ಕಾಲೇಜು ಅಂದಮೇಲೆ ಪರೀಕ್ಷೆ ಇದ್ದೇ ಇರುತ್ತೆ. ಪರೀಕ್ಷೆಗಳಲ್ಲಿ ಮೂರು ತರ. ಒಂದು ಇಂಟರ್ನಲ್ಸ್ - ಮುಖ್ಯ ಪರೀಕ್ಷೆಗೆ ಮುಂಚೆ ಕಿರು ಪರೀಕ್ಷೆಗಳು. ಎರಡನೆಯದು ಲ್ಯಾಬ್ ಪರೀಕ್ಷೆ. ಮೂರನೆಯದು ಮುಖ್ಯ ಪರೀಕ್ಷೆ. ವಿದ್ಯಾರ್ಥಿಗಳಾಗಿ ನಾವು ಒಂದೊಂದಕ್ಕೂ ಒಂದೊಂದು ತರ ಅವತಾರ, ಒಂದೊಂದು ತರ ತಯಾರಿ ಮಾಡ್ತಿದ್ವಿ. ಈ ಮುಕ್ತಕದಲ್ಲಿ, ಕಿರಿ ಪರೀಕ್ಷೆಯ ಅನುಭವಗಳನ್ನು ಹೇಳುವೆ.
ಇಂಟರ್ನಲ್ಸ್ ೨೫ ಅಂಕಗಳಿಗೆ ಇರ್ತಾ ಇತ್ತು. ೧೫/೨೫ ಬಂದರೆ ಸುರಕ್ಷಿತ ಅಂತ ಅರ್ಥ. ೩ ಇಂಟರ್ನಲ್ಸ್ ಬರೆದು, ಅದರಲ್ಲಿ ಸರಾಸರಿ ಅಂಕಗಳನ್ನು ಕೊನೆ ಪರೀಕ್ಷೆಗೆ ಸೇರಿಸ್ಕೊತ ಇದ್ರು.
ಸುಮಾರು ವಿದ್ಯಾರ್ಥಿಗಳು ೧೫ ಅಂಕಗಳನ್ನು ಪಡೆಯಕ್ಕೆ ಗುರಿ ಇಡೋರು. ಹಾಗಾಗಿ, ತುಂಬಾ ತಲೆ ಕೆಡಿಸ್ಕೊಂಡು ಓದ್ತಾ ಇರಲಿಲ್ಲ. ಅದು ಅಲ್ಲದೆ ಸುಮಾರು ಜನ ನಕಲು (copy) ಮಾಡೋರು. ಅದ್ರಲ್ಲೂ ನಮ್ಮ ಎಲೆಕ್ಟ್ರಿಕಲ್ ಬ್ರಾಂಚ್ ಅಂತೂ ತೂಕು ಹೊಡೆಯೋದಕ್ಕೆ ತುಂಬಾ ಪ್ರಸಿದ್ಧಿಯಲ್ಲಿತ್ತು. ಎಲ್ಲ ಹೊಸದಾಗಿ ಸೇರಿದ ಕಿರಿಯ ಸಹಪಾಠಿಗಳಿಗೆ, ಹಿರಿಯ ಸಹಪಾಠಿಗಳು, ಮೊದಲ ವರುಷ ಕೊಡುವ ಪ್ರಪ್ರಥಮ ತರಬೇತಿಯೆಂದರೆ, ಬ್ರಾಂಚ್ ವಿಷಯಗಳು ಪ್ರಾರಂಭವಾದ ಮೇಲೆ ನಪಾಸಾದರೆ ಬೇಜಾರು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು. ತಮ್ಮ ಅನುಭವಗಳನ್ನು ಚಿತ್ರ ವಿಚಿತ್ರವಾಗಿ ಬಣ್ಣಿಸಿ, ಅರ್ಧ ತಾವು ನಪಾಸಾಗೋದಕ್ಕೆ ತಮ್ಮ ಉಪನ್ಯಾಸಕರನ್ನ ಜವಾಬ್ದಾರರನ್ನಾಗಿ ಮಾಡಿ ತಮ್ಮಅಪರಾಧೀ ಮನೋಭಾವವನ್ನು ಕಮ್ಮಿ ಮಾಡಿಕೊಳ್ಳುತ್ತ ಇದ್ದರು.
