Monday, September 2, 2013

spelling problemo!

ನಮ್ ಧಣಿಗಳು ನಮ್ಮನ್ನ  ಬಿಟ್ಟುಹೋಗಿ ಒಂದು ತಿಂಗಳ ಮೇಲಾಯಿತು! ಏನು? ಅಯ್ಯೋ ಪಾಪ ಅಂದರ? ರೀ, ಪಾಪ ಏನಿಲ್ಲ, ಜಾಸ್ತಿ ಸ೦ಬಳ ಮತ್ತು ಕಮ್ಮಿ ಕೆಲ್ಸಕ್ಕೆ ಬೇರೆ ಕಂಪನಿ ಸೇರಿದ್ದಾರೆ ಅಷ್ಟೆ.

ಧಣಿಗಳು ಯಾರು ಅಂದ್ರ? ಅವರೇ ರೀ, ನಮ್ಮ ರಘು ದೇಸಾಯಿ. ಅವರು ನೋಡಕ್ಕೆ ಸಣ್ಣಕ್ಕೆ ಇದಾರೆ ಅಷ್ಟೆ. ಎಕರೆಗಟ್ಟಲೆ ಜಮೀನಿನ ಸರದಾರ. ಅದಕ್ಕೆ ನಾವು ಅವರನ್ನ  ಶಾರ್ಟ್ ಅಂಡ್ ಸ್ವೀಟ್ ಆಗಿ ಧಣಿಗಳು ಅಂತ ಕರೀತೀವಿ. ಅವರಿಗೆ ನಾನು ಮು೦ಚೆ ಇ೦ದಾನು ಹೇಳ್ತಾನೆ ಇದ್ದೆ.

"ರೀ ರಘು, peanuts ಗೋಸ್ಕರ ಇಲ್ಲಿಗೆ ಯಾಕೆ ಕೆಲ್ಸಕ್ಕೆ ಬರ್ತೀರಾ? ನಿಮ್ಮ ಜಮೀನಲ್ಲೇ ಕಡಲೆ ಕಾಯಿ ಬೆಳದ್ರೆ ಆಗೋಲ್ವ?" ಅ೦ತ. ಈಗ ಇಲ್ಲಿ ಕೊಡ್ತಿರೋ peanuts ತುಂಬಾ ಸಣ್ಣದು. ಬೇರೆ ಕಂಪನಿಲಿ high breed peanuts ಅನ್ಕೊಂಡು ಹೋಗಿದಾರೆ. ಹೋಗಿ ಒಂದೇ ತಿಂಗಳು. ಮೊನ್ನೆ ಮಾತಾಡ್ತಾ ಕೇಳ್ತಾರೆ,

"Anitha, Is there any vacancy in Ladies in your company?" ಅ೦ತ. ನಂಗೆ ಗಾಬರಿ ಆ ಗೊಯಿತು. ಇದೇನಪ್ಪ, ಇಲ್ಲಿರೋವರೆಗೂ ಧಣಿಗಳು ಸರೀಗೆ ಇದ್ರು. ಈಗ vacancy in ladies ಅಂತೆಲ್ಲ ಮತಾಡ್ತಾರೆ. ಒಳ್ಳೆಯೋರ ತರಾನೆ ಕ೦ಡಿದ್ರಲ್ಲ ನಂಗೆ ಅನ್ಕೊತ ಇದ್ದೆ. ಆಮೇಲೆ ಹೊಳೀತು, ' Is there any vacancy in Landis in your company' ಗೆ ಸ್ಪೆಲ್ಲಿಂಗ್ mistake ಆಗೋಗಿದೆ ಅ೦ತ.

ನೋಡಿ, ಒಂದು ಸ್ಪೆಲ್ಲಿಂಗ್ ಏನೆಲ್ಲಾ ತೊಂದರೆಗಳನ್ನು create ಮಾಡಬಹುದು!

Thursday, May 10, 2012

When you enjoy work, work is worship; otherwise its like warship!!

Friday, July 29, 2011

Sunday, February 27, 2011

Saturday, August 28, 2010

The more you mature, the more you plan; The more you plan, less you execute!!!

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...