ರುಚಿ ರುಚಿ ಸಿಹಿ ಸಿಹಿ ಐಸ್ ಕ್ರೀಮು
ವಿಧವಿಧ ಸ್ವಾದದ ಐಸ್ ಕ್ರೀಮು
ಬಣ್ಣ ಬಣ್ಣದ ಐಸ್ ಕ್ರೀಮು
ಹಣ್ಣಿನ ರಸದ ಐಸ್ ಕ್ರೀಮು
ಹಾಲಲಿ ಮಾಡಿದ ಐಸ್ ಕ್ರೀಮು
ಚಾಕೊಲೇಟ್ ಡ್ರೈ ಪ್ರೂಟ್ಸ್ ಐಸ್ ಕ್ರೀಮು
ನನಗೂ ಇಷ್ಟ ಐಸ್ ಕ್ರೀಮು
ಕಪ್ಪಲಿ ಕೊಟ್ಟರೆ ಕಪ್ ಐಸ್ ಕ್ರೀಮು
ಕೋನಲಿ ಇಟ್ಟರೆ ಕೋನ್ ಐಸ್ ಕ್ರೀಮು
ಕಡ್ಡಿಗೆ ಅಂಟಿಸೆ ಐಸ್ ಕ್ಯಾಂಡಿ
ತಿಂದರೆ ಬಾಯೆಲ್ಲ ಥಂಡಿ ಥಂಡಿ
ಐಸ್ ಕ್ರೀಮು ರಾಜ ಗಡ್ಬಡ್ಡು
ಹಣ್ಣಲಿ ಬೆರೆತರೆ ಪ್ರೂಟ್ ಸಲಾಡು
ಕರಗಲು ಬಿಟ್ಟರೆ ಮಿಲ್ಕ್ ಶೇಕು
ಬಿಸಿಲಿನ ತಾಪಕೆ ಇದು ಬೇಕು
ಬೇಸಿಗೆ ಕಾಲದಿ ಇದು ಇಷ್ಟ
ಚಳಿಯಲಿ ತಿಂದರೆ ಕೊಂಚ ಕಷ್ಟ
ಕಂಡರೆ ಬಾಯಲಿ ನೀರೂರತ್ತೆ
ತಿಂದರೆ ಮನಕೆ ಖುಷಿ ಆಗುತ್ತೆ
No comments:
Post a Comment