Friday, December 29, 2017

??

ಪ್ರಶ್ನೆಗಳಿದ್ದಾಗ
ಉತ್ತರ ಹುಡುಕುವ
ಆತುರ
ಉತ್ತರ ಸಿಕ್ಕ ಮೇಲೆ
ಉತ್ತರವೇಕೆ
ಹೀಗೆ ಅನ್ನೋ
ಪ್ರಶ್ನೆ!

ವಿದಾಯ

ಇನ್ನೂ ನಿಚ್ಛಳ ನೆನಪಿದೆ
ನನಗೆ
ನನ್ನ‌ ನಿನ್ನ ಮೊದಲ ಮಿಲನದ
ಆ‌ ದಿನ
ಮಂದ ಬೆಳಕಿನಲಿ
ಮಂದಿ ಮಾತಿನಲಿ
ಸುಳಿಸುಳಿದು
ಗಪ್ಪನೆ ನನ್ನಪ್ಪಿದ
ಆ ಕ್ಷಣ
ಇನ್ನೂ ನಿಚ್ಛಳ ನೆನಪಿದೆ
ನನ್ನಾನಂದಕೆ
ಹೆಗಲು ಕೊಟ್ಟ ಅದೆಷ್ಟೋ
ಹಗಲುಗಳು
ನನ್ನ ನೋವಿನೊಡಗೂಡಿದ
ರಾತ್ರಿಗಳೆಷ್ಟೋ
ದಿನಕ್ಕೊಂದು
ರೋಚಕತೆ ನಿನ್ನೊಡನಾಟದಿ
ಕಲಿತದ್ದೆಷ್ಟೋ
ಮರೆತದ್ದೆಷ್ಟೋ, ಮೆರದದ್ದೆಷ್ಟೋ!
ಗುರಿಯಿಲ್ಲದೆ ಅಲೆಸಿದೆ
ದಣಿವಾಗದಂತೆ ನಡೆಸಿದೆ
ಅಪರಿಚಿತರು ಪರಿಚಿತರಾಗಿ
ಪರಿಚಿತರಪರಿಚಿತರಾಗಿ!
ಹಿಂತಿರುಗಿ ನೋಡೆ,
ಕ್ರಮಿಸಿದ ದೂರದ ಲೆಕ್ಕವಿಲ್ಲ
ದೂರಾದ ಜನರ ಲಕ್ಷವಿಲ್ಲ
ಸುಸ್ತಿಲ್ಲ, ವಿಷಾದವಿಲ್ಲ
ನಗೆಯ ನಗುವ ಕಲಿತು
ಕಷ್ಟ ಪರಿಹಾರದ ಬಗೆಯ ಅರಿತು
ಮೊನ್ನೆಗಿಂತ ನೆನ್ನೆ, ನೆನ್ನೆಗಿಂತ ಇಂದು
ಹದವಾಗಿ ಬೆಂದು
ಧನ್ಯೋಸ್ಮಿ
ನಿನ್ನೊಡನೆ ಕಳೆದ ಆ ದಿನಗಳಿಗೆ
ಕಾಲ ನಿಲ್ಲಲ್ಲ
ಯಾರಿಗೂ ಕಾಯಲ್ಲ
ಇದು ವಿದಾಯದ ಸಮಯ
ಅಗಲಿಕೆಯ ನೋವಿಲ್ಲ
ಕಷ್ಟದ ನೆನಪುಗಳ ನಿನಗೇ ಬಿಟ್ಟು
ಸವಿ ನೆನಪಿನ ಬುತ್ತಿಯೊಡನೆ
ಹೊರಟಿರುವೆ
ಬರಲೇ ನಾ 2017?

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...