ನಮ್ಮಪ್ಪ, ಕೆ. ಇ. ಬಿ ನಲ್ಲಿಯೇ ಕೆಲಸ ಮಾಡ್ತಾ ಇದ್ದಿದ್ರಿಂದ, ನನಗೆ ಇಷ್ಟವಿಲ್ಲದಿದ್ದರೂ, ಅವರು ಎಲೆಕ್ಟ್ರಿಕಲ್ ಅಂತ ನನಗೂ ಎಲೆಕ್ಟ್ರಿಕಲ್ ಕೊಡ್ಸಿದ್ರು. ಹಿರಿಯ ಸಹಪಾಠಿಗಳು ನನ್ನನ್ನು ಮಾನಸಿಕವಾಗಿ ನಪಾಸಾಗಲು ಸಿದ್ಧ ಮಾಡಿದ್ದರು!
ನಮಗೆ ಒಂದು 'solid state drives ' ಅನ್ನೋ ಒಂದು ವಿಷಯ ಇತ್ತು. ಅದು ಸಾಲಿಡ್ಡೋ, liquid ಓ. ನಮಗೆ ಮಾತ್ರ volatile ಆಗ್ತಾ ಇತ್ತು. ಪಾಪ ಆ ಉಪನ್ಯಾಸಕರು ನಮಗೆ ಅರ್ಥ ಆಗಲಿ ಅಂತ ತರಗತಿ ವೇಳೆ ಮುಗಿದ ಮೇಲೂ ಪಾಠ ಮಾಡಕ್ಕೆ, ನಮ್ಮ ತಲೆ ಒಳಗೆ ಒಂಚೂರು ಏನು ಹೋಗ್ತಾ ಇರಲಿಲ್ಲ. ಎಲ್ಲ 'over head transmission ' ಆಗ್ತಾ ಇತ್ತು.
ಈ ವಿಷಯದ ಇಂಟರ್ನಲ್ಸ್ ಒಂದು ದಿನದ ಹಿಂದೆ ಘೋಷಣೆ ಮಾಡಿದ್ರು, ನಾಳೆ ಉಪ ಪರೀಕ್ಷೆ ಅಂತ! ಒಂದುವಾರ ಸಮಯ ಇದ್ದಿದ್ರೆ ಹೇಗೋ, ಹಾಗೂ ಹೀಗೂ ಓದ್ಕೊಂಡ್ ಬರೀಬೋದಿತ್ತು. ಒಂದೇ ದಿನ ಸಮಯ ಇದ್ದಿದ್ದು. ನನ್ನ ಗೆಳೆಯ ಗೆಳತಿಯರು ಯಾರೂ ಒತ್ತಡದಲ್ಲಿ ಇದ್ದ ಹಾಗೆ ಕಾಣಲಿಲ್ಲ. ಬದಲಾಗಿ, ಎಲ್ಲಾ ಹುರುಪಿನಿಂದ ಮೇಷ್ಟ್ರನ್ನ ಯಾವ ಕೊಠಡಿ ಯಲ್ಲಿ ಪರೀಕ್ಷೆ ಕೇಳ್ಕೊಂಡರು. ಹೇಗೆ ತಯಾರಾಗ್ತೀರಾ ಅಂದರೆ ಎಲ್ಲ ನಕಲು ಮಾಡೋದು ಅಂತ ತೀರ್ಮಾನ ಮಾಡಿದ್ರು. ನನಗೆ ತಲೆ ಬಿಸಿ ಶುರು ಆಯಿತು. ಅಲ್ಲಿವರೆಗೂ, ನಾನು ಜೀವನದಲ್ಲಿ ನಕಲು