Saturday, March 31, 2018

ಹ್ಯಾಪಿ ಬರ್ತ್ಡೇ

ಹತ್ತು ಹತ್ತು ಇಪ್ಪತ್ತು
ಅರ್ಜುನ್ ಹ್ಯಾಪಿ ಬರ್ತ್ಡೇ ಇವತ್ತು
ಇಪ್ಪತ್ತು ಹತ್ತು ಮೂವತ್ತು
ಮನೆಯಲಿ ಸಡಗರ ನಡೆದಿತ್ತು
ಮೂವತ್ತು ಹತ್ತು ನಲವತ್ತು
ಹೊಸ ಬಟ್ಟೆ ತೊಟ್ಟಾಯಿತು
ನಲವತ್ತು ಹತ್ತು ಐವತ್ತು
ಅಮ್ಮ ಸಿಹಿ ಮಾಡಾಯಿತು
ಐವತ್ತು  ಹತ್ತು ಅರವತ್ತು
ಕೇಕು ಮನೆಗೆ ಬಂದಾಯಿತು
ಅರವತ್ತು ಹತ್ತು ಎಪ್ಪತ್ತು
ಕೇಕು ಕಟ್ ಮಾಡಾಯಿತು
ಎಪ್ಪತ್ತು ಹತ್ತು ಎಂಭತ್ತು
ಕೇಕು ಎಲ್ಲರಿಗು ತಿನ್ನಿಸಲಾಯಿತು
ಎಂಭತ್ತು ಹತ್ತು ತೊಂಭತ್ತು
ಅರ್ಜುನ್ ಗೆ ಗಿಫ್ಟ್ಸ್ ಕೊಟ್ಟಾಯಿತು
ತೊಂಭತ್ತು ಹತ್ತು ನೂರು
ಬರ್ತ್ಡೇ ಆಯಿತು ಜೋರು

ಹ್ಯಾಪಿ ಬರ್ತ್ಡೇ ಟು ಯು
ಹ್ಯಾಪಿ ಬರ್ತ್ಡೇ ಟು ಯು
ಹ್ಯಾಪಿ ಬರ್ತ್ಡೇ ಡಿಯರ್ ಅರ್ಜುನ್
ಹ್ಯಾಪಿ ಬರ್ತ್ಡೇ ಟು ಯು

ಬಲೂನು

ಬಾ ಬಾ ಬಾ ಬಾ ಬಲೂನು
ಬಾ ಬಾ ಬಾ ಬಾ ಬಲೂನು

ಕಪ್ಪು ಬಿಳಿ ಕೆಂಪು ಹಳದಿ ಬಲೂನು
ಹಸಿರು ನೀಲಿ ಬಣ್ಣ ಬಣ್ಣದ ಬಲೂನು
ಬಾ ಬಾ ಬಾ ಬಾ ಬಲೂನು
ಬಾ ಬಾ ಬಾ ಬಾ ಬಲೂನು

ಒಂದು ಎರಡು ಮೂರು ನಾಕು ಬಲೂನು
ಚಿಕ್ಕ ಪುಟ್ಟ ದೊಡ್ಡ ದೊಡ್ಡ ಬಲೂನು
ಬಾ ಬಾ ಬಾ ಬಾ ಬಲೂನು
ಬಾ ಬಾ ಬಾ ಬಾ ಬಲೂನು

ನೆಗೆದು ಕುಣಿದು ಹಿಡಿದು ಆಡೋ ಬಲೂನು
ನಮ್ಮ ಪುಟ್ಟ ಅರ್ಜುನ್ ಗೆ ಇಷ್ಟ ಬಲೂನು
ಬಾ ಬಾ ಬಾ ಬಾ ಬಲೂನು
ಬಾ ಬಾ ಬಾ ಬಾ ಬಲೂನು 

