ಅಲೆ.. ಅಲೆ ಅಲೆ ಅಲೆ...
ಅಲೆ..,,,,, ಅಲೆ ಅಲೆ ಅಲೆ...
ಪ್ರತಿ ವೀಕೆಂಡು ನಾನು ಅಲೆಯುತ್ತಿದ್ದೆ
ಕಾಡುಮೇಡು ಊರುಕೇರಿ ಅಲೆಯುತ್ತಿದ್ದೆ
ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆಯುತ್ತಿದ್ದೆ
ಮನೆಯಲ್ಲಿ ಬೈಸಿಕೊಂಡು ಅಲೆಯುತ್ತಿದ್ದೆ
ಅಲೆ.. ಅಲೆ ಅಲೆ ಅಲೆ...
ಅಲೆ..,,,,, ಅಲೆ ಅಲೆ ಅಲೆ...
ಎಲ್ಲಿಂದ ಬಂತಪ್ಪ ಈ ಕರೋನ ಅಲೆ
ಒಂದು ಸಾಕಾಗಲಿಲ್ಲ ಅಂತ ಎರಡನೇ ಅಲೆ
ಸಾವುನೋವು ತೋರಿಸ್ಕೊತ ಭಯಾನಕ ಅಲೆ
ಬರುತ್ತಂತೆ ಸದ್ಯದಲ್ಲೇ ಮೂರನೆಯ ಅಲೆ
ಅಲೆ.. ಕರೋನ ಅಲೆ...
ಅಲೆ..,,,,, ಕರೋನ ಅಲೆ...
ಕೇಳಿನೋಡಿ ಆಡಿದ್ದೇ ಸಮುದ್ರದ ಅಲೆ
ಬಿದ್ದು ಎದ್ದು ಅನುಭವಿಸಿದ್ದೆ ಪ್ರೀತಿಯ ಅಲೆ
ಮನುಷ್ಯನ ಬದುಕಿನ ಪ್ರಶ್ನೆ ಏಳಿಸಿದ ಅಲೆ
ಜೀವಕ್ಕಿಂದ ಬೇರೆ ಇಲ್ಲ ಅರಿವಿನ ಅಲೆ
ಅಲೆ.. ಕರೋನ ಅಲೆ...
ಅಲೆ..,,,,, ಕರೋನ ಅಲೆ...
ಬದುಕಬೇಕು ಅಂತ ಆಸೆ ನಿಮಗೇನಾದ್ರು ಇದ್ರೆ
ಬೇಗ ನೀವು ಲಸಿಕೆನ ಹಾಕಿಸ್ಕೊಳಿ ತಪ್ಪದೆ
ಮಾಸ್ಕು ಸ್ಯಾನಿಟೈಝೆರ್ ಮಾತ್ರ ಎಂದು ಮರೀಬೇಡಿ
ಸೋಶಿಯಲ್ ಡಿಸ್ಟಾನ್ಸಿನ್ಗ್ ಕಂಟಿನ್ಯೂ ಮಾಡಿ
ಅಲೆ.. ಅಲೆ ಅಲೆ ಅಲೆ...
ಅಲೆ..,,,,, ಕರೋನ ಅಲೆ...
ಜೀವಕ್ಕಿಂತ ದೊಡ್ಡದು ಬೇರೆ ಏನು ಇಲ್ಲ
ಜೀವ ಇದ್ರೆ ಜೀವನ ಯಶಸ್ಸು ಹೆಸರು ಎಲ್ಲ
ಬೀಸೋ ದೊಣ್ಣೆ ಇಂದ ತಪ್ಪಿಸ್ಕೊಂಡ್ರೆ ನೂರು ವರ್ಷ ಆಯಸ್ಸಂತೆ
ಅಲೆ.. ಅಲೆ ಅಲೆ ಅಲೆ...
ಅಲೆ...... ಅಲೆ ಅಲೆ ಅಲೆ...
No comments:
Post a Comment