ಮಾಡಿರಲಿಲ್ಲ. ಈಗ ಏನಪ್ಪಾ ಗತಿ. ಹೇಗೆ ತಯಾರಿ ಮಾಡೋದು ಅಂತ ಯೋಚನೆ ಆಯಿತು. ನನ್ನ ಗೆಳೆತಿಯರು, 'ಇದೇನೇ ಅನಿತಾ, ಹುಡುಗರು ಆಡೋ ಎಲ್ಲ ಆಟ, ತರಲೆ ಮಾಡ್ತಿಯಾ, ಕಾಪಿ ಹೊಡೆಯಕ್ಕೆ ಹೆದರ್ತೀಯಲ್ಲೇ' ಅಂತ ಅಣಕಿಸಿದರು. ನಕಲು ಮಾಡದಿರುವುದು ನನ್ನ ಆದರ್ಶಗಳಲ್ಲಿ ಒಂದಾಗಿತ್ತು. ಆ ಆದರ್ಶನ ಬಿಡೋದು ಕಷ್ಟ ಆಗ್ತಿತ್ತು.
ಸರಿ,ಈ ಸಲ ನಕಲು ಮಾಡೇ ಬಿಡೋಣ ಅಂತ ತೀರ್ಮಾನಿಸಿದೆ. ನನ್ನ ಗೆಳೆಯ ಗೆಳತಿಯರ ಹತ್ತಿರ ಹೇಗೆ ನಕಲು ಮಾಡೋದು ಅಂತ ಹೇಳಿಕೊಡಿ ಅಂದೆ. ಎಲ್ಲ ಸಂಜೆ ೫ ರ ನಂತರ ನಾಳೆ ಪರೀಕ್ಷೆ ಇರೋ ಕೊಠಡಿಗೆ ಬಾ ಅಂದ್ರು. ಅಲ್ಲಿ ಹೋದರೆ ಸುಮಾರು ಇಡೀ ಕ್ಲಾಸ್ ಅವರು ಹಾಜರಿದ್ದರು. ಅದೊಂದು ಡ್ರಾಯಿಂಗ್ ಹಾಲ್. ಎಲ್ಲ ತಾವೆಲ್ಲಿ ನಾಳೆ ಕೂರೋದು ಅಂತ ಮೇಜನ್ನು ಕಾದಿರಿಸಿದ್ರು (reserve ). ತಮ್ಮ ತಮ್ಮ ಮೇಜಿನ ಮೇಲೆ, ಮೇಜಿನ ಡ್ರಾ ಒಳಗೆ, ಕೆಳಗೆ ನೆಲದ ಮೇಲೆ ಸಣ್ಣ ಸಣ್ಣ diagram ಗಳು, code words ಗಳೆಲ್ಲ ಬರೆದರು. ನಂಗೂ ಬರೆಯಕ್ಕೆ ಹೇಳಿದ್ರು. ನಾನು ಹಾಗೆ ಬರೆದೆ.
ಮನೆಗೆ ಹೋಗಿ, ಸ್ವಲ್ಪ ಓದಿ, ಹಾಯಾಗಿ ನಿದ್ದೆ ಮಾಡಿದೆ, ನಕಲು ತಾನೇ ಮಾಡೋದು, ಇನ್ನೇನು ಚಿಂತೆ ಇಲ್ಲ ಅಂತ.
ಮಾರನೇ ದಿನ ತರಗತಿಗೆ ಹೋದಮೇಲೆ ಶುರುವಾಯಿತು ನೋಡಿ ಚಿಂತೆ. ಆ ಒಂದು ಗಂಟೆ ನನ್ನ ಜೀವನದ ಅತಿ ದೀರ್ಘ ಒಂದು ಗಂಟೆ.