ಬಾಲ್

ಬಾಲ್ ಬಾಲ್ ಬಾಲ್ ಬಾಲ್
ಬಾಲ್ ಬಾಲ್ ಬಾಲ್ ಬಾಲ್
ಚಿಕ್ಕ ಪುಟ್ಟ ದೊಡ್ಡ ದಡಿಯ 
ಎಲ್ಲ ವಯಸ್ಸಿನವರು ಆಡೋ ಬಾಲ್ 
ಬಾಲ್ ಬಾಲ್ ಬಾಲ್ ಬಾಲ್
ಬಾಲ್ ಬಾಲ್ ಬಾಲ್ ಬಾಲ್

ಗುಡು ಗುಡು ಉರುಳುವ
ಬಾಲ್ ಬಾಲ್ ಬಾಲ್ ಬಾಲ್
ಹಿಡಿಯಕ್ಕೆ ಹೋದರೆ ಓಡೋ ಬಾಲ್
ಬಾಲ್ ಬಾಲ್ ಬಾಲ್ ಬಾಲ್
ಬಾಲ್ ಬಾಲ್ ಬಾಲ್ ಬಾಲ್

ಕೆಳಗಿಂದ ಮೇಲಕ್ಕೆ ನೆಗೆಯೋ ಬಾಲ್
ಮೇಲಿಂದ ಕೆಳಕ್ಕೆ ಬೀಳೋ ಬಾಲ್
ಬಾಲ್ ಬಾಲ್ ಬಾಲ್ ಬಾಲ್
ಬಾಲ್ ಬಾಲ್ ಬಾಲ್ ಬಾಲ್

ಬಾಲ್ ಬಾಲ್ ಬಾಲ್ ಬಾಲ್
ಬಾಲ್ ಬಾಲ್ ಬಾಲ್ ಬಾಲ್
ಚಿಕ್ಕ ಪುಟ್ಟ ದೊಡ್ಡ ದಡಿಯ 
ಎಲ್ಲ ವಯಸ್ಸಿನವರು ಆಡೋ ಬಾಲ್ 
ಬಾಲ್ ಬಾಲ್ ಬಾಲ್ ಬಾಲ್
ಬಾಲ್ ಬಾಲ್ ಬಾಲ್ ಬಾಲ್ 


ಚುಕುಬುಕು ಕೂ

ಚುಕುಬುಕು ಚುಕುಬುಕು ಕೂ
ಚುಕುಬುಕು ಚುಕುಬುಕು ಕೂ
ರೈಲು ಬಂತು ರೈಲು 
ರೈಲು ಬಂತು ರೈಲು
ಚುಕುಬುಕು ಚುಕುಬುಕು ಕೂ
ಚುಕುಬುಕು ಚುಕುಬುಕು ಕೂ 

ಎಣಿ ಸಕ್ಕಾಗದಷ್ಟು ಬೋಗಿ 
ಎಂಜಿನ್ ಕೂಗಿ ಕೂಗಿ 
ಎಣಿ ಸಕ್ಕಾಗದಷ್ಟು ಬೋಗಿ 
ಎಂಜಿನ್ ಕೂಗಿ ಕೂಗಿ 
ಕಾಫಿ ತಿಂಡಿ ಕಡ್ಲೆಪುರಿ 
ಮಾರೋ ತಿಂಡಿ ತರಾವರಿ 

ಚುಕುಬುಕು ಚುಕುಬುಕು ಕೂ
ಚುಕುಬುಕು ಚುಕುಬುಕು ಕೂ

ಊರೂರು ತಿರುಗುತ್ತೆ
ಜನರನ್ನ ಸಾಗಿಸತ್ತೆ
ಊರೂರು ತಿರುಗುತ್ತೆ
ಜನರನ್ನ ಸಾಗಿಸತ್ತೆ
ಓಡೋಗುತ್ತೆ ಮರ ಗಿಡ 
ಹೊಲ ಗದ್ದೆ ಬೆಟ್ಟ ಗುಡ್ಡ 

