ಕೆಲವು ನೆನಪುಗಳು ಸುಂದರ ಹಾಗು ಸುಮಧುರ. ಈ ಮಧುರ ನೆನಪುಗಳ ಒಂದು ಗೆರೆ ತಲೆಯಲ್ಲಿ ಮೂಡುತ್ತಿದ್ದಂತೆ ಮುಖದಲ್ಲಿ ಮಂದಹಾಸ ಸುಳಿಯುತ್ತೆ. ನನಗೆ ಈ ತರದ ಸುಮಧುರ ನೆನಪುಗಳಲ್ಲಿ, ಕಾಲೇಜಿನ ನೆನಪುಗಳೇ ಹೆಚ್ಚು.
ನಾನು ಸಣ್ಣ ಊರುಗಳಲ್ಲಿ ಬೆಳೆದವಳು. ಆಗಿನ ಕಾಲದಲ್ಲಿ ತಂತ್ರಜ್ಞಾನ ಹಾಗು ಮಾಧ್ಯಮಗಳ ಗಲಾಟೆ ಅಷ್ಟಿರಲಿಲ್ಲ. ಹೀಗಾಗಿ, ಶಾಲೆ ಮತ್ತು ಶಾಲೆಯ ಗ್ರಂಥಾಲಯ, ದಿನಪತ್ರಿಕೆಗಳಷ್ಟೇ ನಮ್ಮ ಮಾಹಿತಿಯ ಬಂಢಾರ ಆಗಿದ್ದವು. ವಯಸ್ಸಿಗೆ ತಕ್ಕ ಜ್ಞಾನ ಇದ್ದದ್ದು ಅಷ್ಟಕ್ಕಷ್ಟೇ. ಸುಮಾರು ವರ್ಷ ಓದಿದ್ದು ಕನ್ನಡ ಮಾಧ್ಯಮ. ಇಂಜಿನೀರಿಂಗ್ ಗೆ ಬಂದರೂ, ಇಂಗ್ಲಿಷ್ನಲ್ಲಿ ಮಾತನಾಡುವ ವಿಶ್ವಾಸ ಮೂಡಿರಲಿಲ್ಲ. ಈ ತರದ ಇನ್ನು ಹಲವಾರು ಮಿತಿಗಳಿದ್ದರೂ, ಸಂತೋಷಕ್ಕೆ ಮತ್ತು ಧೈರ್ಯಕ್ಕೆ ಮಿತಿಯಿರಲಿಲ್ಲ. ಪ್ರತಿದಿನ ನವನವೀನವಾಗಿರ್ತಾ ಇತ್ತು.
ಇಲ್ಲಿ, ನನ್ನ ಕಾಲೇಜು ದಿನಗಳ ಕೆಲವು ಅನುಭವಗಳನ್ನ ನಿಮ್ಮೊಡನೆ ಹಂಚಿಕೊಳ್ಳಲು ಬಯಸುವೆ. ನಿಮಗೂ ಇಂತಹುದೇ ಅನುಭವಗಳಾಗಿದ್ದಿರಬಹುದು. ಓದಿ, ನಿಮ್ಮ ಅನಿಸಿಕೆ ತಿಳಿಸಿ.
ನಾನು ಇಂಜಿನಿಯರಿಂಗ್ ಮಾಡಿದ್ದು ಹಾಸನದ ಮಲೆನಾಡು ಕಾಲೇಜಿನಲ್ಲಿ. ನಮ್ಮಪ್ಪನಿಗೆ, ನನ್ನ ಸೇರಿಸಬೇಕಾದ ಕಾಲೇಜಿನ ಪೂರ್ವಾಪೇಕ್ಷಿತ (prerequisite) ಏನಪ್ಪಾ ಅಂದ್ರೆ, ಕಾಲೇಜಿನಲ್ಲಿ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಇರಬೇಕು ಅಂತ!! ಮಲೆನಾಡು ಕಾಲೇಜು ಈ ಪರೀಕ್ಷೇಲಿ ಪಾಸಾಗಿ, ನನ್ನ ಅಡ್ಮಿಶನ್ ಆಯಿತು.
