Tuesday, November 15, 2016

ಸೃಷ್ಟಿ

ಬೇಡದೇ
ಈ ಭೂಮಿಗೆ
ಆಗಮನ
ಬೇಡದಿದ್ದರೂ
ಈ ಭೂಮಿಯಿಂದ
ನಿರ್ಗಮನ
ಇದೇ
ಈ ಸೃಷ್ಟಿಯ
ನಿಯಮ!

Sunday, November 6, 2016

ಪ್ರತಿಫಲ

ನನ್ನ
ಮೆದುವಾಗಿಸಿ
ಬದಲಾಯಿಸಿ
ಪ್ರಬುದ್ಧಗೊಳಿಸಿದ್ದು
ಈ ನೋವೇ!

ಸತ್ಯ

ತನ್ನತನವ
ಪಡೆಯಲು
ನೆನಪಿಗೂ
ಕನಸಿಗೂ
ಬೇಕು
ವರ್ತಮಾನ
ತನ್ನತನವ
ಉಳಿಸಿಕೊಳಲು
ಇವರಿಬ್ಬರಿಂದ
ದೂರವಿರಬೇಕು
ಈ ವರ್ತಮಾನ!

ಬೇಕುಗಳು

ಬೇಕು
ಬೇಕೆನಗೆ
ಪ್ರೀತಿಸಲೊಂದು
ಹೃದಯ
ಬೇಕು
ಬೇಕೆನಗೆ
ಪ್ರೀತಿಸುವ
ಹೃದಯ
ಬೇಕು
ಬೇಕೆನಗೆ
ನನ್ನ
ನನ್ನಂತೆ
ಒಪ್ಪುವ
ಹೃದಯ
ಬೇಕು
ಬೇಕೆನಗೆ
ನಿರೀಕ್ಷೆಗಳ
ಹೊರೆ
ಹೊರೆಸದ
ಹೃದಯ
ಬೇಕು
ಬೇಕೆನಗೆ
ಅವಲಂಬಿಸಲೊಂದು
ಹೃದಯ
ಬೇಕು
ಬೇಕರನಗೆ
ನನ್ನನವಲಂಬಿಸುವ
ಹೃದಯ
ಬೇಕು
ಬೇಕೆನಗೆ
ಕೈ ಹಿಡಿದು
ನಡೆವ
ಹೃದಯ
ಬೇಕು
ಬೇಕೆನಗೆ
ಕೈ ಬಿಡದೆ
ನಡೆವ ಹೃದಯ

Thursday, November 3, 2016

ಕಾರಣ

ಸುಖ ನಿದ್ರೆಯಲಿದ್ದ
ಸೃಜನಶೀಲತೆಯ
ಬಡಿದೆಬ್ಬಿಸಿ
ಕವನ ಬರೆಸಿತ್ತು
ನೊಂದು ಬೆಂದ
ಮನ!

ಸತ್ತವರ ನೆರಳು

ಬಿಟ್ಟು ಹೋದರವರು
ಬದುಕನ್ನು
ಜಗತ್ತನ್ನು
ಜನರನ್ನು
ಬಿಟ್ಟು ಹೋದರವರು
ಎಲ್ಲವನ್ನು
ಅವರು ಬಿಟ್ಟರೂ
ಅವರ ನೆನಪು
ಬಿಡಲೊಲ್ಲದು
ಇದ್ದವರನ್ನು

Wednesday, November 2, 2016

ನಷ್ಟ

ಭೂತವ ತೊರೆದು
ಬಂದಿದ್ದರೂ
ಅವಳದೇ ನೆನಪು ಒಂದೆಡೆ
ಭವಿಷ್ಯವ ಕಾಣದಿದ್ದರೂ
ಸಂಧಿಸೊ ತವಕ
ಇನ್ನೊಂದೆಡೆ
ಇಬ್ಬರ ಚಿಂತೆಯಲಿ
ಕೈ ಜಾರಿದ್ದಳೀ
ವರ್ತಮಾನ

Tuesday, February 2, 2016

ನಿನ್ನನಪ್ಪಿ
ತಪ್ಪಿಯೂ
ಮುದ್ದುಗರೆ-
ಯೊಲ್ಲೆ
ನಾ
ಬರುವಾಗ
ಏನಿಲ್ಲ
ಹೋಗುವಾಗ
ಏನಿಲ್ಲ
ಇರುವುದರೊಳ
ಮಧ್ಯೆ
ಏನೆಲ್ಲ
ನಡೆಸುವೆಯೋ
ಮನುಜ!
ನಮ್ಮಿಬ್ಬರ
ನಡುವೆ
ಇದೆ
ಅಂತರ
ಆದರೂ
ಆಕರ್ಷಣೆ
ನಿರಂತರ!

ಶೇಷ

ಸರಿ ತಪ್ಪುಗಳ
ಹುಡುಕುವ,
ಎಣಿಸುವ
ವ್ಯರ್ಥ
ಪ್ರಯತ್ನದಲಿ
ಜಾರಿತೇ
ಈ ಬದುಕು?

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...