Friday, January 10, 2020

ಭಾವ ಸ್ಪಂದನ

ಕವಿ
ಕವಿತೆಯ
ಜನ್ಮದಾತ
ಓದುಗ
ಜೀವದಾತ

Wednesday, January 8, 2020

ಭಾವನೆಗಳ
ಅರಿಯಲು
ಹೃದಯ
ಬಗೆಯಬೇಕಿಲ್ಲ
ವರ್ತನೆಯೇ
ಹೇಳುತ್ತದಲ್ಲ! 

Monday, January 6, 2020

ಗುರಿಯೊಂದೇ ದಾರಿ ಹಲವು

ಭಾವನೆಗಳ
ತಣಿಸಲು
ಮಣಿಸಲು
ಕುಡುಕನಿಗೆ
ಬೇಕು
ಹೆಂಡ ಸಾರಾಯಿ
ಕವಿಗೆ
ಲೇಖನಿ ಶಾಯಿ!!

Saturday, January 4, 2020

ಮೂರ್ತಿ ಚಿಕ್ಕದಾದರೂ

ಕಾವ್ಯ
ದಪ್ಪ ಮೆಣಸಿನಕಾಯಿ
ಕವಿತೆ
ಬ್ಯಾಡಗಿ ಕಾಯಿ
ಚುಟುಕ
ಚೋಟ್ ಮೆಣಸಿನಕಾಯಿ!

ಕಾವ್ಯ

ಬದುಕಿಗೆ ಕಾವ್ಯವೋ?
ಕಾವ್ಯಕ್ಕಾಗಿ ಬದುಕೋ?
ಅಲ್ಲ..
ಕವಿಗೆ ಕಾವ್ಯ
ಅವ ಬದುಕಲು ಕಾವ್ಯ...

ಭಾವಕ್ಕೆ ತಕ್ಕಂತೆ

ಕುಡುಕನಿಗೆ
ಸುಖಕ್ಕೂ ದುಃಖಕ್ಕೂ
ಎಣ್ಣೆ..
ಲೇಖಕನಿಗೆ
ಸುಖಕ್ಕೂ ದುಃಖಕ್ಕೂ
ಪೆನ್ನೆ

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...