ಊರು ಹೊಸದು, ಜನ ಹೊಸಬರು. ಒಂದುಕಡೆ ಉತ್ಸಾಹ ಇನ್ನೊಂದೆಡೆ ಹೆದರಿಕೆ. ಸೇರಿ ಒಂದು ವಾರಕ್ಕೆ ಕೆಲವರು ಸ್ನೇಹಿರತಾದರು. ಹೊಸ ಊರಲ್ಲಿ, ನಮಗೆ ನಮ್ಮವರು ತಮ್ಮವರು ಇಲ್ಲದ ಕಡೆ, ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ವಲ್ಪ ಸುಲಭ. ಬೇರೆ ಆಯ್ಕೆ ಇರಲ್ಲವಲ್ಲ!
ನನ್ನ ಹೊಸ ಗೆಳೆಯ ಗೆಳತಿಯರೆಲ್ಲ ಭಯದಿಂದ "ragging" ಬಗ್ಗೆ ಮಾತಾಡುತ್ತಿದ್ದರು. ಹಿರಿಯ ಸಹಪಾಠಿಗಳು, ಹೊಸದಾಗಿ ಸೇರಿದ ಕಿರಿಯರಿಗೆ 'rag' ಮಾಡ್ತಾರಂತೆ. ಅವರು ಹೇಳಿದ ಹಾಗೆ ಕೇಳಬೇಕಂತೆ. ಇಲ್ಲ ಅಂದ್ರೆ ಶಿಕ್ಷೆ ಇರುತ್ತಂತೆ. ಅದರಲ್ಲೂ, ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಇರುವವರಿಗೆ ಭಯಂಕರವಾಗಿ 'rag' ಮಾಡ್ತಾರಂತೆ. ನಾನೋ, 'rag' ಅನ್ನೋ ಪದ ಕೇಳಿದ್ದೆ ಮೊದಲ ಸಲ. ನಾನು ಕುತೂಹಲದಿಂದ, 'ragging' ಅಂದ್ರೆ ಏನು ಮಾಡ್ತಾರೆ? ಯಾಕೆ ನೀವೆಲ್ಲ ಇಷ್ಟು ಹೆದರಿದೀರಾ ಅಂತ ವಿಚಾರಿಸಿದೆ. ಒಬ್ಬೊಬ್ಬರು ಒಂದೊಂದು ಹೇಳಿದರು. ಹಿರಿಯ ಸಹಪಾಠಿಗಳನ್ನು, 'sir', 'maam' ಅಂತ ಕರೆಯಬೇಕಂತೆ. ಅವರು ಸಿಕ್ಕ ತಕ್ಷಣ ಸಲ್ಯೂಟ್ ಹೊಡೆದು 'ಗುಡ್ ಮಾರ್ನಿಂಗ್ ' / 'ಗುಡ್ ಇವಿನಿಂಗ್' ಹೇಳಬೇಕಂತೆ ಅಂತ ಕೆಲವರು ಹೇಳಿದರು. ನಾನು, ಇದಕ್ಕೆ ಯಾಕೆ ಹೆದರಬೇಕು, ಸ್ವಲ್ಪ ದಿನ ಹೇಳಿದನ್ನು ಮಾಡಿ ಸ್ವಲ್ಪ ಮಜಾ ತೊಗೊಂಡರೆ ಆಯಿತು ಅನ್ಕೊಂಡೆ. ಇನ್ನು ಕೆಲವರು, ಹಿರಿಯರ ಕೊಠಡಿ ಸ್ವಚ್ಛ ಮಾಡಿ ಕೊಡಬೇಕಂತೆ, ಅಶ್ಲೀಲ ಪ್ರಶ್ನೆಗಳನ್ನ ಕೇಳ್ತಾರಂತೆ ಅಂತ ಹೇಳಿದ್ರು. ನಾನು ಇದೆಲ್ಲ ಕೇಳಿದ್ರೆ ಆಗಲ್ಲ, ಹೀಗೆ ಮುಂದುವರೆದರೆ ಉಪನ್ಯಾಸಕರಿಗೆ ನಿಮ್ಮ ಮೇಲೆ ದೂರು ಕೊಡಬೇಕಾಗತ್ತೆ ಅಂತ ಹೆದರಿಸೋಣ ಅಂತ ಮನಸ್ಸಲ್ಲೇ ನಿರ್ಧಾರ ಮಾಡಿದೆ. ಮಾಡಿ, ನನ್ನ ಸರದಿಗಾಗಿ ಕುತೂಹಲದಿಂದ ಕಾದೆ.