ನನ್ನ ಗ್ರಹಾಚಾರಕ್ಕೆ, ನಾನು ನನ್ನ ಮೇಜಿನ ಮೇಲೆ ಬರೆದ ಯಾವುದೇ diagram ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳಿಗೆ ಸಹಾಯವಾಗಲಿಲ್ಲ. ಕೆಳಗಡೆ ನೆಲದ ಮೇಲೆ ಬರೆದವು ಎಷ್ಟು ಸಣ್ಣಕ್ಕೆ ಇದ್ದವೆಂದರೆ, ಮೇಲಿಂದ ನಂಗೆ ಕಾಣದು, ಕೆಳಗೆ ಬಗ್ಗಿ ನೋಡುವ ಕಲೆ ನನಗೆ ಬರದು.
ಅಕ್ಕಪಕ್ಕದವ್ರು ಹೇಗೆ ನಕಲು ಮಾಡ್ತಿದ್ದಾರೆ ನೋಡಿ ಮಾಡೋಣ ಎಂದು ಕಣ್ಣು ಹಾಯಿಸಿದೆ. ಕೆಲವು ಗೆಳತಿಯರು, ಅಂಗೈ ಮೇಲೆ ಬರೆದುಕೊಂಡು ಬಂದಿದ್ದರೆ, ಒಬ್ಬ ಮಹಾನುಭಾವಳು, ಮೆಹಂದಿಯಲ್ಲಿ ಸರ್ಕ್ಯೂಟ್ diagram ಹಾಕೊಂಡು ಬಂದು ಬಿಟ್ಟಿದ್ಲು. ಹುಡುಗರು, ಶೆಕೆಯಲ್ಲೂ ಜಾಕೆಟ್ ಧರಿಸಿ, ತೋಳನ್ನು ಮಡಿಸಿ, ಅದರ ತುಂಬಾ ಚೀಟಿ ತುಂಬಿಸಿಕೊಂಡು ಬಂದಿದ್ದರು. ಇನ್ನು ಕೆಲವರು, ಎಲ್ಲ ಎಷ್ಟು ತ್ವರಿತವಾಗಿದ್ದರು ಅಂದ್ರೆ, ಮೇಷ್ಟ್ರು ಅಲ್ಲಿ ನೋಡಿ , ಇಲ್ಲಿ ತಿರುಗೋ ಅಷ್ಟರಲ್ಲಿ ನಕಲು ಮಾಡೋರು. ನನಗೋ. ಆ ನೆಲ ನೋಡಿ diagram ಹುಡುಕೋ ಅಷ್ಟರಲ್ಲಿ ಎರಡು ಸಲ ತಲೆ ಎತ್ತಿ ಮೇಷ್ಟ್ರು ನೋಡಿಬಿಟ್ಟರಾ ಅಂತ ಆತಂಕದಿಂದ ನೋಡೋದು. ಭಯದಲ್ಲಿ, ನೋಡಿದ diagram ಬರೆಯೋ ಅಷ್ಟರಲ್ಲಿ ಮರೆತೇ ಹೋಗಿರೋದು. ಅಂತೂ ಇಂತೂ ಕಷ್ಟ ಪಟ್ಟು ಒಂದು diagram ಬರೆದು ಅದಕ್ಕೊಂದಷ್ಟು theory ಹುಟ್ಟಿಸಿ ಬರೆಯೋ ಅಷ್ಟರಲ್ಲಿ ಘಂಟೆ ಬಾರಿಸಿ ಆಗಿತ್ತು.
ಬ್ಲೂ ಬುಕ್ ಬಂದ ಮೇಲೆ ಗೊತ್ತಾಯಿತು, ನಾನು ಗಾಬರಿಯಲ್ಲಿ, ಎರಡು diagram ಗಳ ಅರ್ಧ ಭಾಗಗಳನ್ನು ಸೇರಿಸಿ ನನ್ನದೇ ಹೊಸ ಅನ್ವೇಷಣೆಯ diagram ಸೃಷ್ಟಿಸಿದ್ದ ಕಾರಣ, ೧ ಅಂಕ ಬಂದಿತ್ತು!! ಅವತ್ತೇ ಮೊದಲು, ಅವತ್ತೇ ಕೊನೆ. ಮತ್ತೆ ನಕಲು ಮಾಡೋ ರಗಳೆಗೆ ಹೋಗಿಲ್ಲ ನಾನು.
