Wednesday, April 19, 2017

Childhood gift

I was the only child
to my parents
I was a lonely child
In my childhood
Hopping from one
place to another
Every three year
I learnt making
friends quickly
I also learnt how to move on
as people, place & time changes
I never dwelled in the past
Missing my old friends
I learnt to live the present
Schools changed
People changed
Places changed
I embraced the changes
I was a nomad
In my childhood
Moving from place to place
People to people
I am settled at one place now physically
My mind is still a nomad!



Saturday, April 15, 2017

ಬಂಧ-ನ

ಬಂಧಿಸದಿರಿ
ನಿಮ್ಮವರ..
ಸಂಬಂಧಗಳ
ನೆವದಲ್ಲಿ
ಸಂಬಂಧ
ಸಾಮರ್ಥ್ಯವಾದರೆ
ಸುಖ, ಒಲವು, ಗೆಲುವು
ದೌರ್ಬಲ್ಯವಾದರೆ
ಹಿಂಸೆ, ನೋವು, ಸೋಲು!

Wednesday, April 12, 2017

ಭಾವಕ್ಕೆ ತಕ್ಕಂತೆ

ಮಡದಿಯೆಂದಳು
ರೀ.. ಮರೀಬೇಡಿ ಎಣ್ಣೆ
ಇಂದು ಶುಕ್ರವಾರ
ಖುಷಿಯಲಿ ಗಂಡನೆಂದ
ಎಣ್ಣೆ ತರುವೆ
ಬೇಗ ಬೆರುವೆ
ಇಂದು ಶುಕ್ರವಾರ!!

ಕಾರಣ

ಇದ್ದಕ್ಕಿದ್ದಂಗೆ
ಮನೆಯಲ್ಲಿ ಮಾತುಕತೆ
ಜೋರಾಗಿದೆ
ಮನೆ ಹತ್ತಿರ
ಏರ್ಟೆಲ್ ಸಿಗ್ನಲ್
ವೀಕಾಗಿದೆ!

Tuesday, March 28, 2017

ಯುಗಾದಿಯ ಶುಭಾಷಯಗಳು

ಬಂದಿತು
ಮತ್ತೊಂದು
ಸಂವತ್ಸರ
ಬದುಕಿಗೆ
ಇನ್ನೊಂದು
ವರುಷದ ವರ
ಶುಭಕೃತ
ಸುಖದುಃಖಗಳು
ಕರಗಿ
ಶೋಭಕೃತದ
ಕನಸುಗಳು
ಮಿರುಗಿ
ಬೆಲ್ಲದ
ಬಯಕೆಯಲಿ
ಬೇವಿನ
ಸಹಿಸುವಿಕೆಯಲಿ
ಇನ್ನೊಂದು
ಯುಗದ ಆದಿ
ಆದಿಯಿಲ್ಲದ
ಅಂತ್ಯವೆಲ್ಲಿ
ಅಂತ್ಯವಿಲ್ಲದೆ
ಆದಿಯೆಲ್ಲಿ
ಈ ಜಗದಲಿ
ನೋವುಗಳ
ಮರೆತು
ದ್ವೇಷಗಳ
ತೊರೆದು
ಸ್ನೇಹ ಪ್ರೀತಿಗಳಿಂದ
ಆಲಂಗಿಸೋಣ
ಬನ್ನಿ
ಹೊಸ ವರುಷವ
ಸಂಭ್ರಮಿಸೋಣ

Thursday, March 23, 2017

ಕಾಲ

ಕ್ಷಣಗಳು ಕಳೆದು ಕಳೆದು
ದಿನಗಳುರುಳಿ ಉರುಳಿ
ನೆನ್ನೆಗಿಂತ ಇಂದು
ಇಂದಿಗಿಂತ ನಾಳೆ
ಸಮಯವೋಡುತಿಹುದು
ಮುಪ್ಪು ಆವರಿಸುತಿಹುದು

Thursday, February 16, 2017

ಬಣ್ಣ

ನೆನಪುಗಳು ಕ್ರೂರ!
ರಕ್ತ ಕಾರಿಸದೆ ಹೃದಯ
ಕತ್ತರಿಸೊ ಕೌಶಲ್ಯವಿದಕೆ
ನೆನಪುಗಳು ಮಧುರ!
ಏನೂ ಬದಲಾಗದೆ
ಹೃದಯವ ನಲಿಸುವ
ಕಲೆ ಇದಕೆ

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...