"ragging" ಇನ್ನೊಂದು ಪ್ರಮಾಣಿತ ಪ್ರೋಟೋಕಾಲ್ ಅಂದ್ರೆ, ಹಿರಿಯ ಸಹಪಾಠಿ ಹುಡುಗರು, ಕಿರಿಯ ಸಹಪಾಠಿ ಹುಡುಗರಿಗೆ,ತಮಗೆ ಇಷ್ಟ ಆದ ಕಿರಿಯ ಸಹಪಾಠಿ ಹುಡುಗಿಯರ ಹೆಸರು, ವಿಳಾಸ, ಹುಟ್ಟಿದ ವರ್ಷ, ದಿನ ಹೀಗೆ ಇನ್ನು ಕೆಲವು ವಿವರಗಳನ್ನು ಕೇಳಿ ತರುವುದಕ್ಕೆ ಹೇಳುವುದು.
ಅಂತೂ ಇಂತೂ ನನ್ನ ಸರದಿ ಬೇಗನೆ ಬಂತು.
ಒಂದು ದಿನ ನನ್ನ ಸಹಪಾಠಿಯೊಬ್ಬ ಬಂದು "ನಿನ್ನಿಂದ ಒಂದು ಸಹಾಯ ಆಗಬೇಕು. ನನಗೆ ವಿದ್ಯಾರ್ಥಿ ನಿಲಯದಲ್ಲಿ, 'ragging' ಮಾಡ್ತಾ ಇದಾರೆ. ನಿನ್ನ ಕೆಲವು ವಿವರಗಳನ್ನು ತರಕ್ಕೆ ಹೇಳಿದರೆ. ದಯವಿಟ್ಟು ಈ ಎಲ್ಲ ವಿವರಗಳನ್ನು ಕೊಡು ಅಂತ" ಒಂದು ಲಿಸ್ಟ್ ಕೊಟ್ಟ. ನಾನು, ಇದ್ಯಾರಪ್ಪಾ, ನನ್ನ ವಿವರಗಳನ್ನು ಕೇಳೋವರು ಅಂತ ಕುತೂಹಲವಾಗಿ, "ಯಾರು ಈ ವಿವರಗಳನ್ನು ಕೇಳಿದ್ದು" ಅಂತ ಕೇಳಿದೆ. ಅದಕ್ಕೆ ಅವನು, " ಹೆಸರು ಹೇಳೋ ಹಾಗಿಲ್ಲವಂತೆ". ಅದಕ್ಕೆ ನಾನು, "ಹೆಸರು ಹೇಳದಿದ್ದರೆ, ವಿವರಗಳು ಸಿಗಲ್ಲ" ಅಂದೆ. ಕೊನೆಗೆ ಅವನು ಸೋತು ಹೆಸರನ್ನು ಹೇಳಿದ.
ಈ ಮಲೆನಾಡು ಕಾಲೇಜಲ್ಲಿ ನನ್ನ ಪ್ರೌಢ ಶಾಲೆಯಲ್ಲಿ ಓದಿದ ಒಬ್ಬ ಹಿರಿಯ ಸಹಪಾಠಿ ಇದ್ದ. ನಮ್ಮಿರದ್ದು ಸ್ವಲ್ಪ ಚರಿತ್ರೆ ಇತ್ತು. ಅವನು ನನಗೆ ಪ್ರೊಪೋಸ್ ಮಾಡಿ ನಾನು ಇಲ್ಲ ಅಂದು ಪ್ರೌಢ ಶಾಲೆಯಲ್ಲಿ ಮಾತು ಬಿಟ್ಟಿದ್ದೆವು. ಈ ಕಾಲೇಜಿನಲ್ಲಿ, ಅವನು ನಂಗೆ ಕಾಟ ಕೊಡಕ್ಕೆ ನಿರ್ಧರಿಸಿದ ಹಾಗಿತ್ತು. ಹಾಗಾಗಿ, ನನ್ನ ಹಳೆ ಹಿರಿಯ ಸಹಪಾಠಿ, ನನ್ನ ತರಗತಿಯಲ್ಲಿದ್ದ ಒಬ್ಬನಿಗೆ ನನ್ನ ಕೆಲವು ವಿವರಗಳನ್ನು(ಹೆಸರು, ಹುಟ್ಟಿದ ವರ್ಷ, ದಿನಾಂಕ, SSLC ಮಾರ್ಕ್ಸ್ಇತ್ಯಾದಿ) ತರೋದಕ್ಕೆ ಹೇಳಿದ್ದಾನೆ.