ನಾನು ಹಿಂದಿನ ಆ ಕಾಪಿ ಮಾಡಕ್ಕೆ ಮಾಡೋ ತಯಾರಿಗೆ ಬದಲು ಓದಿದ್ದಿದರೆ, ಒಂದು ಪ್ರಶ್ನೆಗಾದರು ಉತ್ತರ ಬರೆಯಬಹುದಿತ್ತು.
ಈ ಘಟನೆಯ ನಂತರ, ನನ್ನ ಸುಪ್ತ ಮನಸ್ಸು ನನ್ನನ್ನು ಯಾವಾಗಲೂ ನನ್ನ ದೌರ್ಬಲ್ಯಗಳನ್ನು ಜಯಿಸಲು ಪ್ರಯತ್ನಿಸುವುದಕ್ಕಿಂತ ನನ್ನ ಸಾಮರ್ಥ್ಯವನ್ನು ವೃದ್ಧಿಸುವುದಕ್ಕೆ ಹೆಚ್ಚು ಒತ್ತು ಕೊಡುತ್ತಿತ್ತು ಅನಿಸುತ್ತೆ. ನನ್ನ ಆಫೀಸಿನ ಕೆಲಸದಲ್ಲೂ ನಾನು ಇದೆ ಮಂತ್ರವನ್ನು ಉಪಯೋಗಿಸುತ್ತಿರುವೆ.
ಈ ಇಂಟರ್ನಲ್ಸ್ ಅನ್ನು 'ಬ್ಲೂ ಬುಕ್' ಅನ್ನೋ ಪುಸ್ತಕದಲ್ಲಿ ಬರೀತಾ ಇದ್ವಿ. ಮೇಲಿನ ಕವರ್ ಮಾತ್ರ ತಿಳಿ ನೀಲಿ ಬಣ್ಣದ್ದಾಗಿರ್ತ ಇತ್ತು. ಇಂಟರ್ನಲ್ಸ್ ಮುಗಿದ ಒಂದು ವಾರದ ಮೇಲೆ, ಯಾವಾಗ ಅಂಕಗಳನ್ನು ಹೇಳ್ತಾರೋ ಕಾಯ್ತಾ ಇರ್ತಿದ್ವಿ.
ಹಾಗೆ ಒಂದು ವಿಷಯದ ಇಂಟರ್ನಲ್ಸ್ ಮುಗಿದು ಒಂದು ವಾರ ಆಗಿತ್ತು. ನಮ್ಮ ಮೇಷ್ಟ್ರು ತರಗತಿಗೆ 'ಬ್ಲೂ ಬುಕ್ಸ್ ' ತೊಗೊಂಡು ಬಂದರು. ನಮಗೆಲ್ಲ ಕಾತರ. ಎಷ್ಟು ಬಂದಿದೆಯೋ ಅಂತ. ಈ ಮಾಸ್ತರು ಸ್ವಲ್ಪ ಉದಾರ ಮನೋಭಾವದವರಿದ್ದರು. ಒಂದು, ಇಂಟರ್ನಲ್ಸ್ ಗೆ ಮುಂಚೆನೇ ೧೦-೧೫ ಪ್ರಶ್ನೆಗಳನ್ನು ಕೊಡ್ತಾ ಇದ್ರು. ಅದರಲ್ಲಿ ೫ ಪ್ರಶ್ನೆಗಳು ಬರುತ್ತೆ. ತಯಾರಾಗಿ ಬನ್ನಿ ಅಂತ. ಎರಡನೆಯದು, ಸಣ್ಣ ಪುಟ್ಟ ತಪ್ಪುಗಳಿಗೆಲ್ಲ ಅಂಕಗಳನ್ನು ಕಡಿತ ಮಾಡ್ತಾ ಇರಲಿಲ್ಲ. ಹಾಗಾಗಿ ಇವರ ವಿಷಯದಲ್ಲಿ ಯಾರು ನಪಾಸಾಗ್ತಾ ಇರಲಿಲ್ಲ.
