Saturday, March 31, 2018

ಒಂಟೆ

ಒಂಟೆ  ಬಂತು ಒಂಟೆ ಬಂತು ನೋಡಲ್ಲಿ
ಒಂದರ ಹಿಂದೊಂದ್ ಒಂದರ ಹಿಂದೊಂದ್ ಸಾಲಲ್ಲಿ
ಎಲ್ಲಿಂದ ಬಂತಪ್ಪ ಇಷ್ಟು ಒಂಟೆಗಳು
ನಮ್ಮ ಬೆಂಗಳೂರಿಗೆ ಬಂತಪ್ಪ
ಇಷ್ಟೊಂದು ಒಂಟೆಗಳು

ಹೆಜ್ಜೆ ಹಿಂದೆ ಹೆಜ್ಜೆಯನ್ನು ಹಾಕುತ್ತ
ಬಾಲವನ್ನು ನಿಧಾನಕ್ಕೆ ಅಲ್ಲಾಡಿಸುತ್ತ
ದೂರದಿಂದ ಬಂತಪ್ಪ ಈ ಒಂಟೆ
ಥಾರ್ ಮರುಭೂಮಿ ಇಂದ ಬಂದ  ಒಂಟೆ

ಉದ್ದ ಕತ್ತ ಆಚೆ ಈಚೆ ಚಾಚುತ್ತ
ಕಣ್ಣ ಅಗಲಿಸಿ ದೂರ ದೂರ ನೋಡುತ್ತಾ
ದೂರದಿಂದ ಬಂತಪ್ಪ ಈ ಒಂಟೆ
ಮಂದಿ ಮಕ್ಕಳ ಹೊತ್ತು ತಂದ ಈ  ಒಂಟೆ

ಬೆನ್ನ ಮೇಲೆ ಡುಬ್ಬವನ್ನು ಹೊತ್ತುಕೊಂಡು
ವಕ್ರ ಹಲ್ಲ ಮಂದಹಾಸ ಬೀರುತ್ತಾ
ದೂರದಿಂದ ಬಂತಪ್ಪ ಈ ಒಂಟೆ
ಸಾಮಾನನ್ನು ಹೊತ್ತುಕೊಂಡು ಈ  ಒಂಟೆ

ಒಂಟೆ  ಬಂತು ಒಂಟೆ ಬಂತು ನೋಡಲ್ಲಿ
ಒಂದರ ಹಿಂದೊಂದ್ ಒಂದರ ಹಿಂದೊಂದ್ ಸಾಲಲ್ಲಿ
ಎಲ್ಲಿಂದ ಬಂತಪ್ಪ ಇಷ್ಟು ಒಂಟೆಗಳು
ನಮ್ಮ ಅರ್ಜುನ್ ಪುಟ್ಟನ್ ನೋಡಕ್ಕೆ ಬಂದ ಒಂಟೆಗಳು



No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...