ಶೌರ್ಯ ಮತ್ತು ಸಾಹಸಕ್ಕೆ ಕೆಸರಿಯ ಬಣ್ಣ
ಶಾಂತಿ ಪ್ರಾಮಾಣಿಕತೆಗೆ ಶುಭ್ರ ಬಿಳಿಯ ಬಣ್ಣ
ವಿಶ್ವಾಸ ಸಂಪತ್ತಿಗೆ ಹಸಿರು ಬಣ್ಣ ಅಣ್ಣ
ನೋಡು ನಮ್ಮ ಬಾವುಟ
ನಮ್ಮ ದೇಶದ ಬಾವುಟ
ನೋಡು ನಮ್ಮ ಬಾವುಟ
ನಮ್ಮ ಭಾರತದ ಬಾವುಟ
ಪ್ರಗತಿ ಸಂಕೇತ ಚಕ್ರ
ಅದುವೇ ಅಶೋಕ ಚಕ್ರ
24 ಗೆರೆಯ ಚಕ್ರ
ಅದುವೇ ಧರ್ಮ ಚಕ್ರ
ನೋಡು ನಮ್ಮ ಬಾವುಟ
ನಮ್ಮ ದೇಶದ ಬಾವುಟ
ನೋಡು ನಮ್ಮ ಬಾವುಟ
ನಮ್ಮ ಭಾರತದ ಬಾವುಟ

ಏರೋಪ್ಲೇನ್ ಏರೋಪ್ಲೇನ್

ಏರೋಪ್ಲೇನ್ ಏರೋಪ್ಲೇನ್
ನೆಲದಿಂದ ಏರಿ ಮೇಲಕ್ಕೆ ಹಾರಿ
ಬಾನಲ್ಲಿ ತೇಲುವ ಏರೋಪ್ಲೇನ್
ಮೋಡವ ಸೀಳಿ ಧೈರ್ಯದಿ ನುಗ್ಗುವ
ನನ್ನಯ ಪ್ರೀತಿಯ ಏರೋಪ್ಲೇನ್
ಏರೋಪ್ಲೇನ್ ಏರೋಪ್ಲೇನ್

ರೆಕ್ಕೆಯ ಪಡೆಯದೆ ನೀರನ್ನು ಕುಡಿಯದೆ
ಗಗನದಿ ಹಾರೋ ಏರೋಪ್ಲೇನ್
ಕಾಳನು ಹೆಕ್ಕದೆ ಗೂಡನು ಕಟ್ಟದೆ
ಹಕ್ಕಿಯ ಹಾಗಿರೋ ಏರೋಪ್ಲೇನ್
ಏರೋಪ್ಲೇನ್ ಏರೋಪ್ಲೇನ್

ದೂರದ ಊರಿಗೆ ವೇಗದಿ ತಲುಪಿ ಸೊ
ವಿಸ್ಮಯಕಾರಿ ಏರೋಪ್ಲೇನ್
ನಿನ್ನಯ ಮಡಿಲಲ್ಲಿ ಸುರಕ್ಷಿತವಾಗಿ
ಊರಿಗೆ ತಲುಪಿ ಸೋ ಏರೋಪ್ಲೇನ್
ಏರೋಪ್ಲೇನ್ ಏರೋಪ್ಲೇನ್

ಶಾಲೆಗೆ ಹೊರಟಿರಾ

ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ
ಆಟವಾಡಿ ಪಾಠ ಓದಿ ಒಳ್ಳೆಯ ಮಕ್ಕಳಾಗಿ ನೀವು
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ

ಬೆಳಗಾಗೆದ್ದು ದೇವಗೆ ಮುಗಿದು
ಹಲ್ಲನ್ನು ಉಜ್ಜಿ ಹಾಲನು ಕುಡಿದು
ವಾಕಿಂಗ್ ಮುಗಿಸಿ ಸ್ನಾನವ ಮಾಡಿ
ಬಟ್ಟೆಯ ತೊಟ್ಟು ತಿಂಡಿಗೆ ಬಂದು
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ

ಅಮ್ಮನ ಮಾಡಿದ ತಿಂಡಿಯ ತಿಂದು
ತಲೆಯ ಬಾಚಿ ಪುಸ್ತಕ ಜೋಡಿಸಿ
ಊಟದ ಡಬ್ಬಿ ಜೊತೆಗೆ ತೊಗೊಂಡು
ಸುಜನ ಹಾಕಿ ರೆಡಿಯಾಗಿ
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ

ಸ್ಕೂಲಲ್ಲಿ ಗೆಳೆಯರ ಜೊತೆಯಲ್ಲಿ ಆಡಿ
ಗುರುಗಳು ಹೇಳಿದ ಪಾಠವ ಕೇಳಿ
ಕುಣಿದು ನೆಗೆದು ನಕ್ಕು ಓಡಿ
ಓದಿ ಬರೆದು ಊಟವ ಮಾಡಿ
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ ಗಳಾಗಿ

ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ
ಆಟವಾಡಿ ಪಾಠ ಓದಿ ಒಳ್ಳೆಯ ಮಕ್ಕಳಾಗಿ ನೀವು
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ
ಶಾಲೆಗೆ ಹೊರಟಿರಾ ನೀವು ಶಾಲೆಗೆ ಹೊರಟಿರಾ

ವಾರಗಳು

ಸೋಮವಾರ ಸೌತೆಕಾಯಿ
ಮಂಗಳವಾರ ಮಂಗಳೂರು ಸೌತೆ
ಬುಧವಾರ ಬೂದುಗುಂಬಳ
ಗುರುವಾರ ಗೆಣಸು
ಶುಕ್ರವಾರ ಶನಿವಾರ ಸೊಪ್ಪೋ ಸೊಪ್ಪು
ಭಾನುವಾರ ಬೆಂಡೆಕಾಯಿ
7 ದಿನಕ್ಕೆ ಬೇರೆ ಬೇರೆ ಕಾಯಿ

ತಿಂಗಳ ಆಟ, ವರ್ಷದ ನೋಟ

ಜನವರಿ ಸಂಕ್ರಾಂತಿ
ಫೆಬ್ರವರಿ ಶಿವರಾತ್ರಿ
ಮಾರ್ಚಿ ಗೆ ಸ್ಕೂಲ್ ಮುಗಿದು
ಏಪ್ರಿಲ್ ಗೆ ರಜ ಶುರು
ಮೇನಲ್ಲಿ ಸುಡು ಬೇಸಿಗೆ
ಜೂನ್ನಲ್ಲಿ ಸ್ಕೂಲ್ ತೆರೆದು
ಜುಲೈಯಲ್ಲಿ ಮಳೆ ಬಂದು
ಆಗಸ್ಟ್ ಗೆ ಸ್ವತಂತ್ರ ದಿನಾಚರಣೆ
ಸಪ್ಟೆಂಬರ್ ಗೌರಿ ಗಣೇಶ
ಅಕ್ಟೋಬರ್ ನವರಾತ್ರಿ
ನವೆಂಬರ್ ದೀಪಾವಳಿ
ಡಿಸೆಂಬರ್ ಚಳಿ ಚಳಿ
12 ತಿಂಗಳು ನಮಗೆ ಮಜಾ

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...