ಚುಕುಬುಕು ಚುಕುಬುಕು ಕೂ
ಚುಕುಬುಕು ಚುಕುಬುಕು ಕೂ

ರೈಲಿನ ಬಣ್ಣ ನೀಲಿ
ಸಾಗುತ್ತೆ ತುಂಬಾ ಮೈಲಿ
ರೈಲಿನ ಬಣ್ಣ ನೀಲಿ
ಸಾಗುತ್ತೆ ತುಂಬಾ ಮೈಲಿ
ಕಂಬಿ ಬಿಟ್ಟು ಕದಲೋದಿಲ್ಲ 
ಎಲ್ಲೆಂದರಲ್ಲಿ ನಿಲ್ಲೋದಿಲ್ಲ 

ಚುಕುಬುಕು ಚುಕುಬುಕು ಕೂ
ಚುಕುಬುಕು ಚುಕುಬುಕು ಕೂ 




ಟುಕ್ ಟುಕ್ ಕುದುರೆ

ಬಂತು ಬಂತು 
ಟುಕ್ ಟುಕ್ ಟುಕ್ ಟುಕ್
ಕುದುರೆ ಬಂತು
ಟುಕ್ ಟುಕ್ ಟುಕ್ ಟುಕ್
ಬಂತು ಕುದುರೆ
ಟುಕ್ ಟುಕ್ ಟುಕ್ ಟುಕ್
ಟುಕ್ ಟುಕ್ ಟುಕ್ ಟುಕ್

ಎತ್ತರದ ಕುದುರೆ
ಕಂದು  ಬಣ್ಣದ ಕುದುರೆ
ಬಂತು ಕುದುರೆ
ಟುಕ್ ಟುಕ್ ಟುಕ್ ಟುಕ್

ಉದ್ದ ಕಾಲಿನ ಕುದುರೆ
ಜೋರಾಗಿ ಓಡೋ ಕುದುರೆ
ಬಂತು ಕುದುರೆ
ಟುಕ್ ಟುಕ್ ಟುಕ್ ಟುಕ್

ಬೆನ್ನ ಮೇಲೆ ಸವಾರಿ
ಮಾಡಿಸೋ ಕುದುರೆ
ಬಂತು ಕುದುರೆ
ಟುಕ್ ಟುಕ್ ಟುಕ್ ಟುಕ್

ಬಂತು ಬಂತು 
ಟುಕ್ ಟುಕ್ ಟುಕ್ ಟುಕ್
ಕುದುರೆ ಬಂತು
ಟುಕ್ ಟುಕ್ ಟುಕ್ ಟುಕ್
ಬಂತು ಕುದುರೆ
ಟುಕ್ ಟುಕ್ ಟುಕ್ ಟುಕ್
ಟುಕ್ ಟುಕ್ ಟುಕ್ ಟುಕ್


ಎಣಿಕೆಯ ಆಟ

ಒಂದು ಎರಡು
ಆಟಕೆ ಹೊರಡು
ಮೂರು ನಾಕು
ಗೆಳೆಯರು ಬೇಕು
ಐದು ಆರು
ನೆಗೆದು ಹಾರು
ಏಳು ಎಂಟು
ಬೆವರಿನ ಅಂಟು
ಒಂಭತ್ತು ಹತ್ತು
ಆಯಿತು ಸುಸ್ತು
ಒಂದರಿಂದ ಹತ್ತು ಹೀಗಿತ್ತು
ಆಟದ ಸಮಯವು
ಮುಗಿದಿತ್ತು


Sunday, March 25, 2018

ಸೋರುತಿಹುದು
ಮನೆಯ ಮಾಡು
ಹಾಡುತಿದ್ದೆ ಮಳೆಯ ನೋಡುತ್ತಾ..
ಒಳಗಿಂದ ಕೇಳಿ ಬಂತು
ಬೇಗ ಒಂದು
ಸ್ವಂತ ಮನೆಯ ಮಾಡು

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...