ಎಲ್ಲರಿಗೂ ಬ್ಲೂ ಬುಕ್ ವಿತರಣೆ ಆಯಿತು. ಎಲ್ಲರಿಗೂ ೨೫ ಅಂಕಗಳಿಗೆ ಸುಮಾರು ೨೦ರ ಮೇಲೆ ಬಂದಿತ್ತು . ಎಲ್ಲ ಖುಶಿಯಾಗಿದ್ವಿ. "ಎಲ್ಲರಿಗೂ ಬ್ಲೂ ಬುಕ್ ಸಿಕ್ತ?" ಅಂತ ಮೇಷ್ಟ್ರು ಕೇಳಿದ್ರು. ಎಲ್ಲ ಒಕ್ಕೊರಲಿನಿಂದ "ಯಸ್ ಸರ್" ಅನ್ನಕ್ಕೂ ನನ್ನ ಒಬ್ಬ ಸಹಪಾಠಿ ಎದ್ದು ನಿಂತ. "ನನ್ ಬ್ಲೂ ಬುಕ್ ಸಿಕ್ಕಿಲ್ಲ ಸರ್" ಅಂದ.
ಅವರು ಮೇಜಿನ ಆ ಕಡೆ ಈ ಕಡೆ ನೋಡಿ, ತಮ್ಮ ಚೀಲದಿಂದ ಒಂದು ಪುಸ್ತಕ ತೆಗೆದು, "ಒಹ್ ಇದು ಇಲ್ಲೇ ಉಳಿದುಬಿಟ್ಟಿದೆ, ತೊಗೊ" ಅಂದ್ರು.
ಅವನು ಪುಸ್ತಕ ಇಸ್ಕೊಂಡ ಮೇಲೆ, ಮೇಷ್ತ್ರು, "ಎಷ್ಟು ಬಂದಿದ್ಯಪ್ಪ?" ಕೇಳಿದ್ರು. ಇವನು, "೨೪ ಸರ್".
ಅದಕ್ಕೆ ಮೇಷ್ಟ್ರು, "ಶಹಬಾಷ್, ಚೆನ್ನಾಗಿ ತೆಗೆದಿದ್ಯಾ ಅಂಕಗಳನ್ನ" ಅಂದ್ರು. ಅವನು ಸ್ವಲ್ಪ ಹಾಗೆ ಹೆಮ್ಮೆ ಇಂದ ಬೀಗ್ತಾ ಇದ್ದ. ಮೇಷ್ಟ್ರು, "ನೋಡಪ್ಪ, ಕಾಪಿ ಚೀಟಿ ಬ್ಲೂ ಬುಕ್ ಅಲ್ಲೇ ಬಿಟ್ಟುಬಿಟ್ಟಿದ್ಯ. ತೊಗೊ. ಮುಂದಿನ ಸಲದಿಂದ ಕಾಪಿ ಚೀಟಿ ಮರೀದೆ ಬ್ಲೂ ಬುಕ್ ಇಂದ ತೆಗೆದು ಬಿಡು" ಅಂದ್ರು ನೋಡಿ, ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ದು. ಅವನು ಮಾತ್ರ ಬೆಪ್ಪನ ತರ ಪೆದ್ದು ಪೆದ್ದಾಗಿ ನಗ್ತಾ ನಿಂತಿದ್ದ. ಉದಾರತೆಗೆ ಇದಕ್ಕಿಂತ ಉದಾಹರಣೆ ಬೇಕಾ?

Super
ReplyDelete