ನಾನು ನನ್ನ ಸಹಪಾಠಿಗೆ " ಈ ಲಿಸ್ಟ್ ಅಲ್ಲಿ ಇರೋ ಎಲ್ಲ ವಿವರಗಳು ಅವನಿಗೆ ತಿಳಿದಿವೆ. ಹಾಗಾಗಿ ಮತ್ತೆ ಹೇಳೋ ಅವಶ್ಯಕತೆ ಇಲ್ಲ. ನಾ ಹೀಗೆ ಹೇಳಿದೆ ಅಂತ ಹೋಗಿ ಹೇಳು ಅಂದೆ"
ಮಾರನೆ ದಿನ ಮತ್ತೆ ಬಂದ. "ಈ ವಿವರಗಳನ್ನೆಲ್ಲ ಬರೆದು ಕೊಡಬೇಕಂತೆ, ಅಂತ ಚೀಟಿ ಕೊಟ್ಟ. ನೀವು ಇದಕ್ಕೆ ಉತ್ತರಿಸದಿದ್ರೆ ನಂಗೆ ಅವರು ಹಿಂಸೆ ಮಾಡ್ತಾರೆ" ಅಂದ.
ನಾನು "ಅವನಿಗೆ ಹೇಳು, ನಾನು ಹೆಸರು ಬದಲಿಸಿಲ್ಲ. ನನ್ನ ಹುಟ್ಟಿದ ದಿನಾಂಕ , SSLC ಮಾರ್ಕ್ಸ್ ಎಷ್ಟು ವರ್ಷ ಆದರು ಬದಲಾಗಲ್ಲ. ಇದಕ್ಕೂ ಮಿಗಿಲಾಗಿ ಇನ್ನೂ ಏನಾದ್ರು ಬೇರೆ ವಿವರ ಬೇಕಿದ್ರೆ, ನನ್ನ ನೇರವಾಗಿ ಕೇಳಬೇಕಂತೆ"
ನನ್ನ ಹಿರಿಯ ಸಹಪಾಠಿಗಳಿಗೆ ಯಾಕೋ ಸಾಕಾಗಿ, ಅಲ್ಲಿಗೆ ಈ ಘಟನೆಗೆ ಮುಕ್ತಾಯ ಹಾಡಿದರು.
ಈ ಘಟನೆ ನನಗೆ ನನ್ನ ಮೇಲೆ ಜಾಸ್ತಿ ವಿಶ್ವಾಸ ಮೂಡಿಸಿತು. 'ragging ' ಮಾಡಿಸ್ಕೊಳೋರು ಸಹ ಮಜಾ ತೊಗೋಬಹುದು ಅನ್ನಿಸಿತು.
ಒಂದು ದಿನ ತರಗತಿ ಮುಗಿಸಿ ನಾನು ನನ್ನ ಗೆಳತೀ ಸೈಕಲ್ ಸ್ಟಾಂಡ್ ಇಂದ ಸೈಕಲ್ ತಳ್ಳಿಕೊಂಡು ಮುಖ್ಯ ಗೇಟ್ ಕಡೆ ಬರ್ತಾ ಇದ್ವಿ. ಮೂರು ನಾಕು ಜನ ಹುಡುಗರು ನಮ್ಮ ಕಡೆ ಬಂದರು. ನನ್ನ ಗೆಳತೀ 'ಅನಿ, ಇವರು ನಮ್ಮನ್ನ 'rag' ಮಾಡಕ್ಕೆ ಬರ್ತಾ ಇದಾರೆ ಅನ್ನಿಸುತ್ತೆ' ಅಂತ ಅರ್ಧ ಅಳು ದನೀಲಿ ಹೇಳಿದಳು. ನಾನು, ಯಾಕೆ ಹೆದರ್ತೀಯ, ಕ್ಯಾಂಪಸ್ ಒಳಗೆ ಇದೀವಿ. ಏನ್ ಮಹಾ ಮಾಡಕ್ಕೆ ಆಗತ್ತೆ ಅವರಿಗೆ. ನೋಡೇ ಬಿಡೋಣ ಬಿಡು ಅಂದೆ.
ಹುಡುಗರು ಬಂದರು. ನಮ್ಮಿಬ್ಬರ ಹೆಸರು, ಬ್ರಾಂಚ್ ಮತ್ತು ಊರು ಕೇಳಿದರು. ಹೇಳಿದ ನಂತರ ನನ್ನ ಗೆಳತಿಗೆ A B C D ಹೇಳು ಅಂದರು. ಅಷ್ಟಕ್ಕೇ ಅವಳು ಆಳಕ್ಕೆ ಶುರು ಮಾಡಿದಳು. ನಾನು ಬೇಗ ಹೇಳು ಮಾರಾಯಿತಿ, ಇದಕ್ಕೆ ಯಾಕೆ ಅಳ್ತಿ ಅಂದೆ. ಅಳ್ತಾನೆ A B C D ಮುಗ್ಸಿದ್ಲು.
ಮುಂದೆ ನನ್ನ ಸರದಿ. ನಾನು ತಯಾರಾಗಿದ್ದೆ.
ನನಗೆ A B C D ಹೇಳು ಅಂದ್ರು. ಕೆಲವೊಂದು ಸಲ ನನ್ನ ತಲೆ ಹಠಾತ್ ಆಗಿ ನನಗೆ ಗೊತ್ತಿಲ್ಲದ ಪ್ರತಿಕ್ರಿಯೆ ಕೊಟ್ಟಿಬಿಡತ್ತೆ. ಅವರು A B C D ಹೇಳು ಅಂದ ತಕ್ಷಣ, ನಾನು "'ಕ್ಯಾಪಿಟಲ್' ಓ , 'ಸ್ಮಾಲ್' ಓ? ಅಂದುಬಿಟ್ಟಿದ್ದೆ. ನನ್ನ ಪ್ರಶ್ನೆಗೆ ನನಗೆ ನಗು. ನನ್ನ ಹಿರಿಯ ಸಹಪಾಠಿಗಳಿಗೆ ಆಶ್ಚರ್ಯ ಮತ್ತು ನಗು ಒಟ್ಟೊಟ್ಟಿಗೆ. "ಮೊದಲು 'ಕ್ಯಾಪಿಟಲ್' ಹೇಳು, ಆಮೇಲೆ 'ಸ್ಮಾಲ್'" ಅಂದ್ರು. ನಾನು ಉಚ್ಚ ಸ್ವರದಲ್ಲಿ 'ಕ್ಯಾಪಿಟಲ್' A B C D ಹೇಳಿ, ಮೆಲುದನಿಯಲ್ಲಿ 'ಸ್ಮಾಲ್' A B C D ಹೇಳಿದೆ. ಅವರು ಸರಿ ಅಂತ ಹೊರಟರು. ನಾನು ಸುಮ್ಮನಿರಲಾಲಾರದೆ, "ಅ ಆ ಇ ಈ " ಬೇಡವಾ?" ಅಂದೆ(ಅಲ್ಲೂ ಕನ್ನಡ ಪ್ರೇಮ!!). ಅವರು ಒಂದು ಸರ್ತಿ ನನ್ನ ಗುರಾಯಿಸಿದ್ರು. ನನ್ನ ಗೆಳತಿ, ನನ್ನ ಕೈ ಗಿಂಡತ ಇದ್ಲು, ಸುಮ್ನಿರೇ ಅಂತ. ಆಮೇಲೆ, ಅವರು, " ಇವತ್ತಿಗೆ ಇಷ್ಟು ಸಾಕು" ಅಂದು ಹೊರಟರು.
ನನ್ನ ಗೆಳತಿ, ಅಳು ಮರೆತು ನಕ್ಕೋತ್ತಾ "ಅನಿ , ನೀ ಬರೀ ತರಲೆ ಕಣೇ ! " ಅಂತ ಸೈಕಲ್ ಏರಿ ಹೋದಳು.
ಕೆಲವೊಮ್ಮೆ ಗಂಭೀರ ಸನ್ನಿವೇಶಗಳಲ್ಲಿ ಹಾಸ್ಯ ಭಾವನೆಗಳನ್ನು ತಿಳಿ ಮಾಡಿ ನಮಗೆ ಬೇಕಾದ ಪ್ರತಿಕ್ರಿಯೆಯನ್ನು ಕೊಡಿಸುತ್ತೆ.

This comment has been removed by the author.
ReplyDeleteVery nice Ani....Enjoyed reading it....:)
ReplyDeleteSuper anitha
ReplyDelete😍👍👌
ReplyDeleteNice Anitha
ReplyDelete